ಆ್ಯಪ್ನಗರ

ಚಕ್ರಬಡ್ಡಿ ಎಂದರೇನು? ಅದರ ಲೆಕ್ಕಾಚಾರ ಹೇಗೆ?

ಬಡ್ಡಿಯ ಮೇಲೆ ಚಕ್ರ ಬಡ್ಡಿಯನ್ನು ವಿಧಿಸುತ್ತಾ ಹೋಗುತ್ತಾರೆ. ಹೀಗಾಗಿ ಇದೊಂದು ಹೊರಬರಲಾಗದ ಸುಳಿಯಾಗಿ ಮಾರ್ಪಾಟಾಗುತ್ತದೆ. ಕೆಲವೊಮ್ಮೆ ಪಡೆದ ಮೂಲಧನಕ್ಕಿಂತ ಹೆಚ್ಚಿನ ಬಡ್ಡಿಯನ್ನು ಕಟ್ಟಿಯೂ ಸಾಲದ ಸುಳಿಯಿಂದ ಹೊರಬರಲಾಗದವರು ಇದ್ದಾರೆ.

Vijaya Karnataka 9 Sep 2019, 12:26 pm
ಬಡ್ಡಿಯ ಮೇಲೆ ಹಾಕುವ ಬಡ್ಡಿಯನ್ನು ಚಕ್ರಬಡ್ಡಿ ಎನ್ನುತ್ತಾರೆ. ಉದಾಹರಣೆ ನೋಡೋಣ- ನೀವು ಬ್ಯಾಂಕಿನಲ್ಲಿ ಪಿಪಿಎಫ್‌ ಖಾತೆ ತೆರೆದು ತಿಂಗಳಿಗೆ ಹತ್ತು ಸಾವಿರ ರೂಪಾಯಿ ಹೂಡಿಕೆ ಮಾಡುತ್ತೀರಿ ಎಂದುಕೊಳ್ಳಿ. ಬಡ್ಡಿಯ ದರ ಶೇ.7.9. ಮೊದಲ ತಿಂಗಳು ನಿಮ್ಮ ಹತ್ತು ಸಾವಿರದ ಮೇಲಿನ ಬಡ್ಡಿಯ ಮೊತ್ತ 65 ರೂಪಾಯಿ . ಮುಂದಿನ ತಿಂಗಳು ಮತ್ತೆ ನೀವು ಹತ್ತು ಸಾವಿರ ರೂ.ಗಳನ್ನು ನಿಗದಿತ ದಿನ ಅದೇ ಖಾತೆಯಲ್ಲಿ ಜಮಾ ಮಾಡಿದಾಗ ಬಡ್ಡಿಯನ್ನು ಹತ್ತುಸಾವಿರದ ಅರವತ್ತೈದು ರೂಪಾಯಿ ಮತ್ತು ಹೊಸದಾಗಿ ಜಮಾ ಮಾಡಿದ ಹತ್ತು ಸಾವಿರ ಕೂಡಿಸಿ ಒಟ್ಟು ಇಪ್ಪತ್ತು ಸಾವಿರದ ಅರವತ್ತೈದು ರೂಪಾಯಿಯ ಮೇಲೆ ಲೆಕ್ಕ ಹಾಕಲಾಗುತ್ತದೆ . ಸರಳವಾಗಿ ಹೇಳಬೇಕೆಂದರೆ ಪ್ರತಿ ತಿಂಗಳು ನಿಮ್ಮ ಹೂಡಿಕೆಯ ಮೊತ್ತದ ಮೇಲೆ ಬಂದ ಬಡ್ಡಿ ಮುಂದಿನ ತಿಂಗಳು ಬಡ್ಡಿ ದುಡಿಯುತ್ತದೆ. ಅಂದರೆ ಬಡ್ಡಿಯ ಮೇಲೆ ಬಡ್ಡಿ. ಇದನ್ನ ಹೂಡಿಕೆಯಲ್ಲಿ ಬಳಸಿಕೊಂಡರೆ ಹತ್ತಾರು ವರ್ಷದಲ್ಲಿ ಉತ್ತಮ ಹಣಕಾಸು ಸ್ಥಿತಿ ನಿಮ್ಮದಾಗುತ್ತದೆ .
Vijaya Karnataka Web Coumpound Intrst


ನಮ್ಮಲ್ಲಿ ಅನೇಕರಿಗೆ ಬ್ಯಾಂಕಿನಲ್ಲಿ ಸಾಲ ದೊರೆಯುವುದಿಲ್ಲ. ಏಕೆಂದರೆ ಅವರು ಕೇಳುವ ಹಲವಾರು ದಾಖಲೆ ಇರುವುದಿಲ್ಲ. ಜೊತೆಗೆ ಸಾಲ ನೀಡುವ ಪ್ರಕ್ರಿಯೆ ಕೂಡ ಹಲವಾರು ಮಜಲುಗಳನ್ನ ಹೊಂದಿದೆ. ಹೀಗಾಗಿ ಸುಲಭವಾಗಿ ಸಿಗುವ ಲೇವಾದೇವಿಗಾರರ ಬಳಿ ಹಣವನ್ನು ಸಾಲದ ರೂಪದಲ್ಲಿ ಪಡೆಯುತ್ತಾರೆ. ಇಲ್ಲಿ ಬಡ್ಡಿಯ ಮೇಲೆ ಚಕ್ರ ಬಡ್ಡಿಯನ್ನು ವಿಧಿಸುತ್ತಾ ಹೋಗುತ್ತಾರೆ. ಹೀಗಾಗಿ ಇದೊಂದು ಹೊರಬರಲಾಗದ ಸುಳಿಯಾಗಿ ಮಾರ್ಪಾಟಾಗುತ್ತದೆ. ಕೆಲವೊಮ್ಮೆ ಪಡೆದ ಮೂಲಧನಕ್ಕಿಂತ ಹೆಚ್ಚಿನ ಬಡ್ಡಿಯನ್ನು ಕಟ್ಟಿಯೂ ಸಾಲದ ಸುಳಿಯಿಂದ ಹೊರಬರಲಾಗದವರು ಇದ್ದಾರೆ.

ಚಕ್ರಬಡ್ಡಿ ಅಥವಾ ಕಾಪೌಂಡ್‌ ಇಂಟರೆಸ್ಟ್‌ ಎನ್ನುವುದರ ಮಹತ್ವ ತಿಳಿದರೆ ಮತ್ತು ಅದನ್ನು ಸರಿಯಾಗಿ ಬಳಸಿದರೆ ಆರ್ಥಿಕವಾಗಿ ನೀವು ನಿಶ್ಚಿಂತರಾಗಿರಬಹುದು .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ