ಆ್ಯಪ್ನಗರ

ಲಾಕ್‌ಡೌನ್‌ ನಡುವೆ ರಸಗೊಬ್ಬರ ಮಾರಾಟ ಏರಿಕೆ, ಬಿತ್ತನೆಗೆ ರೈತರ ಭರ್ಜರಿ ತಯಾರಿ

ಕೊರೊನಾ ವೈರಸ್‌ ತಡೆ ನಿಟ್ಟಿನಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್‌ ನಡುವೆ ಕಳೆದ ಬಾರಿಗಿಂತ ಶೇ. 32ರಷ್ಟು ಅಧಿಕ ರಸಗೊಬ್ಬರ ಖರೀದಿ ವಹಿವಾಟು ನಡೆದಿದೆ. ರೈತರು ಭರ್ಜರಿಯಾಗೇ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ ಎಂಬುದು ತಿಳಿದುಬರುತ್ತಿದೆ.

Vijaya Karnataka Web 29 Apr 2020, 5:30 pm
- ಆರ್‌.ಸಿ.ಭಟ್‌, ಮಂಗಳೂರು
Vijaya Karnataka Web sprinkles

ಲಾಕ್‌ಡೌನ್‌ನಿಂದ ವ್ಯಾಪಾರ ವ್ಯವಹಾರ ತಳಕಚ್ಚಿದೆ. ಆದರೆ ಏಪ್ರಿಲ್‌ ತಿಂಗಳಿನಲ್ಲಿ ರಸಗೊಬ್ಬರ ಮಾರಾಟ ಮಾತ್ರ ದಾಖಲೆ ನಿರ್ಮಿಸಿದೆ. ಡೀಲರ್‌ಗಳು ಏಪ್ರಿಲ್‌1 ರಿಂದ 22ರ ತನಕ 15.77 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರವನ್ನು ಖರೀದಿಸಿದ್ದಾರೆ. ಇದು ಕಳೆದ ವರ್ಷದ ಏಪ್ರಿಲ್‌ ತಿಂಗಳಿಗೆ ಹೋಲಿಸಿದರೆ ಶೇ.46ರಷ್ಟು ಹೆಚ್ಚಳ ಎಂಬುದು ಗಮನಾರ್ಹ. ಕಳೆದ ಏಪ್ರಿಲ್‌ನಲ್ಲಿ10,79,212 ಮೆಟ್ರಿಕ್‌ ಟನ್‌ ರಸಗೊಬ್ಬರ ಖರೀದಿ ಆಗಿತ್ತು.

ಇನ್ನು ಡೀಲರ್‌ಗಳಿಂದ ರೈತರು ಖರೀದಿಸಿದ ರಸಗೊಬ್ಬರದಲ್ಲೂ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದೆ. ಏಪ್ರಿಲ್‌ನಲ್ಲಿ10,63,037 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರವನ್ನು ರೈತರು ಖರೀದಿಸಿದ್ದಾರೆ. ಇದು ಶೇ.32ರಷ್ಟು ಹೆಚ್ಚಳ. ಕಳೆದ ವರ್ಷದ ಏಪ್ರಿಲ್‌ ತಿಂಗಳಲ್ಲಿ8,02,692 ಲಕ್ಷ ಮೆಟ್ರಿಕ್‌ ಟನ್‌ ರಸಗೊಬ್ಬರವನ್ನು ರೈತರು ದಾಸ್ತಾನುದಾರರಿಂದ ಖರೀದಿಸಿದ್ದರು.

ಸಾಮಾನ್ಯವಾಗಿ ಮುಂಗಾರು ಮುಂಚಿತವಾಗಿ ರಸಗೊಬ್ಬರ ಮಾರಾಟ, ಖರೀದಿ ಪ್ರಕ್ರಿಯೆಗಳು ನಡೆಯುತ್ತಿರುತ್ತವೆ. ದಾಸ್ತಾನುದಾರರು ಕೂಡ ಆಯಾ ಪ್ರದೇಶದ ರೈತರ ಬೇಡಿಕೆಗಳಿಗೆ ತಕ್ಕಂತೆ ರಸಗೊಬ್ಬರವನ್ನು ಶೇಖರಿಸಿಟ್ಟಿರುತ್ತಾರೆ. ಹಲವು ಸಂದರ್ಭಗಳಲ್ಲಿ ರಸಗೊಬ್ಬರಕ್ಕಾಗಿಯೇ ಗಲಾಟೆ, ಸಂಘರ್ಷಗಳೂ ನಡೆದಿವೆ. ಆದರೆ ಕೇಂದ್ರ ಸರಕಾರ ಈ ಬಾರಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಮುಂಗಾರಿನಲ್ಲಿ ರೈತರಿಗೆ ವಂಚಿಸಲು ಸಂಚು ಹೂಡಿರುವ ಆಂಧ್ರದ ನಕಲಿ ಬಿತ್ತನೆ ಬೀಜ ಜಾಲ!

ಮುಂದಿನ ಮುಂಗಾರು ವೇಳೆಗೆ ರೈತರಿಗೆ ಸಾಕಷ್ಟು ಪ್ರಮಾಣದಲ್ಲಿ ರಸಗೊಬ್ಬರ ದೊರೆಯುವಂತೆ ಮಾಡುವ ಉದ್ದೇಶದಿಂದ ಕಾರ್ಯಪ್ರವೃತ್ತರಾಗಿದ್ದೇವೆ. ಲಾಕ್‌ಡೌನ್‌ ನಡುವೆಯೂ ಡೀಲರ್‌ಗಳು ದಾಖಲೆ ಪ್ರಮಾಣದಲ್ಲಿ ರಸಗೊಬ್ಬರ ಖರೀದಿಸಿ ದಾಸ್ತಾನು ಇರಿಸಿದ್ದರೆ, ರೈತರು ಕೂಡಾ ದಾಖಲೆ ಪ್ರಮಾಣದಲ್ಲಿ ರಸಗೊಬ್ಬರ ಖರೀದಿಸಿದ್ದಾರೆ. ಇದರಿಂದ ಈ ಬಾರಿ ಬಿತ್ತನೆಗೆ ಯಾವುದೇ ಅಡ್ಡಿ ಆತಂಕವಿಲ್ಲ.
- ಡಿ.ವಿ.ಸದಾನಂದ ಗೌಡ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ.

ರೈತರ ಮನೆ ಬಾಗಿಲಿಗೇ ಬರಲಿದೆ ಬಿತ್ತನೆ ಬೀಜ: ಯಾರನ್ನು ಸಂಪರ್ಕಿಸಬೇಕು? ಇಲ್ಲಿದೆ ವಿವರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ