ಆ್ಯಪ್ನಗರ

ಬ್ಯಾಂಕ್‌ ಖಾಸಗೀಕರಣಕ್ಕಾಗಿ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ನಿರ್ಧಾರ

ಬ್ಯಾಂಕ್‌ ಖಾಸಗೀಕರಣಕ್ಕೆ ಬ್ಯಾಂಕಿಂಗ್‌ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ 1970, ಬ್ಯಾಂಕಿಂಗ್‌ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ 1980ರಲ್ಲಿ ಕೆಲ ತಿದ್ದುಪಡಿಯ ಅಗತ್ಯವಿದೆ.

Agencies 16 Feb 2021, 9:27 pm

ಹೈಲೈಟ್ಸ್‌:

  • ಬ್ಯಾಂಕ್‌ ಖಾಸಗೀಕರಣಕ್ಕೆ ಬ್ಯಾಂಕಿಂಗ್‌ ಕಾಯಿದೆಗೆ ತಿದ್ದುಪಡಿ ಅಗತ್ಯ
  • ಬ್ಯಾಂಕಿಂಗ್‌ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ 1970 , ಬ್ಯಾಂಕಿಂಗ್‌ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ 1980ಕ್ಕೆ ತಿದ್ದುಪಡಿ
  • ಖಾಸಗೀಕರಣಕ್ಕೆ ಸಾರ್ವಜನಿಕ ವಲಯದ 4 ಬ್ಯಾಂಕ್‌ಗಳ ಪಟ್ಟಿ ಅಂತಿಮಗೊಳಿಸಿರುವ ಕೇಂದ್ರ ಸರಕಾರ


ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bank
ಹೊಸದಿಲ್ಲಿ: ಸಾರ್ವಜನಿಕ ಬ್ಯಾಂಕ್‌ ಗಳ ಖಾಸಗೀಕರಣಕ್ಕೆ ಅನುಕೂಲವಾಗಲು ಬ್ಯಾಂಕಿಂಗ್‌ ಕುರಿತ 2 ಕಾಯಿದೆಗಳಿಗೆ ಸರಕಾರ ಈ ವರ್ಷ ತಿದ್ದುಪಡಿ ಮಾಡಲಿದೆ.
ಬ್ಯಾಂಕಿಂಗ್‌ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ 1970 ಮತ್ತು ಬ್ಯಾಂಕಿಂಗ್‌ ಕಂಪನಿಗಳ (ಸ್ವಾಧೀನ ಮತ್ತು ವರ್ಗಾವಣೆ) ಕಾಯಿದೆ 1980ರಲ್ಲಿ ಕೆಲ ತಿದ್ದುಪಡಿಯ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.

ಈ ಕಾಯಿದೆಗಳು ಎರಡು ಹಂತಗಳಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣಕ್ಕೆ ಹಾದಿ ಸುಗಮಗೊಳಿಸಿತ್ತು. ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಇದರಲ್ಲಿ ತಿದ್ದುಪಡಿಯ ಅವಶ್ಯಕತೆ ಇದೆ.

ಬ್ಯಾಂಕ್‌ ಆಫ್‌ ಇಂಡಿಯಾ ಸೇರಿ ಖಾಸಗೀಕರಣಕ್ಕೆ 4 ಬ್ಯಾಂಕ್‌ಗಳ ಆಯ್ಕೆ - ವರದಿ
ಸಾರ್ವಜನಿಕ ವಲಯದ 4 ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಸರಕಾರ ಪಟ್ಟಿ ಅಂತಿಮಗೊಳಿಸಿದೆ. ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಮತ್ತು ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ಗಳು ಪಟ್ಟಿಯಲ್ಲಿದ್ದು ಇದರಲ್ಲಿ ಎರಡು ಬ್ಯಾಂಕ್‌ಗಳು ಖಾಸಗೀಕರಣವಾಗಲಿವೆ ಎಂದು ಹೆಸರು ಹೇಳಲು ಇಚ್ಛಿಸದ ಇಬ್ಬರು ಅಧಿಕಾರಿ­ಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ