ಆ್ಯಪ್ನಗರ

ಫೇಸ್‌ಬುಕ್‌ನಲ್ಲಿ ನಿಮ್ಮ ಡೇಟಾ ಸೋರಿಕೆ

ಫೇಸ್‌ಬುಕ್‌ನಲ್ಲಿ ನೀವು ಹಂಚಿಕೊಳ್ಳುವ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗುತ್ತಿವೆ! ನಿಮ್ಮದು ಮಾತ್ರವಲ್ಲ ನಿಮ್ಮ ಸ್ನೇಹಿತರ ಡೇಟಾವನ್ನು ತನ್ನ ಪಾಲುದಾರ ...

PTI 5 Jun 2018, 5:00 am
ವಾಷಿಂಗ್ಟನ್‌: ಫೇಸ್‌ಬುಕ್‌ನಲ್ಲಿ ನೀವು ಹಂಚಿಕೊಳ್ಳುವ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗುತ್ತಿವೆ! ನಿಮ್ಮದು ಮಾತ್ರವಲ್ಲ ನಿಮ್ಮ ಸ್ನೇಹಿತರ ಡೇಟಾವನ್ನು ತನ್ನ ಪಾಲುದಾರ ಕಂಪನಿಗಳ ಜತೆ ಫೇಸ್‌ಬುಕ್‌ ಹಂಚಿಕೊಳ್ಳುತ್ತಿದೆ.
Vijaya Karnataka Web facebook gave firms broad access to data on users friends
ಫೇಸ್‌ಬುಕ್‌ನಲ್ಲಿ ನಿಮ್ಮ ಡೇಟಾ ಸೋರಿಕೆ


ಫೇಸ್‌ಬುಕ್‌ ಬಳಕೆದಾರರ ಡೇಟಾವನ್ನು ಬ್ರಿಟನ್‌ನ ಪೊಲಿಟಿಕಲ್‌ ಕನ್ಸಲ್ಟಿಂಗ್‌ ಕಂಪನಿಯಾದ ಕೇಂಬ್ರಿಡ್ಜ್‌ ಅನಾಲಿಟಿಕಾ ಬಳಸಿಕೊಂಡ ಸಂಗತಿ ಇತ್ತೀಚೆಗೆ ಬಯಲಾಗಿತ್ತು. ದೊಡ್ಡ ವಿವಾದವೇ ಸೃಷ್ಟಿಯಾಗಿ, ಫೇಸ್‌ಬುಕ್‌ನ ವಿಶ್ವಾಸಾರ್ಹತೆ ಬಗ್ಗೆ ಅಸಮಾಧಾನಗಳು ವ್ಯಕ್ತವಾಗಿದ್ದವು. ಅದಕ್ಕೆ ಪ್ರತಿಕ್ರಿಯಿಸಿದ್ದ ಫೇಸ್‌ಬುಕ್‌ ಸಿಇಒ ಮಾರ್ಕ್‌ ಜುಕರ್‌ಬರ್ಗ್‌ ತಮ್ಮ ಕಡೆಯಿಂದ ದೊಡ್ಡ ಪ್ರಮಾದವಾಗಿದೆ ಎಂದು ಒಪ್ಪಿಕೊಂಡಿದ್ದರು. ಕ್ಷಮೆಯನ್ನೂ ಯಾಚಿಸಿದ್ದರು. ಆದರೆ, 'ದಿ ನ್ಯೂಯಾರ್ಕ್‌ ಟೈಮ್ಸ್‌'ನ ವರದಿ ಗಮನಿಸಿದರೆ, ಡೇಟಾ ಸೋರಿಕೆ ಅಧಿಕೃತವಾಗಿಯೇ ನಡೆಯುತ್ತಿರುವುದು ಸ್ಪಷ್ಟವಾಗಿದೆ.

ತನ್ನ ಬಳಕೆದಾರರ ಡೇಟಾವನ್ನು ಹಂಚಿಕೆ ಮಾಡಿಕೊಳ್ಳಲು ಆ್ಯಪಲ್‌, ಮೈಕ್ರೊಸಾಫ್ಟ್‌, ಸ್ಯಾಮ್‌ಸಂಗ್‌ ಸೇರಿದಂತೆ 60ಕ್ಕೂ ಅಧಿಕ ಕಂಪನಿಗಳ ಜತೆ ಫೇಸ್‌ಬುಕ್‌ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 2004ರಲ್ಲಿ ಆರಂಭಗೊಂಡ ಫೇಸ್‌ಬುಕ್‌ನಲ್ಲಿ ಕೋಟ್ಯಂತರ ಬಳಕೆದಾರರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ