ಆ್ಯಪ್ನಗರ

3,045 ಕೋಟಿ ರೂ.ಗೆ ‘ಹಾರ್ಲಿಕ್ಸ್‌’ ಖರೀದಿಸಿದ ಹಿಂದೂಸ್ಥಾನ್‌ ಯುನಿಲೆವರ್‌

ಹಾರ್ಲಿಕ್ಸ್‌ ಬ್ರ್ಯಾಂಡ್‌ ಖರೀದಿಯ ಜೊತೆಗೆ ‘ಜಿಎಸ್‌ಕೆ ಕನ್ಸ್ಯೂಮರ್‌ ಹೆಲ್ತ್‌ ಕೇರ್‌’ ಕಂಪನಿ ಎಚ್‌ಯುಎಲ್‌ನಲ್ಲಿ ವಿಲೀನವಾಗಲಿದೆ. 31,700 ಕೋಟಿ ರೂಪಾಯಿಗೆ ಈ ಕಂಪನಿಯನ್ನು ಎಚ್‌ಯುಎಲ್‌ ಖರೀದಿಸಿದೆ.

THE ECONOMIC TIMES 1 Apr 2020, 7:32 pm
ಮುಂಬಯಿ: ಜನಪ್ರಿಯ ಬ್ರ್ಯಾಂಡ್‌ ‘ಹಾರ್ಲಿಕ್ಸ್‌’ನ್ನು ಭಾರತದ ಅತೀ ದೊಡ್ಡ ಎಫ್‌ಎಂಸಿಜಿ ಕಂಪನಿ ಹಿಂದೂಸ್ಥಾನ್‌ ಯುನಿಲೆವರ್‌ ಲಿ. (ಎಚ್‌ಯುಎಲ್‌) ಖರೀದಿಸಿದೆ. 3,045 ಕೋಟಿ ರೂಪಾಯಿಗೆ ಜಿಎಸ್‌ಕೆ ಕೈಯಿಂದ ಹಾರ್ಲಿಕ್ಸ್‌ನ್ನು ಭಾರತದ ಮಾರುಕಟ್ಟೆಗಾಗಿ ಖರೀದಿಸಿರುವುದಾಗಿ ಕಂಪನಿ ತಿಳಿಸಿದೆ.
Vijaya Karnataka Web Horlicks


ಇದರ ಜೊತೆಗೆ ‘ಗ್ಲಾಕ್ಸೊಸ್ಮಿತ್‌ಲೈನ್‌ ಕನ್ಸ್ಯೂಮರ್‌ ಹೆಲ್ತ್‌ ಕೇರ್‌ (ಜಿಎಸ್‌ಕೆ ಸಿಎಚ್‌)’ ಕಂಪನಿ ಎಚ್‌ಯುಎಲ್‌ನಲ್ಲಿ ವಿಲೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಒಪ್ಪಂದ 2018ರ ಡಿಸೆಂಬರ್‌ನಲ್ಲೇ ಅಂತಿಮಗೊಂಡಿತ್ತು. 31,700 ಕೋಟಿ ರೂಪಾಯಿಗೆ ಈ ಕಂಪನಿಯನ್ನು ಎಚ್‌ಯುಎಲ್‌ ಖರೀದಿಸಿದೆ. ಈ ಖರೀದಿಯೊಂದಿಗೆ ಬೂಸ್ಟ್‌, ಮಾಲ್ಟೋವಾ, ವಿವಾ ಬ್ರ್ಯಾಂಡ್‌ಗಳೂ ಎಚ್‌ಯುಎಲ್‌ ತೆಕ್ಕೆಗೆ ಬರಲಿವೆ.

ಈ ಖರೀದಿಯ ಜೊತೆಗೆ ಇದೀಗ ಹಿಂದೂಸ್ಥಾನ್‌ ಯುನಿಲೆವರ್‌ ಲಿ. ಮತ್ತು ಅದರ ಮೂಲ ಸಂಸ್ಥೆ ಯುನಿಲೆವರ್‌ ಹಾರ್ಲಿಕ್ಸ್‌ ಬ್ಯಾಂಡ್‌ನ್ನು ಬಳಸಿಕೊಳ್ಳಲಿದ್ದು ಇದಕ್ಕಾಗಿ ಜಿಎಸ್‌ಕೆ ಸಂಸ್ಥೆಗೆ ಭಾರಿ ಮೊತ್ತದ ರಾಯಧನ ನೀಡಲಿದೆ.

ಇದರಿಂದ ಆಹಾರ ಮತ್ತು ಪಾನೀಯಗಳ ಕ್ಷೇತ್ರದಲ್ಲಿ ಎಚ್‌ಯುಎಲ್‌ ಮತ್ತಷ್ಟು ಬಲಿಷ್ಠವಾಗಲಿದೆ. ಈಗಾಗಲೇ ಕ್ನೋರ್‌ ಸೂಪ್‌, ಕಿಸಾನ್‌ ಜಾಮ್‌, ಬ್ರೂ ಕಾಫಿ, ಲಿಪ್ಟಾನ್‌ ಟೀ ಮೊದಲಾದ ಜನಪ್ರಿಯ ಬ್ರ್ಯಾಂಡ್‌ಗಳು ಎಚ್‌ಯುಎಲ್‌ ತೆಕ್ಕೆಯಲ್ಲಿವೆ. ಮಾಲ್ಟೆಡ್‌ ಪಾನೀಯ ಕ್ಷೇತ್ರದಲ್ಲಿ ಹಾರ್ಲಿಕ್ಸ್‌ ಶೇಕಡಾ 50 ಕ್ಕಿಂತ ಹೆಚ್ಚಿನ ಪಾಲು ಹೊಂದಿರುವುದರಿಂದ ಈ ಕ್ಷೇತ್ರದಲ್ಲಿ ಎಚ್‌ಯುಎಲ್‌ ಮಾರುಕಟ್ಟೆ ಮತ್ತಷ್ಟು ವಿಸ್ತಾರವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ