ಆ್ಯಪ್ನಗರ

ಫೆಬ್ರವರಿಯಲ್ಲಿ ಜಿಎಸ್‌ಟಿ 85,174 ಕೋಟಿ ರೂ. ಸಂಗ್ರಹ

ಕಳೆದ ಫೆಬ್ರವರಿಯಲ್ಲಿ ಜಿಎಸ್‌ಟಿ ಸಂಗ್ರಹ 85,174 ಕೋಟಿ ರೂ.ಗಳಾಗಿದ್ದು, ಇಳಿಕೆಯಾಗಿದೆ. ಹೀಗಿದ್ದರೂ ಮಾರ್ಚ್‌ ತಿಂಗಳಿನಲ್ಲಿ ಇದುವರೆಗೆ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಕಂಡು ಬಂದಿದೆ.

THE ECONOMIC TIMES 28 Mar 2018, 5:00 am
ಹೊಸದಿಲ್ಲಿ : ಕಳೆದ ಫೆಬ್ರವರಿಯಲ್ಲಿ ಜಿಎಸ್‌ಟಿ ಸಂಗ್ರಹ 85,174 ಕೋಟಿ ರೂ.ಗಳಾಗಿದ್ದು, ಇಳಿಕೆಯಾಗಿದೆ. ಹೀಗಿದ್ದರೂ ಮಾರ್ಚ್‌ ತಿಂಗಳಿನಲ್ಲಿ ಇದುವರೆಗೆ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಕಂಡು ಬಂದಿದೆ.
Vijaya Karnataka Web gst collection falls to rs 851 74 bn in february
ಫೆಬ್ರವರಿಯಲ್ಲಿ ಜಿಎಸ್‌ಟಿ 85,174 ಕೋಟಿ ರೂ. ಸಂಗ್ರಹ


ಫೆಬ್ರವರಿಯಲ್ಲಿ 69 ಪರ್ಸೆಂಟ್‌ ಮಂದಿ ಮಾತ್ರ ಜಿಎಸ್‌ಟಿ ರಿಟರ್ನ್ಸ್‌ ಸಲ್ಲಿಸಿದ್ದಾರೆ. 59 ಲಕ್ಷ ಜಿಎಸ್‌ಟಿಆರ್‌ 3ಬಿ ರಿಟನ್ಸ್‌ ಸಲ್ಲಿಕೆಯಾಗಿದ್ದು, ಒಟ್ಟು ತೆರಿಗೆದಾರರ ಪೈಕಿ 69 ಪರ್ಸೆಂಟ್‌ನಷ್ಟಾಗಿದೆ. ಮಾರ್ಚ್‌ 25ರ ತನಕ 1.05 ಕೋಟಿ ತೆರಿಗೆದಾರರು ಜಿಎಸ್‌ಟಿ ಅಡಿಯಲ್ಲಿ ನೋಂದಣಿಯಾಗಿದ್ದು, ಇದರಲ್ಲಿ 18.17 ಲಕ್ಷ ಮಂದಿ ಕಂಪೊಸಿಶನ್‌ ಡೀಲರ್‌ಗಳಾಗಿದ್ದಾರೆ. ಈ ಕಂಪೊಸಿಶನ್‌ ಡೀಲರ್‌ಗಳು ಪ್ರತಿ ಮೂರು ತಿಂಗಳಿಗೊಮ್ಮೆ ರಿಟರ್ನ್ಸ್‌ ಸಲ್ಲಿಸಬೇಕಾಗುತ್ತದೆ. ಉಳಿದ 86.37 ಲಕ್ಷ ಮಂದಿ ಪ್ರತಿ ತಿಂಗಳು ರಿಟರ್ನ್ಸ್‌ ಸಲ್ಲಿಸಬೇಕಾಗುತ್ತದೆ.

ಈ ವರ್ಷ ಜನವರಿಯಲ್ಲಿ 86,318 ಕೋಟಿ ರೂ. ತೆರಿಗೆ ಸಂಗ್ರಹವಾಗಿದ್ದರೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ 88,929 ಕೋಟಿ ರೂ. ಹಾಗೂ ನವೆಂಬರ್‌ನಲ್ಲಿ 85,174 ಕೋಟಿ ರೂ. ಸಂಗ್ರಹವಾಗಿತ್ತು. ಫೆಬ್ರವರಿಯಲ್ಲಿ ಸಂಗ್ರಹವಾಗಿರುವ 85,174 ಕೋಟಿ ರೂ. ಜಿಎಸ್‌ಟಿಯಲ್ಲಿ 14,945 ಕೋಟಿ ರೂ. ಕೇಂದ್ರ ಜಿಎಸ್‌ಟಿ ಮತ್ತು 20,456 ಕೋಟಿ ರೂ. ರಾಜ್ಯ ಜಿಎಸ್‌ಟಿಯಾಗಿದೆ. ಇದಲ್ಲದೆ 42,456 ಕೋಟಿ ರೂ. ಸಂಯುಕ್ತ ಜಿಎಸ್‌ಟಿ ಮತ್ತು 7,317 ಕೋಟಿ ರೂ. ಪರಿಹಾರ ಸಂಬಂಧಿತ ಸೆಸ್‌ ಆಗಿರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ