ಆ್ಯಪ್ನಗರ

ಪೆಟ್ರೋಲ್ ಬೆಲೆ 60ಕ್ಕಿಂತ ಕೆಳಗಿರಲು ವ್ಯಾಟ್ ರದ್ದು ಮಾಡಿದ ಗೋವಾ

ಪೆಟ್ರೋಲ್ ಲೀಟರಿಗೆ 60 ರೂಪಾಯಿ ಒಳಗೆ ಜನರಿಗೆ ಲಭ್ಯವಾಗುವಂತಾಗಲು ಗೋವಾದ ಬಿಜೆಪಿ ಸರಕಾರವು ಮಂಗಳವಾರ, ತೈಲದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಶೇ.2ರಷ್ಟು ಕಡಿತಗೊಳಿಸಿದೆ.

ಏಜೆನ್ಸೀಸ್ 17 May 2016, 7:01 pm
ಪಣಜಿ: ಪೆಟ್ರೋಲ್ ಲೀಟರಿಗೆ 60 ರೂಪಾಯಿ ಒಳಗೆ ಜನರಿಗೆ ಲಭ್ಯವಾಗುವಂತಾಗಲು ಗೋವಾದ ಬಿಜೆಪಿ ಸರಕಾರವು ಮಂಗಳವಾರ, ತೈಲದ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ಶೇ.2ರಷ್ಟು ಕಡಿತಗೊಳಿಸಿದೆ.
Vijaya Karnataka Web ltr
ಪೆಟ್ರೋಲ್ ಬೆಲೆ 60ಕ್ಕಿಂತ ಕೆಳಗಿರಲು ವ್ಯಾಟ್ ರದ್ದು ಮಾಡಿದ ಗೋವಾ


ಶೇ.22 ಇದ್ದ ವ್ಯಾಟ್ ಅನ್ನು ಶೇ.20ಕ್ಕೆ ಇಳಿಸಲಾಗಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇ 16ರ ರಾತ್ರಿ ಪೆಟ್ರೋಲ್ ಬೆಲೆ ಏರಿಸಿದ ಬಳಿಕ ಗೋವಾದಲ್ಲಿ ಅದರ ಬೆಲೆ ಲೀಟರಿಗೆ 60 ರೂ. ದಾಟಿತ್ತು. ವ್ಯಾಟ್ ಇಳಿಸಿದ ಬಳಿಕ ಅಲ್ಲಿ ಪೆಟ್ರೋಲ್ ಬೆಲೆ ಲೀಟರಿಗೆ 59.70 ರೂ. ಆಗುತ್ತದೆ.

ರಾಜ್ಯ ಬಟೆಟ್‌ನಲ್ಲಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೇಕರ್ ಅವರು ವ್ಯಾಟ್ ಹೆಚ್ಚಳ ಮಾಡಿದ್ದರಾದರೂ, ಲೀಟರಿಗೆ 60 ರೂ. ದಾಟದಂತೆ, ತೆರಿಗೆ ಇಳಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು.

2012ರಲ್ಲಿ ಅಧಿಕಾರಕ್ಕೇರಿದ್ದ ಬಿಜೆಪಿ ಸರಕಾರವು ಪೆಟ್ರೋಲ್ ಮೇಲಿನ ವ್ಯಾಟ್ ಹೊರೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿತ್ತು. ಇದರ ಪರಿಣಾಮ ಅಂದು ಪೆಟ್ರೋಲ್ ಬೆಲೆಯು ಲೀಟರಿಗೆ 11 ರೂಪಾಯಿಯಷ್ಟು ಕಡಿಮೆಯಾಗಿತ್ತು.

ಗೋವಾದಲ್ಲಿ ಪೆಟ್ರೋಲ್ ಅತ್ಯಂತ ಅಗ್ಗವಾಗಿದ್ದು, ವ್ಯಾಟ್ ರದ್ದತಿಯಿಂದ ರಾಜ್ಯ ಸರಕಾರಕ್ಕೆ 150 ಕೋಟಿ ರೂ. ಹೊರೆ ಬಿದ್ದಿತ್ತು.

ಆದರೆ, ಸ್ವಲ್ಪ ವ್ಯಾಟ್ ವಿಧಿಸುವ ಮೂಲಕ ಸರಕಾರವು ತನ್ನ ನಿರ್ಧಾರವನ್ನು ಬದಲಿಸಿತ್ತು. ನಂತರ ಇದೀಗ, ವ್ಯಾಟ್ ಇಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ