ಆ್ಯಪ್ನಗರ

ಎಚ್‌ಡಿಎಫ್‌ಸಿ ಬ್ಯಾಂಕಿಗೆ 4ನೇ ತ್ರೈಮಾಸಿಕದಲ್ಲಿ ₹8,434 ಕೋಟಿ ನಿವ್ವಳ ಲಾಭ!

ಎಚ್‌ಡಿಎಫ್‌ಸಿ ಬ್ಯಾಂಕ್‌ ಮಾರ್ಚ್ಗೆ ಅಂತ್ಯಗೊಂಡ 4ನೇ ತ್ರೈಮಾಸಿಕದಲ್ಲಿ 8,186.5 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭ ಶೇ. 18.2ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ 6,927.69 ಕೋಟಿ ರೂ. ಲಾಭ ಗಳಿಸಿತ್ತು.

Vijaya Karnataka Web 17 Apr 2021, 10:43 pm
ಮುಂಬಯಿ: ಎಚ್‌ಡಿಎಫ್‌ಸಿ ಬ್ಯಾಂಕ್‌ ಮಾರ್ಚ್ಗೆ ಅಂತ್ಯಗೊಂಡ 4ನೇ ತ್ರೈಮಾಸಿಕದಲ್ಲಿ 8,186.5 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಭ ಶೇ. 18.2ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ 6,927.69 ಕೋಟಿ ರೂ. ಲಾಭ ಗಳಿಸಿತ್ತು.
Vijaya Karnataka Web HDFC Bank


ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ ಇದಾಗಿದ್ದು, ನಿವ್ವಳ ಬಡ್ಡಿ ಆದಾಯ ಶೇ. 12.6ರಷ್ಟು ಹೆಚ್ಚಾಗಿದೆ. 17,120.15 ಕೋಟಿ ರೂ.ಗೆ ನಿವ್ವಳ ಬಡ್ಡಿ ಆದಾಯ ಮುಟ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 15,204.06 ಕೋಟಿ ರೂ. ಇತ್ತು.

ಮಾ. 15, 16ರಂದು ಬ್ಯಾಂಕ್‌ ಮುಷ್ಕರ, ಸತತ ನಾಲ್ಕು ದಿನ ಬ್ಯಾಂಕಿಂಗ್‌ ಸೇವೆ ಇಲ್ಲ

ದೇಶೀಯ ಚಿಲ್ಲರೆ ಸಾಲಗಳ ಪ್ರಮಾಣ ಶೇ. 6.7ರಷ್ಟು ಹೆಚ್ಚಾಗಿದ್ದರೆ, ಸಗಟು ಸಾಲಗಳ ಪ್ರಮಾಣ ಶೇ. 21.7ಕ್ಕೆ ಏರಿಕೆಯಾಗಿದೆ. ಒಟ್ಟು ಠೇವಣಿಗಳ ಮೊತ್ತವೂ 13,35,060 ಕೋಟಿ ರೂ.ಗೆ ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಠೇವಣಿ ಪ್ರಮಾಣವೂ ಶೇ.16.3ರಷ್ಟು ವೃದ್ಧಿಸಿದೆ.

ಗ್ರಾಹಕರೇ ಎಚ್ಚರ: ಕೆವೈಸಿ ಅಪ್‌ಡೇಟ್‌ ನೆಪದಲ್ಲಿ, ಡೆಬಿಟ್‌ ಕಾರ್ಡ್‌ ಮಾಹಿತಿ ಪಡೆದು ವಂಚನೆ

ನಿಬಂಧನೆ ಪೂರ್ವ ಕಾರ್ಯಾಚರಣೆಗಳಿಂದ ಗಳಿಸಿದ ಒಟ್ಟು ಲಾಭ 15,532.77 ಕೋಟಿ ರೂ.ಗಳಾಗಿವೆ. ಕಂಪನಿಯ ಬಡ್ಡಿಯೇತರ ಆದಾಯ 7,593.91 ಕೋಟಿ ರೂ. ತಲುಪಿದ್ದು, ಶೇ. 25.9ರಷ್ಟು ಬೆಳವಣಿಗೆ ಸಾಧಿಸಿದೆ. ತೆರಿಗೆ ಖರ್ಚುಗಳೂ ಶೇ. 18.1ರಷ್ಟು ಹೆಚ್ಚಳವಾಗಿದ್ದು 2,652.56 ಕೋಟಿ ರೂ.ಗೆ ಏರಿಕೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ