ಆ್ಯಪ್ನಗರ

ಸಾರ್ವಕಾಲಿಕ ಗರಿಷ್ಠ ಬೆಲೆಗಿಂತ ₹8000 ಕುಸಿತ ಕಂಡ ಚಿನ್ನ! ಆಭರಣಪ್ರಿಯರಿಗೆ ಫುಲ್‌ ಖುಷ್‌!

2020ರಲ್ಲಿ ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆ, 2021ರ ಆರಂಭದಿಂದಲೇ ಇಳಿಕೆಯ ಹಾದಿ ಹಿಡಿದಿದೆ. ಕಳೆದ ವಾರ ಕೂಡ ಏರಿಕೆಯಾಗಿದ್ದ ಬಂಗಾರದ ಬೆಲೆ ಮತ್ತೆ ಇಳಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ ಬೆಲೆಗಿಂತಲೂ 8000 ರೂಪಾಯಿ ಇಳಿಕೆಯಾಗಿದೆ.

Vijaya Karnataka Web 11 Jan 2021, 7:18 pm
ಹೊಸದಿಲ್ಲಿ: 2020ರಲ್ಲಿ ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆ, 2021ರ ಆರಂಭದಿಂದಲೇ ಇಳಿಕೆಯ ಹಾದಿ ಹಿಡಿದಿದೆ. ಕಳೆದ ವಾರ ಕೂಡ ಏರಿಕೆಯಾಗಿದ್ದ ಬಂಗಾರದ ಬೆಲೆ ಮತ್ತೆ ಇಳಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ ಬೆಲೆಗಿಂತಲೂ 8000 ರೂಪಾಯಿ ಇಳಿಕೆಯಾಗಿದೆ. ಇದು ಆಭರಣಪ್ರಿಯರ ಸಂತಸಕ್ಕೆ ಕಾರಣವಾಗಿದೆ.
Vijaya Karnataka Web gold jewellery


ಕಳೆದ ಗುರುವಾರವಷ್ಟೇ ಪ್ರತಿ 10 ಗ್ರಾಂ ಅಪರಂಜಿ ಚಿನ್ನಕ್ಕೆ 'ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌' (ಎಂಸಿಎಕ್ಸ್) ನಲ್ಲಿ ಚಿನ್ನದ ಬೆಲೆ 51,800 ರೂಪಾಯಿಗೆ ಏರಿಕೆಯಾಗಿತ್ತು. ಸೋಮವಾರದ ಅಂತ್ಯಕ್ಕೆ ₹48,635ಕ್ಕೆ ಇಳಿಕೆಯಾಗಿದೆ. ಈ ಮೂಲಕ 2020ರಲ್ಲಿ ಏರಿಕೆಯಾಗಿದ್ದ ಚಿನ್ನದ ಗರಿಷ್ಠ ಬೆಲೆಗಿಂತಲೂ 8000 ರೂಪಾಯಿ ಇಳಿಕೆಯಾದಂತಾಗಿದೆ.

ಮೂರು ದಿನದಲ್ಲಿ 1890 ರೂ ಇಳಿದ ಚಿನ್ನದ ಬೆಲೆ, ಇಂದಿನ ಬೆಲೆ ವಿವರ ಇಲ್ಲಿದೆ

2020ರ ಆಗಸ್ಟ್‌ನಲ್ಲಿ ಚಿನ್ನದ ಬೆಲೆ ಗರಿಷ್ಠ ಏರಿಕೆಯಾಗಿತ್ತು. ಪ್ರತಿ 10 ಗ್ರಾಂ ಅಪರಂಜಿ ಚಿನ್ನದ ಬೆಲೆ ₹56,200 ತಲುಪಿತ್ತು. ಇದೀಗ ಬರೋಬ್ಬರಿ 8000 ರೂಪಾಯಿ ಇಳಿದಿರುವ ಚಿನ್ನದ ಬೆಲೆ ₹48,635ಕ್ಕೆ ಬಂದು ನಿಂತಿದೆ.

ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಭಾರೀ ಏರಿಳಿತ ಕಾಣುತ್ತಿದೆ. ಕಾರಣ ಷೇರು ಮಾರುಕಟ್ಟೆ ಅಸ್ಥಿರತೆ ಜತೆಗೆ ಡಾಲರ್ ಮೌಲ್ಯದಲ್ಲಿ ಆಗುತ್ತಿರುವ ಏರಿಳಿತಗಳೂ ಇದಕ್ಕೆ ಕಾರಣವಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗುವ ಬೆಲೆ ಅಸ್ಥಿರತೆಗಳು ಭಾರತದ ಚಿನ್ನದ ಮಾರುಕಟ್ಟೆ ಮೇಲೂ ಪ್ರಭಾವ ಬೀರುತ್ತಿದೆ.

ಎರಡು ದಿನದಲ್ಲಿ 530 ರೂ ಇಳಿದ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ಎಷ್ಟಿದೆ?

ಚಿನ್ನದ ಬೆಲೆ ಇಳಿಕೆಯು ಈ ವಾರವೂ ಮುಂದುವರಿಯಬಹುದು ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಆದರೆ ಈ ಬೆಲೆ ಇಳಿಕೆ ತಾತ್ಕಾಲಿಕವಾಗಿದ್ದು, ಮತ್ತೆ ವಿಪರೀತ ಏರಬಹುದು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ