ಆ್ಯಪ್ನಗರ

ವಿವಾದ್‌ ಸೇ ವಿಶ್ವಾಸ್‌: ಸರಕಾರ ಮತ್ತು ತೆರಿಗೆದಾರರ ಮಧ್ಯೆ ‘ಸ್ವೀಟ್‌ ಡೀಲ್‌’

ಕೇಂದ್ರ ಬಜೆಟ್‌ನಲ್ಲಿ ಘೋಷಣೆಯಾಗಿರುವ 'ವಿವಾದ್‌ ಸೇ ವಿಶ್ವಾಸ್‌' ಯೋಜನೆಗೆ ಸರಕಾರವು ಚಾಲನೆ ನೀಡುತ್ತಿದೆ. ಸಂಪುಟವು ಇತ್ತೀಚೆಗಷ್ಟೇ ಈ ತಿದ್ದುಪಡಿಗೆ ಅನುಮೋದನೆ ನೀಡಿದೆ. ತೆರಿಗೆ ಬಾಕಿ ಉಳಿಸಿಕೊಂಡ ಕಂಪನಿಗಳು ಮತ್ತು ಸರಕಾರ ಇಬ್ಬರಿಗೂ ಇದು ನೆರವಾಗಲಿದೆ. ತೆರಿಗೆಯ ವಿವಾದಾತ್ಮಕ ಮೊತ್ತದಲ್ಲಿ ಶೇ. 50 ರಷ್ಟನ್ನು ಪಾವತಿಸಿದರೆ ಸಾಕು ಎಂಬುದು ಈ ಯೋಜನೆಯ ವಿಶೇಷ. ದೇಶದ ನಾನಾ ಕೋರ್ಟ್‌ಗಳಲ್ಲಿ 5 ಲಕ್ಷಕ್ಕೂ ಹೆಚ್ಚಿನ ತೆರಿಗೆ ಪ್ರಕರಣಗಳು ಇತ್ಯರ್ಥವಾಗದೇ ಬಾಕಿ ಉಳಿದಿವೆ. ಇವುಗಳ ಮೊತ್ತ ಸುಮಾರು 9.32 ಲಕ್ಷ ಕೋಟಿ ರೂಪಾಯಿ.

Vijaya Karnataka Web 18 Feb 2020, 10:13 pm

Vijaya Karnataka Web government plans to resolve pending tax disputes pitches vivaad se vishwas scheme
ವಿವಾದ್‌ ಸೇ ವಿಶ್ವಾಸ್‌: ಸರಕಾರ ಮತ್ತು ತೆರಿಗೆದಾರರ ಮಧ್ಯೆ ‘ಸ್ವೀಟ್‌ ಡೀಲ್‌’

​ಸರಕಾರ/ತೆರಿಗೆದಾರರಿಗೆ ಏನು ಲಾಭ?

* ತೆರಿಗೆದಾರರು ಅಥವಾ ತೆರಿಗೆ ಬಾಕಿ ಉಳಿಸಿಕೊಂಡ ಕಂಪನಿಗಳು ಮತ್ತು ತೆರಿಗೆ ಇಲಾಖೆ ನಡುವಿನ ಬಿಕ್ಕಟ್ಟು ಇತ್ಯರ್ಥಕ್ಕೆ ಯೋಜನೆ ಸಹಕಾರಿ.

* ನಾನಾ ಕೋರ್ಟ್‌ಗಳಲ್ಲಿ ಸುಮಾರು 5 ಲಕ್ಷ ಪ್ರಕರಣಗಳಿವೆ. ವಿವಾದ್‌ ಸೇ ವಿಶ್ವಾಸ್‌ ಯೋಜನೆಯನ್ನು ಬಳಸಿಕೊಂಡರೆ, ಕಂಪನಿಗಳ ತೆರಿಗೆ ತಲೆನೋವಿನ ಪ್ರಕರಣ ಇತ್ಯರ್ಥವಾಗುತ್ತದೆ. ಸಾಕಷ್ಟು ಹಣವೂ ಉಳಿಯುತ್ತದೆ.

* ಈ ಯೋಜನೆಯಿಂದ ಸರಕಾರಕ್ಕೆ ಒಂದೂವರೆ ಲಕ್ಷ ಕೋಟಿ ರೂ.ಗಳಷ್ಟು ಆದಾಯವು ಬರುವ ನಿರೀಕ್ಷೆ ಇದೆ.

* ವಿತ್ತೀಯ ಕೊರತೆಯ ಗುರಿ ಮುಟ್ಟಲು ಸರಕಾರಕ್ಕೆ ಇದರಿಂದ ಅನುಕೂಲವಾಗುತ್ತದೆ.

​2020ರ ಮಾ. 31ರ ತನಕ ಇಷ್ಟು ಪಾವತಿಸಿದರೆ ಸಾಕು!

ಐಟಿ ಇಲಾಖೆಯು ತೆರಿಗೆ ಪ್ರಕರಣಗಳ ಇತ್ಯರ್ಥಕ್ಕೆ ನೀಡಿರುವ ಆಫರ್‌ಗಳು ಇಲ್ಲಿವೆ.

50% - ತೆರಿಗೆ ಮೊತ್ತದಲ್ಲಿಅರ್ಧ ಭಾಗ ಕೊಟ್ಟರೇ ಸಾಕು. ದಂಡ ಅಥವಾ ಬಡ್ಡಿ ಇರುವುದಿಲ್ಲ.

62.5% - ಐಟಿ ಇಲಾಖೆ ದಾಳಿ ಮಾಡಿರುವ ಪ್ರಕರಣಗಳಲ್ಲಿ ತೆರಿಗೆ ಮೊತ್ತದಲ್ಲಿ 62.5% ಕಟ್ಟಿದರೆ ಸಾಕು. ದಂಡ/ಬಡ್ಡಿ ಬೇಕಿಲ್ಲ.

12.5% - ದಂಡ, ಬಡ್ಡಿ ಅಥವಾ ಶುಲ್ಕದ ಮೊತ್ತದಲ್ಲಿ ಇಷ್ಟು ಭಾಗ ಕಟ್ಟಿದರೆ ಪ್ರಕರಣ ಇತ್ಯರ್ಥ

​2020ರ ಮಾ. 31ರ ಬಳಿಕ ಎಷ್ಟು ಕಟ್ಟಬೇಕು?

55 % - ತೆರಿಗೆ ಮೊತ್ತದಲ್ಲಿ ಇಷ್ಟು ಭಾಗ ಕೊಟ್ಟರೇ ಸಾಕು. ದಂಡ ಅಥವಾ ಬಡ್ಡಿ ಇರುವುದಿಲ್ಲ.

67.5% - ಐಟಿ ಇಲಾಖೆ ದಾಳಿ ಮಾಡಿರುವ ಪ್ರಕರಣಗಳಲ್ಲಿ ತೆರಿಗೆ ಮೊತ್ತದಲ್ಲಿ 67.5% ಕಟ್ಟಿದರೆ ಸಾಕು. ದಂಡ/ಬಡ್ಡಿ ಬೇಕಿಲ್ಲ.

15% - ದಂಡ, ಬಡ್ಡಿ ಅಥವಾ ಶುಲ್ಕದ ಮೊತ್ತದಲ್ಲಿ ಇಷ್ಟು ಭಾಗ ಕಟ್ಟಿದರೆ ಪ್ರಕರಣ ಇತ್ಯರ್ಥ

​9.32 ಲಕ್ಷ ಕೋಟಿ ರೂ. ಬಾಕಿ!

ನನೆಗುದಿಗೆ ಬಿದ್ದಿರುವ 9.32 ಲಕ್ಷ ಕೋಟಿ ರೂ. ಮೌಲ್ಯದ 4.8 ಲಕ್ಷ ಪ್ರಕರಣಗಳನ್ನು ಇತ್ಯರ್ಥಗೊಳಿಸುವುದು ವಿವಾದ್‌ ಸೇ ವಿಶ್ವಾಸ್‌ ಯೋಜನೆಯ ಉದ್ದೇಶ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ