ಆ್ಯಪ್ನಗರ

ಜಿಎಸ್‌ಟಿ ಪ್ರಶ್ನೋತ್ತರ

ಜಿಎಸ್‌ಟಿಯಲ್ಲಿ ನೋಂದಣಿಗೆ ಎಷ್ಟು ದಿನ ಕಾಯಬಹುದು?

Vijaya Karnataka Web 14 Jul 2017, 9:00 am

ಜಿಎಸ್‌ಟಿಯಲ್ಲಿ ನೋಂದಣಿಗೆ ಎಷ್ಟು ದಿನ ಕಾಯಬಹುದು?

ರಾಮ್‌ ಗೋಪಾಲ್‌ ಶರ್ಮಾ

ಬೆಂಗಳೂರು

ಜಿಎಸ್‌ಟಿಯಲ್ಲಿ ನೋಂದಣಿಗೆ ಎಷ್ಟು ದಿನ ಕಾಯಬೇಕಾಗುತ್ತದೆ?

ಜಿಎಸ್‌ಟಿಯಲ್ಲಿ ನೋಂದಣಿಯ ಪ್ರಕ್ರಿಯೆ ಪೂರ್ಣಗೊಳ್ಳಲು ಅರ್ಜಿದಾರರು ಸುಮಾರು 30 ದಿನಗಳ ಕಾಲ ಕಾಯಬಹುದು.

ಗೋಪಾಲ್‌ ರಾವ್‌

ರಾಯಚೂರು

ನಾನು ಸೇವಾ ತೆರಿಗೆಯಲ್ಲಿ ನೋಂದಣಿಯಾಗಿದ್ದೇನೆ. ಆದರೆ ಜಿಎಸ್‌ಟಿಯಲ್ಲಿ ನೋಂದಣಿಯಾಗಲೇಬೇಕಾದ ಉತ್ತರದಾಯಿತ್ವ ಹೊಂದಿಲ್ಲ. ಇಂಥ ಸನ್ನಿವೇಶದಲ್ಲಿ ಏನು ಮಾಡಬಹುದು?

ನೀವು 2017ರ ಜುಲೈ 31ರೊಳಗೆ ನಿಮ್ಮ ತಾತ್ಕಾಲಿಕ ಐಡಿಯನ್ನು (ಜಿಎಸ್‌ಟಿ) ರದ್ದುಪಡಿಸಲು ಮನವಿ ಸಲ್ಲಿಸಬಹುದು.

ನಿತೀಶ್‌ ಕುಮಾರ್‌

ಬೆಂಗಳೂರು

ನಾನೊಬ್ಬ ರಫ್ತುದಾರ. ಸೇವಾ ತೆರಿಗೆಯಲ್ಲಿ ರಿಫಂಡ್‌ ಬರಬೇಕಾಗಿದೆ. ಈಗ ಜಿಎಸ್‌ಟಿ ಬಂದಿರುವುದರಿಂದ ಇದಕ್ಕೆ ಏನಾದರೂ ಸಮಸ್ಯೆ ಆಗಬಹುದೇ?

ಈ ಹಿಂದಿನ ಕಾನೂನು ಪ್ರಕಾರ ಬರಬೇಕಾಗಿರುವ ರಿಫಂಡ್‌, ಆ ಕಾನೂನು ಪ್ರಕಾರವಾಗಿಯೇ ನಿಮಗೆ ಅನ್ವಯವಾಗಲಿದೆ. ಆತಂಕ ಪಡಬೇಕಾದ ಅಗತ್ಯ ಇಲ್ಲ.

ರಾಜೇಶ್‌ ಶರ್ಮಾ

ಮಂಗಳೂರು

ಜಿಎಸ್‌ಟಿಯಲ್ಲಿ ನೋಂದಣಿಯಾಗದಿರುವ ಡೀಲರ್‌ಗಳಿಗೆ ಉತ್ಪನ್ನಗಳನ್ನು ಮಾರಾಟ ಮಾಡುವ ಸಂದರ್ಭ ಅವರ ಪ್ಯಾನ್‌, ಆಧಾರ್‌ ವಿವರಗಳನ್ನು ಪಡೆಯಬೇಕೆ?

ಹಾಗೇನಿಲ್ಲ. ನೋಂದಣಿಯಾಗದಿರುವ ಡೀಲರ್‌ಗಳ ಆಧಾರ್‌, ಪ್ಯಾನ್‌ ವಿವರ ಸಂಗ್ರಹಿಸಬೇಕು ಎನ್ನುವ ನಿಯಮ ಜಿಎಸ್‌ಟಿಯಡಿಯಲ್ಲಿ ಇಲ್ಲ.

ಉತ್ತರಿಸಿದ ತಜ್ಞರು

ಮನೋಹರ್‌ ಬೆಂಗಳೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ