ಆ್ಯಪ್ನಗರ

ಜಿಎಸ್‌ಟಿ ಆಗಸ್ಟ್‌ಗಿಂತ ಸೆಪ್ಟೆಂಬರ್‌ನಲ್ಲಿ ಏರಿಕೆ; 94,442 ಕೋಟಿ ರೂ. ಸಂಗ್ರಹ

67 ಲಕ್ಷ ಜಿಎಸ್‌ಟಿ ಅರ್ಜಿ ಸಲ್ಲಿಕೆ

Vijaya Karnataka Web 1 Oct 2018, 5:49 pm
ಹೊಸದಿಲ್ಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಕಳೆದ ಸೆಪ್ಟೆಂಬರ್‌ನಲ್ಲಿ ಏರಿಕೆಯಾಗಿದೆ.
Vijaya Karnataka Web ಜಿಎಸ್‌ಟಿ
ಜಿಎಸ್‌ಟಿ


ಕಳೆದ ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಜಿಎಸ್‌ಟಿ ಸಂಗ್ರಹ 94,442 ರೂಪಾಯಿಗಳಾಗಿದೆ. 67 ಲಕ್ಷ ಜಿಎಸ್‌ಟಿ ಅರ್ಜಿ ಸಲ್ಲಿಕೆಯಾಗಿದೆ.

ಈ ಪೈಕಿ ಸೆಂಟ್ರಲ್‌ ಜಿಎಸ್‌ಟಿ 15,318 ರೂಪಾಯಿಗಳು ಹಾಗೂ ರಾಜ್ಯ ಜಿಎಸ್‌ಟಿ 21,061 ರೂಪಾಯಿ. ಹಾಗೂ ಸಂಯೋಜಿತ ಜಿಎಸ್‌ಟಿ 50,070 ರೂಪಾಯಿಗಳಾಗಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಸೆಪ್ಟೆಂಬರ್‌ ತಿಂಗಳಿನಲ್ಲಿ ಕೇಂದ್ರ ಮತ್ತು ರಾಜ್ಯ ಜಿಎಸ್‌ಟಿ ಗಳಿಕೆ ಕ್ರಮವಾಗಿ 30,574 ರೂಪಾಯಿ ಹಾಗೂ 35,015 ರೂಪಾಯಿಗಳಾಗಿದೆ ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಗಸ್ಟ್‌ ತಿಂಗಳಿನಲ್ಲಿ ಜಿಎಸ್‌ಟಿ ಗಳಿಕೆ 93,690 ರೂ.ಗಳಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ