ಆ್ಯಪ್ನಗರ

ನಕಲಿ ಬ್ಯಾಂಕ್ ಆ್ಯಪ್‌ಗಳಿಂದ ಸಾವಿರಾರು ಗ್ರಾಹಕರ ಮಾಹಿತಿ ಕಳವು: ವರದಿ

ಈ ನಕಲಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಆಯಾ ಬ್ಯಾಂಕುಗಳ ಲಾಂಛನವನ್ನು ಹೊಂದಿದ್ದು, ಇದರಿಂದ ಗ್ರಾಹಕ, ನಕಲಿ ಮತ್ತು ಅಸಲಿಗಳ ಆ್ಯಪ್‌ಗಳ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳಲು ಕಷ್ಟಕರವಾಗಿದೆ.

THE ECONOMIC TIMES 24 Oct 2018, 11:38 am
[This story originally published in The Economic Times on Oct 24, 2018]
Vijaya Karnataka Web SBI


ಹೊಸದಿಲ್ಲಿ:
ಎಸ್‌ಬಿಐ, ಐಸಿಐಸಿಐ, ಆಕ್ಸಿಸ್, ಸಿಟಿ ಮತ್ತು ಇತರ ಕೆಲವು ಪ್ರಮುಖ ಬ್ಯಾಂಕುಗಳ ನಕಲಿ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇನಲ್ಲಿ ಲಭ್ಯವಿದ್ದು, ಇವು ಸಾವಿರಾರು ಸಂಖ್ಯೆಯ ಬ್ಯಾಂಕ್ ಗ್ರಾಹಕರ ಮಾಹಿತಿಯನ್ನು ಕಳವು ಮಾಡಿರಬಹುದು ಎಂದು ಮಾಹಿತಿ ತಂತ್ರಜ್ಞಾನ (ಐಟಿ) ಭದ್ರತಾ ಸಂಸ್ಥೆ ಸೋಫೋಸ್ ಲ್ಯಾಬ್ಸ್ ವರದಿ ಮಾಡಿದೆ.

ಈ ನಕಲಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಆಯಾ ಬ್ಯಾಂಕುಗಳ ಲಾಂಛನವನ್ನು ಹೊಂದಿದ್ದು, ಇದರಿಂದ ಗ್ರಾಹಕ, ನಕಲಿ ಮತ್ತು ಅಸಲಿಗಳ ಆ್ಯಪ್‌ಗಳ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳಲು ಕಷ್ಟಕರವಾಗಿದೆ. ಹೀಗಾಗಿ ಸುಲಭವಾಗಿ ವಂಚನೆಗೊಳಗಾಗುತ್ತಿದ್ದಾನೆ. ಈ ಅಪ್ಲಿಕೇಶನ್‌ಗಳಲ್ಲಿನ ಮಾಲ್‌ವೇರ್ ಸಾವಿರಾರು ಗ್ರಾಹಕರ ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳನ್ನು ಕದ್ದಿದೆ ಎಂದು ವರದಿ ಹೇಳಿದೆ.

ಈ ವರದಿಯ ಸತ್ಯಾಸತ್ಯತೆ ತಿಳಿಯಲು ಉಲ್ಲೇಖಿಸಲಾದ ಕೆಲವು ಬ್ಯಾಂಕುಗಳನ್ನು ಸಂಪರ್ಕಿಸಿದಾಗ ಅವರು ಅಂತಹ ಯಾವುದೇ ನಕಲಿ ಅಪ್ಲಿಕೇಶನ್‌ಗಳು ನಮ್ಮ ಗಮನಕ್ಕೆ ಬಂದಿಲ್ಲ ಎಂದು ಹೇಳಿವೆ.

ಆದಾಗ್ಯೂ, ಕೆಲವು ಬ್ಯಾಂಕುಗಳು ತನಿಖೆಯನ್ನು ಪ್ರಾರಂಭಿಸಿದ್ದು ಮತ್ತು ಕಂಪ್ಯೂಟರ್ ಭದ್ರತಗೆ ಸಂಬಂಧಿಸಿದಂತೆ ಪರಿಶೀಲಿಸುವ ರಾಷ್ಟ್ರೀಯ ನೋಡಾಲ್ ಸಂಸ್ಥೆಯಾದ CERT-In ಗೆ ಮಾಹಿತಿ ನೀಡಿವೆ.

ಈ ಅಪ್ಲಿಕೇಶನ್‌ಗಳು ಎಸ್‌ಬಿಐ, ಐಸಿಐಸಿಐ, ಆಕ್ಸಿಸ್, ಸಿಟಿ , ಇಂಡಿಯನ್ ಓವರ್‌ಸಿಸ್, ಬಿಒಬಿ, ಯಸ್ ( 7 ಬ್ಯಾಂಕ್) ಗಳನ್ನು ಗುರಿಯಾಗಿಸಿಕೊಂಡಿವೆ ಎಂದು ವರದಿ ಹೇಳಿದೆ.

ಯಸ್ ಬ್ಯಾಂಕ್ ಈ ಕುರಿತು ಬ್ಯಾಂಕಿನ ಸೈಬರ್ ವಂಚನೆ ಇಲಾಖೆಗೆ ತಿಳಿಸಿದ್ದೇವೆ ಎಂದು ಹೇಳಿದೆ. ಆದರೆ ದೇಶದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಕುರಿತು ಇನ್ನು ಕೂಡ ಪ್ರತಿಕ್ರಿಯಿಸಿಲ್ಲ. ಐಸಿಐಸಿಐ ಮತ್ತು ಆಕ್ಸಿಸ್ ಸಹ ಈ ವರದಿ ಬಗ್ಗೆ ಇನ್ನು ಕೂಡ ಅಭಿಪ್ರಾಯ ವ್ಯಕ್ತಪಡಿಸಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ