ಆ್ಯಪ್ನಗರ

ಶೇ.7.15 ಬಡ್ಡಿ ಆದಾಯ ನೀಡುವ ಬಾಂಡ್‌ ಬಿಡುಗಡೆಗೊಳಿಸಿದ ಕೇಂದ್ರ! ನೀವು ಮಾಡಬಹುದು ಹೂಡಿಕೆ!

ಕೇಂದ್ರ ಸರಕಾರವು ಶೇ. 7.15 ಬಡ್ಡಿ ಆದಾಯ ನೀಡುವ ಫ್ಲೋಟಿಂಗ್‌ ರೇಟ್‌ ಇರುವ ಉಳಿತಾಯ ಬಾಂಡ್‌ಗಳನ್ನು ಬಿಡುಗಡೆಗೊಳಿಸಿದೆ.ಸಾಮಾನ್ಯ ನಾಗರಿಕರು ಈ ಬಾಂಡನ್ನ ಕೊಳ್ಳಬಹುದಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

THE ECONOMIC TIMES 29 Jun 2020, 4:35 pm
ಹೊಸದಿಲ್ಲಿ: ಕೇಂದ್ರ ಸರಕಾರವು ಶೇ.7.15 ಬಡ್ಡಿ ಆದಾಯ ನೀಡುವ ಫ್ಲೋಟಿಂಗ್‌ ರೇಟ್‌ ಇರುವ ಉಳಿತಾಯ ಬಾಂಡ್‌ಗಳನ್ನು ಬಿಡುಗಡೆಗೊಳಿಸಿದೆ. ಜುಲೈ 1ರಿಂದ ಬಾಂಡ್‌ಗಳನ್ನು ಜನರು ಕೊಳ್ಳಬಹುದು. ಪ್ರತಿ 6 ತಿಂಗಳಿಗೊಮ್ಮೆ ಹೂಡಿಕೆದಾರರು ಬಡ್ಡಿ ಪಡೆಯಬಹುದು.
Vijaya Karnataka Web bonds-getty


ರಿಸರ್ವ್‌ ಬ್ಯಾಂಕ್‌ ಈ ಸಂಬಂಧ ಪ್ರಕಟಣೆಯನ್ನು ಹೊರಡಿಸಿದೆ. ಈ ಹಿಂದೆ ಶೇ.7.75 ಬಡ್ಡಿ ನೀಡುತ್ತಿದ್ದ ಆರ್‌ಬಿಐ ಬಾಂಡ್‌ ಗಳನ್ನು ಹಿಂತೆಗೆದುಕೊಂಡಿರುವುದರಿಂದ ಅದರ ಬದಲಿಗೆ ಶೇ.7.15 ಬಡ್ಡಿ ನೀಡುವ, ಫ್ಲೋಟಿಂಗ್‌ ರೇಟ್‌ ಇರುವ ಬಾಂಡ್‌ ಬಿಡುಗಡೆಗೊಳಿಸಲಾಗುತ್ತಿದೆ.

ಯಾರು ಹೂಡಿಕೆ ಮಾಡಬಹುದು?
ವೈಯಕ್ತಿಕವಾಗಿ ನಾಗರಿಕರು ಹೂಡಬಹುದು. ಜಂಟಿಯಾಗಿಯೂ ಖರೀದಿಸಬಹುದು. ಆದರೆ ಅನಿವಾಸಿ ಭಾರತೀಯರು ಕೊಳ್ಳುವಂತಿಲ್ಲ.

ಎಷ್ಟು ಹೂಡಿಕೆ?
ಕನಿಷ್ಠ ಹೂಡಿಕೆ 1,000 ರೂ. ಗರಿಷÜ್ಠ ಹೂಡಿಕೆಗೆ ಮಿತಿ ಇಲ್ಲ.

ಬಾಂಡ್‌ ಅವಧಿ ಎಷ್ಟು?
ಬಿಡುಗಡೆಯಾದ ದಿನದಿಂದ 7 ವರ್ಷಗಳ ಅವಧಿ ಇದೆ. ಹಿರಿಯ ನಾಗರಿಕರು ಅವಧಿಗೆ ಮುನ್ನ ಹಿಂತೆಗೆದುಕೊಳ್ಳಲು ಅವಕಾಶ ಇದೆ.

ಬಡ್ಡಿ ದರ ಎಷ್ಟು?
ಬಡ್ಡಿ ದರ ಶೇ.7.15 ಆಗಿದ್ದು, ಪ್ರತಿ ವರ್ಷ ಜನವರಿ 1 ಮತ್ತು ಜುಲೈ 1ಕ್ಕೆ ವಿತರಣೆಯಾಗುತ್ತದೆ. ಪ್ರತಿ 6 ತಿಂಗಳಿಗೊಮ್ಮೆ ಬಡ್ಡಿ ದರ ಪರಿಷ್ಕರಣೆಯಾಗಲಿದೆ. ಬಡ್ಡಿ ಆದಾಯಕ್ಕೆ ಆದಾಯ ತೆರಿಗೆ ಅನ್ವಯಿಸುತ್ತದೆ.

ಹೂಡಿಕೆ ಮಾಡುವುದು ಹೇಗೆ?
ನಗದು(20,000 ರೂ. ತನಕ), ಡ್ರಾಫ್ಟ್‌, ಚೆಕ್‌ ಅಥವಾ ಡಿಜಿಟಲ್‌ ಮೂಲಕ ಹೂಡಿಕೆ ಮಾಡಬಹುದು. ಎಸ್‌ಬಿಐ, ಇತರ ರಾಷ್ಟ್ರೀಕೃತ ಬ್ಯಾಂಕ್‌ಗಳ ನಿರ್ದಿಷ್ಟ ಶಾಖೆಗಳಲ್ಲಿಖರೀದಿಸಬಹುದು. ಐಡಿಬಿಐ ಬ್ಯಾಂಕ್‌, ಎಕ್ಸಿಸ್‌ ಬ್ಯಾಂಕ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ಗಳಲ್ಲಿಲಭಿಸಲಿದೆ. ಎಲೆಕ್ಟ್ರ್ರಾನಿಕ್‌ ಸ್ವರೂಪದಲ್ಲಿ ಮಾತ್ರ ಬಾಂಡ್‌ ಲಭಿಸಲಿದ್ದು, ಇದಕ್ಕಾಗಿ ಬಾಂಡ್‌ ಲೆಡ್ಜರ್‌ ಅಕೌಂಟ್‌ ಅನ್ನು ತೆರೆಯಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ