ಆ್ಯಪ್ನಗರ

ಷೇರು ಕುಸಿತದಲ್ಲೂ ಫೇಸ್‌ಬುಕ್‌ ದಾಖಲೆ

ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್‌ ಕಂಪನಿಯ ಷೇರು ಮಾರುಕಟ್ಟೆ ಮೌಲ್ಯದಲ್ಲಿ ಗುರುವಾರ ಒಂದೇ ದಿನ 10,000 ಕೋಟಿ ಡಾಲರ್‌ ಕರಗಿದ್ದು, ಅಮೆರಿಕದ ಷೇರು ಜಗತ್ತಿನ ಇತಿಹಾಸದಲ್ಲಿಯೇ ದಾಖಲೆಯ ಷೇರು ಮೌಲ್ಯ ಕುಸಿತವಾಗಿದೆ. ಇಲ್ಲಿಯತನಕ ಒಂದೇ ದಿನ ಕಂಪನಿಯೊಂದರ ಷೇರು ಮೌಲ್ಯ ಈ ರೀತಿ ಕುಸಿದಿದ್ದೇ ಇಲ್ಲ! ಹೀಗಾಗಿ ಯಾಕೆ ಇಂಥ ಮಹಾ ಪತನ ಸಂಭವಿಸಿದೆ ಎಂಬ ಚರ್ಚೆಗೆ ಗ್ರಾಸವಾಗಿದೆ.

Vijaya Karnataka 28 Jul 2018, 9:05 am
ನ್ಯೂಯಾರ್ಕ್‌: ಸಾಮಾಜಿಕ ಜಾಲತಾಣ ದಿಗ್ಗಜ ಫೇಸ್‌ಬುಕ್‌ ಕಂಪನಿಯ ಷೇರು ಮಾರುಕಟ್ಟೆ ಮೌಲ್ಯದಲ್ಲಿ ಗುರುವಾರ ಒಂದೇ ದಿನ 10,000 ಕೋಟಿ ಡಾಲರ್‌ ಕರಗಿದ್ದು, ಅಮೆರಿಕದ ಷೇರು ಜಗತ್ತಿನ ಇತಿಹಾಸದಲ್ಲಿಯೇ ದಾಖಲೆಯ ಷೇರು ಮೌಲ್ಯ ಕುಸಿತವಾಗಿದೆ. ಇಲ್ಲಿಯತನಕ ಒಂದೇ ದಿನ ಕಂಪನಿಯೊಂದರ ಷೇರು ಮೌಲ್ಯ ಈ ರೀತಿ ಕುಸಿದಿದ್ದೇ ಇಲ್ಲ! ಹೀಗಾಗಿ ಯಾಕೆ ಇಂಥ ಮಹಾ ಪತನ ಸಂಭವಿಸಿದೆ ಎಂಬ ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web Facebook


ವಿಶೇಷವೇನೆಂದರೆ ಫೇಸ್‌ಬುಕ್‌ 2018ರ ಎರಡನೇ ತ್ರೈಮಾಸಿಕದಲ್ಲಿ (ಏಪ್ರಿಲ್‌-ಜೂನ್‌) ತನ್ನ ಆದಾಯವನ್ನು ಶೇ.42ರಷ್ಟು ವೃದ್ಧಿಸಿತ್ತು. ಅದು 1320 ಕೋಟಿ ಡಾಲರ್‌ಗೂ ಅಧಿಕ ಆದಾಯ ಗಳಿಸಿತ್ತು. ಹೀಗಿದ್ದರೂ, ವಾಲ್‌ಸ್ಟ್ರೀಟ್‌ನ ನಿರೀಕ್ಷೆಯನ್ನು ಮುಟ್ಟಿರಲಿಲ್ಲ! ವಾಲ್‌ಸ್ಟ್ರೀಟ್‌ ಮಾರುಕಟ್ಟೆ 1330 ಕೋಟಿ ಡಾಲರ್‌ ಆದಾಯವನ್ನು ಅಂದಾಜಿಸಿತ್ತು. ಇದೀಗ ಫೇಸ್‌ಬುಕ್‌ ಷೇರು ದರದಲ್ಲಿ ಶೇ.20 ಕುಸಿದಿರುವುದರಿಂದ ಸ್ಥಾಪಕ, ಸಿಇಒ ಮಾರ್ಕ್‌ ಜುಕರ್‌ ಬರ್ಗ್‌ ಸಂಪತ್ತಿನಲ್ಲೂ 168 ಕೋಟಿ ಡಾಲರ್‌ ನಷ್ಟವಾಗಿದೆ.

ಒಂದು ಕಡೆ ಇತ್ತೀಚಿನ ತಿಂಗಳುಗಳಲ್ಲಿ ಫೇಸ್‌ಬುಕ್‌ ಅನ್ನು ಸುತ್ತಿಕೊಂಡಿರುವ ನಾನಾ ವಿವಾದಗಳು, ಮತ್ತೊಂದು ಕಡೆ ಫೇಸ್‌ಬುಕ್‌ ಬಳಕೆದಾರರ ಸಂಖ್ಯೆಯಲ್ಲಿ ಮಂದಗತಿಯ ಬೆಳವಣಿಗೆಯು, ಭವಿಷ್ಯದಲ್ಲಿ ಆದಾಯ ಕುಸಿತದ ಭೀತಿಯನ್ನು ಸೃಷ್ಟಿಸಿದೆ. ಮತ್ತೊಂದು ಕಡೆ ಫೇಸ್‌ಬುಕ್‌ ಮೂಲಕ ನಕಲಿ ಸುದ್ದಿ, ಹಾನಿಕಾರಕ ಸಂದೇಶಗಳ ಪ್ರಚಾರಕ್ಕೆ ತಡೆ ಒಡ್ಡುವ ನಿಟ್ಟಿನಲ್ಲಿ ಜುಕರ್‌ಬರ್ಗ್‌ ತಮ್ಮ ಅಸಹಾಯಕತೆಯನ್ನೂ ವ್ಯಕ್ತಪಡಿಸಿದ್ದಾರೆ.

ವಾಟ್ಸ್‌ ಆ್ಯಪ್‌, ಟ್ವಿಟರ್‌ ಮುಂತಾದ ಜಾಲತಾಣಗಳ ಮೂಲಕವೂ ನಕಲಿ ಸುದ್ದಿಗಳು ಪ್ರಚಾರವಾಗುತ್ತವೆ. ಅವುಗಳೂ ಇಂಥ ಅಪಪ್ರಚಾರವನ್ನು ತಡೆಯಲು ಹೋರಾಡುತ್ತಿವೆ. ಫೇಸ್‌ಬುಕ್‌ ಒಂದರಿಂದಲೇ ಇವುಗಳನ್ನು ತಡೆಯಲು ಸಾಧ್ಯವಿಲ್ಲ ಎಂದು ಜುಕರ್‌ಬರ್ಗ್‌ ಹೇಳಿದ್ದಾರೆ.

ಹೀಗಿದ್ದರೂ, ಫೇಸ್‌ಬುಕ್‌ ಷೇರು ದರ ಮತ್ತೆ ಸುಧಾರಿಸಲಿದೆ ಎಂದೂ ಕೆಲ ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ