ಆ್ಯಪ್ನಗರ

ಚುನಾವಣೆ ಪ್ರಣಾಳಿಕೆಯಿಂದ ಸಾಲಮನ್ನಾ ವಿಚಾರ ತೆಗೆದು ಹಾಕಬೇಕು: ರಘುರಾಮ್‌ ರಾಜನ್‌

ರಾಜ್ಯದಲ್ಲಿ ಜೆಡಿಎಸ್‌ ನೇತೃತ್ವದ ಸರಕಾರ ಚುನಾವಣೆಗು ಮುನ್ನ ಕೊಟ್ಟ ಭರವಸೆಯಂತೆ ರೈತರ ಸಾಲಮನ್ನಾ ಮಾಡಿತು. ರೈತರ ಸಾಲಮನ್ನಾ ಮಾಡದಿದ್ದರೆ ಉಗ್ರ ಹೋರಾಟ ನಡೆಸುತ್ತೇವೆ ಎಂದು ಬಿಜೆಪಿ ಭಾರಿ ಒತ್ತಡ ಹೇರಿತ್ತು. ಹೀಗೆ ಎಲ್ಲ ಪಕ್ಷಗಳು ರೈತರ ಸಾಲಮನ್ನಾ ಮಾಡಲು ಹವಣಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ರಾಷ್ಟ್ರದ ಆರ್ಥಿಕತೆ ಮೇಲೆ ಸಾಲಮನ್ನಾ ಹೇಗೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ರಘುರಾಮ್‌ ರಾಜನ್‌ ಬೆಳಕು ಚೆಲ್ಲಿದ್ದಾರೆ.

THE ECONOMIC TIMES 15 Dec 2018, 2:30 pm
ಹೊಸದಿಲ್ಲಿ: ಸಾಲಮನ್ನಾ ಯೋಜನೆಯಿಂದ ನಿಜಕ್ಕೂ ರೈತರ ಬದುಕು ಹಸನಾಗಿದೆಯೇ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ರಘುರಾಮ್‌ ರಾಜನ್‌ ಪ್ರಶ್ನಿಸಿದ್ದಾರೆ.
Vijaya Karnataka Web RBI Governor


ಚುನಾವಣೆ ಆಯೋಗಕ್ಕೆ ಪತ್ರ ಬರೆದಿರುವ ರಾಜನ್‌ ರಾಜಕೀಯ ಪಕ್ಷಗಳು ಸಾಲಮನ್ನಾ ಮಾಡುತ್ತಿರುವುದರಿಂದ ರಾಷ್ಟ್ರದ ಆರ್ಥಿಕತೆ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂದು ವಿವರಿಸಿದ್ದಾರೆ. ಸಾಲಮನ್ನಾ ಚುನಾವಣೆ ಭರವಸೆಗಳ ಪಟ್ಟಿಯಿಂದ ತೆಗೆದು ಹಾಕಬೇಕು ಎಂದು ಸಲಹೆ ನೀಡಿದ್ದಾರೆ.

ಆರ್ಥಿಕ ತಜ್ಞ ಅಭಿಜಿತ್‌ ಬ್ಯಾನರ್ಜಿ, ಪ್ರಂಜುಲ್‌ ಭಂಡಾರಿ, ಸಜ್ಜಿದ್‌ ಚಿನಾಯ್‌, ಮೈತ್ರೀಶ್‌ ಘಟಕ್‌, ಗೀತಾ ಗೋಪಿನಾಥ್‌, ಅಮರ್ಥ್ಯ ಲಹಿರಿ, ನೀಲಕಾಂತ್‌ ಮಿಶ್ರಾ, ಪ್ರಾಚಿ ಮಿಶ್ರಾ, ಕಾರ್ತಿಕ್‌ ಮುರಳಿದರನ್‌, ರೋಹಿಣಿ ಪಾಂಡೆ, ಈಶ್ವರ್‌ ಪ್ರಸಾದ್‌ ಮತ್ತು ಸೋಮನಾಥನ್‌ ಅವರ ಜತೆಗೂಡಿ ರಘುರಾಮ್‌ ರಾಜನ್‌ ಭಾರತದ ಆರ್ಥಿಕ ಕಾರ್ಯತಂತ್ರ ವರದಿಯನ್ನು ಸಿದ್ಧ ಪಡಿಸಿದ್ದಾರೆ.

ವರದಿಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಮುಂದಿನ 5 ವರ್ಷಗಳಲ್ಲಿ ಯಾವ ಆರ್ಥಿಕ ನೀತಿಗೆ ಪ್ರಾಮುಖ್ಯತೆ ನೀಡಬೇಕು ಎಂಬುದನ್ನು ವಿವರಿಸಿದ್ದಾರೆ. ಭಾರತದ ಆರ್ಥಿಕ ಸ್ಥಿತಿ ಅಭಿವೃದ್ಧಿಗಾಗಿ ನಡೆಸಿದ ಕಟು ವಿಶ್ಲೇಷಣೆ ಇದು. ಇದರ ಹಿಂದೆ ಯಾವುದೇ ಸರಕಾರ ಅಥವಾ ಪಕ್ಷವನ್ನು ಗುರಿಯಾಗಿಸಿಕೊಂಡಿಲ್ಲ ಎಂಬುದನ್ನು ರಾಜನ್‌ ಸ್ಪಷ್ಟಪಡಿಸಿದ್ದಾರೆ.

ಸಾಲಮನ್ನಾದಿಂದ ರಾಷ್ಟ್ರದ ಆರ್ಥಿಕತೆಗೆ ಪೆಟ್ಟು: ರಘುರಾಮ್‌ ರಾಜನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ