ಆ್ಯಪ್ನಗರ

ಗುಜರಾತ್‌ನಲ್ಲಿ ಶೇ.85ರಷ್ಟು ಉದ್ಯೋಗ ಸ್ಥಳೀಯರಿಗೆ ಮೀಸಲು?

ಸರಕಾರದ ಈ ನಡೆಗೂ ಗುಜರಾತ್‌ನಲ್ಲಿ ಇತ್ತೀಚೆಗೆ ವಲಸಿಗರ ವಿರುದ್ಧ ನಡೆದಿರುವ ಪ್ರತಿಭಟನೆ, ಹಿಂಸಾಚಾರಕ್ಕೂ ಸಂಬಂಧ ಇಲ್ಲ ಎಂದು ರಾಜ್ಯದ ಕಾರ್ಮಿಕ ಸಚಿವ ದಿಲೀಪ್‌ ಠಾಕೂರ್‌ ತಿಳಿಸಿದ್ದಾರೆ. ಈಗಾಗಲೇ ಸರಕಾರ ಮಾರ್ಗದರ್ಶಿಯೊಂದನ್ನು ಬಿಡುಗಡೆಗೊಳಿಸಿದ್ದು, ಕೈಗಾರಿಕ ಘಟಕಗಳು ಶೇ.85ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೇ ಕೊಡಬೇಕು ಎಂದಿದೆ.

Vijaya Karnataka 20 Oct 2018, 10:48 am
ಗಾಂಧಿನಗರ: ಗುಜರಾತ್‌ನ ಉದ್ದಿಮೆಗಳಲ್ಲಿ ಶೇ.85ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ಕಡ್ಡಾಯವಾಗಿ ಒದಗಿಸುವ ಬಗ್ಗೆ ಸರಕಾರ ಹೊಸ ಕಾನೂನು ರಚಿಸಲು ಪರಿಶೀಲಿಸಿದೆ.
Vijaya Karnataka Web vijay rupani


ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಇತ್ತೀಚೆಗೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಹೀಗಿದ್ದರೂ, ಸರಕಾರದ ಈ ನಡೆಗೂ ಗುಜರಾತ್‌ನಲ್ಲಿ ಇತ್ತೀಚೆಗೆ ವಲಸಿಗರ ವಿರುದ್ಧ ನಡೆದಿರುವ ಪ್ರತಿಭಟನೆ, ಹಿಂಸಾಚಾರಕ್ಕೂ ಸಂಬಂಧ ಇಲ್ಲ ಎಂದು ರಾಜ್ಯದ ಕಾರ್ಮಿಕ ಸಚಿವ ದಿಲೀಪ್‌ ಠಾಕೂರ್‌ ತಿಳಿಸಿದ್ದಾರೆ. ಈಗಾಗಲೇ ಸರಕಾರ ಮಾರ್ಗದರ್ಶಿಯೊಂದನ್ನು ಬಿಡುಗಡೆಗೊಳಿಸಿದ್ದು, ಕೈಗಾರಿಕ ಘಟಕಗಳು ಶೇ.85ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೇ ಕೊಡಬೇಕು ಎಂದಿದೆ. ಹೀಗಿದ್ದರೂ ಇದಕ್ಕೆ ತಪ್ಪಿದರೆ ದಂಡನೆಯ ಕ್ರಮ ಸದ್ಯಕ್ಕಿಲ್ಲ. ಒಂದು ವೇಳೆ ಕಡ್ಡಾಯಗೊಳಿಸಿದರೆ, ಕಂಪನಿಗಳು ಅನುಸರಿಸುವುದೂ ಕಡ್ಡಾಯವಾಗಲಿದ್ದು, ತಪ್ಪಿದರೆ ದಂಡನೆಯ ಕ್ರಮ ಎದುರಿಸಬೇಕಾಗಿ ಬರಬಹುದು.

ಗುಜರಾತ್‌ ಕಾರ್ಮಿಕ ಇಲಾಖೆಯು ಸುಜುಕಿ ಮೋಟಾರ್‌ ಕಾರ್ಪೊರೇಷನ್‌ (ಎಸ್‌ಎಂಸಿ) ಮತ್ತು ಇತರ ಕಂಪನಿಗಳಿಗೆ ಈ ಮಾರ್ಗದರ್ಶಿಯನ್ನು ಪಾಲಿಸದಿರುವುದಕ್ಕೆ ಸಂಬಂಧಿಸಿ ನೋಟಿಸ್‌ ಜಾರಿಗೊಳಿಸಿದೆ. ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿಪುಲ್‌ ಮಿತ್ರ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.

ಶೇ.85ರಷ್ಟು ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕು ಎಂಬ ಮಾರ್ಗದರ್ಶಿಯ ಜಾರಿಯ ಬಗ್ಗೆ ಸಮೀಕ್ಷೆ ನಡೆಸಲಾಗಿದೆ. ಭಾರಿ ಕಂಪನಿಗಳ ಪೈಕಿ ಸುಜುಕಿ ಮೋಟಾರ್‌ ಕಾರ್ಪೊರೇಷನ್‌ನಲ್ಲಿ ಕೇವಲ ಶೇ.50ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡಲಾಗಿದೆ. ಒಟ್ಟಾರೆಯಾಗಿ ಉದ್ಯಮ ವಲಯದಲ್ಲಿ ಅನುಷ್ಠಾನ ತೃಪ್ತಿಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ