ಆ್ಯಪ್ನಗರ

8 ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆ ಮೈನಸ್‌ 9.6%!

5 ತಿಂಗಳ ಬಳಿಕವೂ ದೇಶದ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಎಂಟು ಪ್ರಮುಖ ಕೈಗಾರಿಕಾ ವಲಯಗಳು ಬೆಳವಣಿಗೆ ಕಾಣುವ ಬದಲು ಮುಗ್ಗರಿಸುತ್ತಿವೆ. ಜೂನ್‌ನಲ್ಲಿ ಈ ಕುಸಿತದ ಪ್ರಮಾಣ ಸ್ವಲ್ಪ ಇಳಿಕೆಯಾಗಿರುವುದಷ್ಟೆ ಸಾಧನೆಯಾಗಿದೆ.

Agencies 31 Aug 2020, 8:42 pm
ಹೊಸದಿಲ್ಲಿ: ದೇಶದ ಮೂಲ ಸೌಕರ್ಯಕ್ಕೆ ಸಂಬಂಧಿಸಿದ ಎಂಟು ಪ್ರಮುಖ ಕೈಗಾರಿಕಾ ವಲಯಗಳ ಬೆಳವಣಿಗೆಯು ಸತತ 5ನೇ ತಿಂಗಳಾದ ಜುಲೈನಲ್ಲೂ ಇಳಿಕೆಯ ಹಾದಿಯಲ್ಲಿ ಮುಂದುವರೆದಿದೆ. ಜುಲೈನಲ್ಲಿ ಮೈನಸ್‌ ಶೇ. 9.6ರಷ್ಟು ಕುಸಿತ ಕಂಡು ಬಂದಿದೆ. 2019ರ ಜುಲೈನಲ್ಲಿ ಶೇ.2.6ರ ಬೆಳವಣಿಗೆ ದಾಖಲಾಗಿತ್ತು.
Vijaya Karnataka Web industrial


ಆದಾಗ್ಯೂ, ಕಳೆದ ತಿಂಗಳಿಗೆ ಹೋಲಿಸಿದರೆ ಅಲ್ಪ ಬೆಳವಣಿಗೆ ಕಂಡು ಬಂದಿದೆ. ಜೂನ್‌ನಲ್ಲಿ ಮೈನಸ್‌ ಶೇ. 12.9 ಕುಸಿತ ದಾಖಲಾಗಿತ್ತು. ಪ್ರಮುಖ ಎಂಟು ಕೈಗಾರಿಕಾ ವಲಯಗಳಲ್ಲಿ ರಸಗೊಬ್ಬರ ಹೊರತು ಪಡಿಸಿದರೆ, ಉಳಿದ 7 ವಲಯಗಳಲ್ಲೂ ನಕಾರಾತ್ಮಕ ಬೆಳವಣಿಗೆ ದಾಖಲಾಗಿದೆ.

ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಿತ ಉತ್ಪನ್ನಗಳು, ಉಕ್ಕು, ಸಿಮೆಂಟ್‌, ವಿದ್ಯುತ್‌ ವಲಯಗಳಲ್ಲಿ ಬೆಳವಣಿಗೆ ನಕಾರಾತ್ಮಕ ಮಟ್ಟದಲ್ಲಿ ಮುಂದುವರೆದಿದೆ. ರಸಗೊಬ್ಬರ ವಲಯದಲ್ಲಿ ಬೆಳವಣಿಗೆ ಶೇ.6.9ರಷ್ಟಿದೆ. ಕಳೆದ ವರ್ಷದ ಜುಲೈನಲ್ಲಿ ಇದು ಶೇ.1.5ರಷ್ಟಿತ್ತು.
2020-21ರ ಒಟ್ಟಾರೆ ಬೆಳವಣಿಗೆಯು ಶೇ.20.5ರಷ್ಟಿತ್ತು.

ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ 23.9% ಇಳಿಕೆ, ಭಾರತದ ಇತಿಹಾಸದ ಮಹಾ ಆರ್ಥಿಕ ಕುಸಿತ

ಪ್ರಮುಖ 8 ವಲಯಗಳಲ್ಲಿನ ಬೆಳವಣಿಗೆ

ಮಾರ್ಚ್‌ -6.5%
ಏಪ್ರಿಲ್‌ -38.1%
ಮೇ -23.4%
ಜೂನ್‌ -12.9
ಜುಲೈ -9.6%

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ