ಆ್ಯಪ್ನಗರ

ಕೊನೆಗೂ ಪಾಕಿಸ್ತಾನಕ್ಕೆ 3 ಬಿಲಿಯನ್‌ ಡಾಲರ್‌ ನೆರವು ಘೋಷಿಸಿದ ಐಎಂಎಫ್‌

ಪಾಕಿಸ್ತಾನಕ್ಕೆ ಕಡೆಗೂ ಅಂತಾರಾಷ್ಟ್ರೀಯ ಹಣಕಾಸು ನಿಧಿ 3 ಬಿಲಿಯನ್ ಡಾಲರ್‌ ಮೌಲ್ಯದ ಬೇಲ್‌ಔಟ್ ಯೋಜನೆಗೆ ಅನುಮೋದನೆ ನೀಡಿದೆ. ಇದರಿಂದ ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನೆರೆಯ ರಾಷ್ಟ್ರ ಕೊನೆಗೂ ನಿಟ್ಟುಸಿರು ಬಿಡುವಂತಾಗಿದ್ದು, ಮೊದಲ ಹಂತದಲ್ಲಿ 1.2 ಬಿಲಿಯನ್‌ ಡಾಲರ್‌ ಹಣ ಆ ದೇಶಕ್ಕೆ ಸಿಗಲಿದೆ. ಉಳಿದ ಹಣವನ್ನು ನಂತರದ ದಿನಗಳಲ್ಲಿ ಕಂತುಗಳ ರೂಪದಲ್ಲಿ ಐಎಂಎಫ್‌ ನೀಡಲಿದೆ.

Written byಎನ್‌. ಸಚ್ಚಿದಾನಂದ | Agencies 13 Jul 2023, 12:50 pm

ಹೈಲೈಟ್ಸ್‌:

  • ಪಾಕಿಸ್ತಾನಕ್ಕೆ ಕಡೆಗೂ ನೆರವು ನೀಡಿದ ಅಂತಾರಾಷ್ಟ್ರೀಯ ಹಣಕಾಸು ನಿಧಿ
  • 3 ಬಿಲಿಯನ್ ಡಾಲರ್‌ ಮೌಲ್ಯದ ಬೇಲ್‌ಔಟ್ ಯೋಜನೆಗೆ ಅನುಮೋದನೆ
  • ಕೊನೆಗೂ ನಿಟ್ಟುಸಿರು ಬಿಟ್ಟ ಭಾರೀ ಆರ್ಥಿಕ ಸಂಕಷ್ಟದಲ್ಲಿದ್ದ ನೆರೆಯ ರಾಷ್ಟ್ರ
  • ಮೊದಲ ಹಂತದಲ್ಲಿ 1.2 ಬಿಲಿಯನ್‌ ಡಾಲರ್‌ ಹಣ ಪಡೆಯಲಿದೆ ಪಾಕ್‌
  • ಉಳಿದ ಹಣವನ್ನು ನಂತರದ ದಿನಗಳಲ್ಲಿ ಕಂತುಗಳ ರೂಪದಲ್ಲಿ ನೀಡಲಿದೆ ಐಎಂಎಫ್‌
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web pakistan Food Crisis
ಇಸ್ಲಾಮಾಬಾದ್: ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯ ಮಂಡಳಿಯು ಪಾಕಿಸ್ತಾನಕ್ಕೆ ಕಡೆಗೂ 3 ಬಿಲಿಯನ್ ಡಾಲರ್‌ ಮೌಲ್ಯದ ಬೇಲ್‌ಔಟ್ ಯೋಜನೆಗೆ ಬುಧವಾರ ಅನುಮೋದನೆ ನೀಡಿದೆ. ಇದರಿಂದ ಭಾರೀ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ನೆರೆಯ ರಾಷ್ಟ್ರ ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ.
ಸಾಲದಾತ ಸಂಸ್ಥೆ ಐಎಂಎಫ್‌ ದಕ್ಷಿಣ ಏಷ್ಯಾದ ದೇಶ ಪಾಕಿಸ್ತಾನಕ್ಕೆ ತಕ್ಷಣದ ನೆರವಿನ ರೂಪದಲ್ಲಿ ಸುಮಾರು 1.2 ಬಿಲಿಯನ್‌ ಡಾಲರ್‌ ಹಣವನ್ನು ನೀಡುವುದಾಗಿ ಹೇಳಿದೆ. ಉಳಿದ ಹಣವನ್ನು ನಂತರದ ದಿನಗಳಲ್ಲಿ ಕಂತುಗಳ ರೂಪದಲ್ಲಿ ನೀಡಲಿದೆ.

ಪಾಕಿಸ್ತಾನ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನಡುವೆ ಕಳೆದ ತಿಂಗಳು ಸಿಬ್ಬಂದಿ ಮಟ್ಟದ ಒಪ್ಪಂದ ನಡೆದಿತ್ತು. ಆದರೆ ಹಣ ಬಿಡುಗಡೆಯಾಗಿರಲಿಲ್ಲ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನವು ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿತ್ತು. ಇದೀಗ ಬಿಡುಗಡೆಗೆ ಅನುಮೋದನೆ ನೀಡುವುದರೊಂದಿಗೆ ನಗದು ಕೊರತೆಯಿಂದ ಬಳಲುತ್ತಿರುವ ರಾಷ್ಟ್ರಕ್ಕೆ ಅಗತ್ಯವಿರುವ ಹಣ ಬರುವುದು ಖಾತರಿಯಾಗಿದೆ.

ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಪಾಕಿಸ್ತಾನ, ಕರಾಚಿ ಬಂದರನ್ನು ಯುಎಇಗೆ ಹಸ್ತಾತರಿಸಲು ತೀರ್ಮಾನ
ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡುವ ಮೊದಲು ಮಂಡಳಿಯ ಅನುಮೋದನೆಯ ಅಗತ್ಯವಿತ್ತು. ಇದೀಗ ಅನುಮೋದನೆ ಸಿಕ್ಕಿದ್ದು, ಉಳಿದ ಹಣ ನಂತರದ ಕಂತುಗಳಲ್ಲಿ ಬರಲಿದೆ.

"ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ಕಾರ್ಯನಿರ್ವಾಹಕ ಮಂಡಳಿಯು ಪಾಕಿಸ್ತಾನಕ್ಕೆ 9 ತಿಂಗಳ ಸ್ಟ್ಯಾಂಡ್ ಬೈ ಅರೇಂಜ್ಮೆಂಟ್ (ಎಸ್‌ಬಿಎ) ಅಡಿಯಲ್ಲಿ ಎಸ್‌ಡಿಆರ್‌ 2,250 ಮಿಲಿಯನ್ ಮೊತ್ತಕ್ಕೆ (3 ಬಿಲಿಯನ್ ಡಾಲರ್‌ ಅಥವಾ ಶೇ. 111ರ ಕೋಟಾ) ಅನುಮೋದಿಸಿದೆ. ಸರಕಾರದ ಆರ್ಥಿಕ ಸ್ಥಿರೀಕರಣ ಕಾರ್ಯಕ್ರಮಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಈ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ,” ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ನೆರವಿಗೆ ಬಾರದ ಐಎಂಎಫ್‌, ಮತ್ತೆ ಪಾಕಿಸ್ತಾನಕ್ಕೆ $1 ಬಿಲಿಯನ್‌ ಸಾಲ ನೀಡಿದ ಚೀನಾ
ಪಾಕಿಸ್ತಾನ ಆರ್ಥಿಕ ಸವಾಲನ್ನು ಎದುರಿಸುತ್ತಿರುವ ಸಂದರ್ಭದಲ್ಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿ ಈ ಶುಭ ಸುದ್ದಿಯನ್ನು ನೀಡಿದೆ. ಕಷ್ಟಕರವಾದ ಬಾಹ್ಯ ಪರಿಸರ, ವಿನಾಶಕಾರಿ ಪ್ರವಾಹ ಮತ್ತು ಸರಕಾರದ ತಪ್ಪು ಆರ್ಥಿಕ ನಿರ್ಧಾರಗಳಿಂದಾಗಿ ಪಾಕಿಸ್ತಾನ ದೊಡ್ಡ ಮಟ್ಟಕ್ಕೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಪಾಕಿಸ್ತಾನ ಹಣಕಾಸಿನ ಕೊರತೆ ಹಾಗೂ ಬಾಹ್ಯ ಕೊರತೆಗಳನ್ನು ಎದುರಿಸುತ್ತಿದ್ದು, ಹಣದುಬ್ಬರ ಏರಿಕೆ ಮತ್ತು 2023ನೇ ಆರ್ಥಿಕ ವರ್ಷದಲ್ಲಿ ವಿದೇಶಿ ವಿನಿಮಯ ಮೀಸಲಿನಲ್ಲಿ ಕುಸಿತ ಕಂಡು ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಇಂಥ ಹೊತ್ತಲ್ಲೇ ಪಾಕಿಸ್ತಾನಕ್ಕೆ ಆಪತ್ಭಾಂಧವನ ರೂಪದಲ್ಲಿ ಐಎಂಎಫ್‌ ಒದಗಿ ಬಂದಿದೆ.
ಲೇಖಕರ ಬಗ್ಗೆ
ಎನ್‌. ಸಚ್ಚಿದಾನಂದ
2019ರಿಂದ ವಿಜಯ ಕರ್ನಾಟಕ ವೆಬ್‌ನಲ್ಲಿ ಉಪಸಂಪಾದಕರಾಗಿದ್ದಾರೆ. 2015ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಇವರು ಸದ್ಯ ‘ವಿಕ’ ವೆಬ್‌ನ ವಾಣಿಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ