ಆ್ಯಪ್ನಗರ

ಮದ್ಯದ ಬಾಟಲಿ ಮೇಲೆ ಗಾಂಧಿ ಚಿತ್ರ: ಕ್ಷಮೆ ಯಾಚಿಸಿದ ಇಸ್ರೇಲಿ ಕಂಪನಿ

ಮದ್ಯದ ಬಾಟಲಿ ಮೇಲೆ ಮಹಾತ್ಮ ಗಾಂಧಿಯ ಚಿತ್ರ ಪ್ರಕಟಿಸಿ ವಿವಾದ ಸೃಷ್ಟಿಸಿದ್ದ ಇಸ್ರೇಲಿ ಕಂಪನಿ ಈಗ ಕ್ಷಮೆ ಯಾಚಿಸಿದೆ...

PTI 4 Jul 2019, 5:00 am
ಹೊಸದಿಲ್ಲಿ: ಮದ್ಯದ ಬಾಟಲಿ ಮೇಲೆ ಮಹಾತ್ಮ ಗಾಂಧಿಯ ಚಿತ್ರ ಪ್ರಕಟಿಸಿ ವಿವಾದ ಸೃಷ್ಟಿಸಿದ್ದ ಇಸ್ರೇಲಿ ಕಂಪನಿ ಈಗ ಕ್ಷಮೆ ಯಾಚಿಸಿದೆ. ಭಾರತೀಯರು ಮತ್ತು ಭಾರತ ಸರಕಾರದ ಭಾವನೆಗಳಿಗೆ ನೋವು ತಂದಿದ್ದಕ್ಕೆ ವಿಷಾದಿಸುವುದಾಗಿ ಕಂಪನಿ ಹೇಳಿದೆ.
Vijaya Karnataka Web gandhis image on liquor bottles
ಮದ್ಯದ ಬಾಟಲಿ ಮೇಲೆ ಗಾಂಧಿ ಚಿತ್ರ: ಕ್ಷಮೆ ಯಾಚಿಸಿದ ಇಸ್ರೇಲಿ ಕಂಪನಿ


ಇಸ್ರೇಲ್‌ನ 71ನೇ ಸ್ವತಂತ್ರ ದಿನದ ಸಂಸ್ಮರಣೆಯ ಅಂಗವಾಗಿ ಆ ದೇಶದ ಮೂವರು ಪ್ರಧಾನಿಗಳ ಜೊತೆಗೆ ಗಾಂಧೀಜಿಯ ಚಿತ್ರವನ್ನು ಮದ್ಯದ ಬಾಟಲಿ ಮೇಲೆ ಮಾಕಾ ಬ್ರಿವೇರಿ ಎನ್ನುವ ಇಸ್ರೇಲಿ ಕಂಪನಿ ಪ್ರಕಟಿಸಿತ್ತು.

ಮಂಗಳವಾರ ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ್ದ ಆಮ್‌ಆದ್ಮಿ ಪಕ್ಷ ದ ಸದಸ್ಯ ಸಂಜಯ್‌ಸಿಂಗ್‌ ಸೇರಿದಂತೆ ಇತರೆ ಸದಸ್ಯರು, ಕೇಂದ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಈ ವೇಳೆ ಪೀಠದಲ್ಲಿದ್ದ ಸಭಾಧ್ಯಕ್ಷ ವೆಂಕಯ್ಯನಾಯ್ಡು, ಈ ವಿಷಯದ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ವಿದೇಶಾಂಗ ಖಾತೆ ಸಚಿವ ಎಸ್‌.ಜೈಶಂಕರ್‌ ಅವರಿಗೆ ಸೂಚನೆ ನೀಡಿದ್ದರು.

ಏತನ್ಮಧ್ಯೆ, ಕಂಪನಿಯ ಬ್ರ್ಯಾಂಡ್‌ ಮ್ಯಾನೇಜರ್‌ ಗಿಲಾದ್‌ ಡ್ರೋರ್‌ ಕ್ಷಮೆ ಯಾಚಿಸಿದ್ದು, ''ಗಾಂಧೀಜಿ ಬಗ್ಗೆ ನಮಗೆ ಹೆಚ್ಚಿನ ಗೌರವವಿದೆ. ಈ ಕೂಡಲೇ ಗಾಂಧಿ ಚಿತ್ರವುಳ್ಳ ಬ್ರಾಂಡ್‌ನ ಮದ್ಯದ ಸರಬರಾಜು ಮತ್ತು ಉತ್ಪಾದನೆಯನ್ನು ರದ್ದುಗೊಳಿಸಿದ್ದೇವೆ. ಮಾರುಕಟ್ಟೆಯಿಂದಲೂ ವಾಪಸ್‌ ಪಡೆಯುತ್ತಿದ್ದೇವೆ,'' ಎಂದಿದ್ದಾರೆ.

ವಿವಾದಿತ ಬಾಟೆಲ್‌ನ ಬಾಕ್ಸ್‌ ಮೇಲೆ ಗಾಂಧೀಜಿ ಸೇರಿದಂತೆ ಐವರು ಐತಿಹಾಸಿಕ ವ್ಯಕ್ತಿಗÜಳ ಕಾರ್ಟೂನ್‌ಗಳನ್ನು ಬಳಕೆ ಮಾಡಲಾಗಿದೆ. ಬಾಟಲ್‌ ಮೇಲೆಯೂ ಚಿತ್ರವನ್ನು ಪ್ರಕಟಿಸಲಾಗಿದೆ. ಗಾಂಧೀಜಿಗೆ ಆ ಕಾರ್ಟೂನ್‌ನಲ್ಲಿ ಟೀ ಶರ್ಟ್‌ ಹಾಕಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ