ಆ್ಯಪ್ನಗರ

ಲಾಕ್‌ಡೌನ್‌ ಅವಧಿಯಲ್ಲಿ ರಫ್ತು ಹೆಚ್ಚಳ: ಆಮದು ಗಣನೀಯ ಇಳಿಕೆ

ಪ್ರಸಕ್ತ ಸಾಲಿನಲ್ಲಿ ಚಾಲ್ತಿ ಖಾತೆಯಲ್ಲಿ ಹೆಚ್ಚುವರಿ ದಾಖಲಿಸುವ ಸಾಧ್ಯತೆ ಇದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ. ವಿ. ಸುಬ್ರಮಣಿಯನ್‌ ತಿಳಿಸಿದ್ದಾರೆ. ಆಮದು ಇಳಿಕೆಯಾಗಿರುವುದು ಇದಕ್ಕೆ ಕಾರಣ ಎಂದಿದ್ದಾರೆ.

Vijaya Karnataka Web 23 Nov 2020, 7:41 pm
ಹೊಸದಿಲ್ಲಿ: ಪ್ರಸಕ್ತ ಸಾಲಿನಲ್ಲಿ ಚಾಲ್ತಿ ಖಾತೆಯಲ್ಲಿ ಹೆಚ್ಚುವರಿ ದಾಖಲಿಸುವ ಸಾಧ್ಯತೆ ಇದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ. ವಿ. ಸುಬ್ರಮಣಿಯನ್‌ ತಿಳಿಸಿದ್ದಾರೆ. ಆಮದು ಇಳಿಕೆಯಾಗಿರುವುದು ಇದಕ್ಕೆ ಕಾರಣ ಎಂದಿದ್ದಾರೆ.
Vijaya Karnataka Web export import
As per the notification, the present recommendation is not for imposition of additional duty. It is for withdrawal of a concession given earlier.


''ಕೋವಿಡ್‌ ಬೇಡಿಕೆಗೆ ನಕಾರಾತ್ಮಕ ಶಾಕ್‌ ಕೊಟ್ಟಿದೆ. ಇದರ ಪರಿಣಾಮ ಈ ವರ್ಷ ಆಮದು ರಫ್ತಿಗಿಂತಲೂ ಕಡಿಮೆಯಾಗುವ ನಿರೀಕ್ಷೆ ಇದೆ. ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ ಚಾಲ್ತಿ ಖಾತೆಯಲ್ಲಿ 20 ಶತಕೋಟಿ ಡಾಲರ್‌ ಹೆಚ್ಚಳ ದಾಖಲಾಗಿತ್ತು. ಈ ಟ್ರೆಂಡ್‌ ಸುದೀರ್ಘ ಕಾಲ ಇರುವ ಸಾಧ್ಯತೆ ಇಲ್ಲ. ಹೀಗಿದ್ದರೂ ಇನ್ನೂ ಕೆಲ ತಿಂಗಳು ಮುಂದುವರಿಯುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.

ಲಾಕ್‌ಡೌನ್‌ ನಂತರ ಜನತೆ ತಮ್ಮ ಖರ್ಚು ವೆಚ್ಚಗಳನ್ನು ಗಣನೀಯವಾಗಿ ಕಡಿತಗೊಳಿಸಿದ್ದಾರೆ. ಕಳೆದ ಮಾರ್ಚ್‌ನಿಂದ ಕೇಂದ್ರ ಸರಕಾರ ಬಡವರು ಹಾಗೂ ಉದ್ಯಮ ವಲಯದ ನೆರವಿಗೆ ಸರಣಿ ಉಪಕ್ರಮಗಳನ್ನು ಘೋಷಿಸಿದೆ. ಕೃಷಿ ಮತ್ತು ಕಾರ್ಮಿಕ ವಲಯದ ನೀತಿ ಸುಧಾರಣೆಗಳು ಆರ್ಥಿಕ ಚಟುವಟಿಕೆಗಳನ್ನು ಪ್ರೇರೇಪಿಸಲಿದೆ ಎಂದರು.

ಆರು ತಿಂಗಳ ನಂತರ ರಫ್ತಿನಲ್ಲಿ ಶೇ.5.27 ಹೆಚ್ಚಳ: ವಿದೇಶಿ ವಿನಿಮಯದಲ್ಲಿ ಚೇತರಿಕೆ

ಸರಕಾರ ಕೃಷಿ ಮತ್ತು ಉತ್ಪಾದನಾ ವಲಯದ ಚೇತರಿಕೆಗೆ ಆದ್ಯತೆ ನೀಡುತ್ತಿದೆ. ಆರ್ಥಿಕತೆಯನ್ನು ಸಂಘಟಿತಗೊಳಿಸಲು ಯತ್ನಿಸುತ್ತಿದೆ. ಇದು ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿದೆ.

ಕೋವಿಡ್‌-19 ಪರಿಣಾಮ ಆಮದು-ರಫ್ತು ಕುಸಿತ, ಚಾಲ್ತಿ ಖಾತೆ ಬ್ಯಾಲೆನ್ಸ್‌ ದಾಖಲೆ ಹೆಚ್ಚಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ