ಆ್ಯಪ್ನಗರ

ಕಮಲಾಕ್ಷಿ ಸೊಸೈಟಿಯಲ್ಲಿ ನೂರಾರು ಕೋಟಿ ರೂ. ಹಗರಣ, ತಲೆಮರೆಸಿಕೊಂಡಿದ್ದ ಸೊಸೈಟಿ ಅಧ್ಯಕ್ಷ ಬಂಧನ

ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸೊಸೈಟಿಯಲ್ಲಿ ನೂರಾರು ಕೋಟಿ ರೂ. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಆರೋಪಿ, ಬ್ಯಾಂಕ್‌ ಅಧ್ಯಕ್ಷ ಬಿ.ವಿ. ಲಕ್ಷ್ಮೀ ನಾರಾಯಣರನ್ನು ಬ್ರಹ್ಮಾವರ ತಾಲೂಕಿನ ಮಟಪಾಡಿಯಲ್ಲಿ ಪೊಲೀಸರ ಬಂಧಿಸಿದ್ದಾರೆ.

Vijaya Karnataka Web 29 Dec 2022, 8:13 am

ಹೈಲೈಟ್ಸ್‌:

  • ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸೊಸೈಟಿಯಲ್ಲಿ ನೂರಾರು ಕೋಟಿ ರೂ. ವಂಚನೆ
  • ವಂಛನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆ ಮರೆಸಿಕೊಂಡಿದ್ದ ಆರೋಪಿ, ಬ್ಯಾಂಕ್‌ ಅಧ್ಯಕ್ಷ ಬಿ.ವಿ. ಲಕ್ಷ್ಮೀ ನಾರಾಯಣ
  • ಬಿ.ವಿ. ಲಕ್ಷ್ಮೀ ನಾರಾಯಣ ಬ್ರಹ್ಮಾವರ ತಾಲೂಕಿನ ಮಟಪಾಡಿಯಲ್ಲಿ ಬಂಧಿಸಿದ ಪೊಲೀಸರು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಉಡುಪಿ: ಉಡುಪಿ ಸಂಸ್ಕೃತ ಕಾಲೇಜು ಮುಂಭಾಗದಲ್ಲಿನ ಉಡುಪಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರಿ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ ಠೇವಣಿದಾರರಿಗೆ ನೂರಾರು ಕೋಟಿ ರೂ. ವಂಚಿಸಿ ತಲೆಮರೆಸಿಕೊಂಡಿದ್ದ ಸೊಸೈಟಿ ಅಧ್ಯಕ್ಷ ಬಿ.ವಿ. ಲಕ್ಷ್ಮೀ ನಾರಾಯಣ ಉಪಾಧ್ಯಾಯ ಎಂಬಾತನನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಬುಧವಾರ ತಡರಾತ್ರಿ ಬಂಧಿಸಿದ್ದಾರೆ.
ಸೊಸೈಟಿಯಲ್ಲಿ ನೂರಾರು ಕೋಟಿ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅಧ್ಯಕ್ಷ ತಲೆ ಮರೆಸಿಕೊಂಡಿದ್ದ ಆರೋಪಿ ಬಿ.ವಿ. ಲಕ್ಷ್ಮೀ ನಾರಾಯಣರನ್ನು ಬ್ರಹ್ಮಾವರ ತಾಲೂಕಿನ ಮಟಪಾಡಿಯಲ್ಲಿ ಪೊಲೀಸರ ಬಂಧಿಸಿದ್ದಾರೆ.

ಆರೋಪಿ ಲಕ್ಷ್ಮೀನಾರಾಯಣ ತನ್ನ ಸೊಸೈಟಿಯಲ್ಲಿ ಠೇವಣಿದಾರರಿಗೆ ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ಹಲವಾರು ಮಂದಿಯಿಂದ ಕೋಟ್ಯಂತರ ರೂ. ಠೇವಣಿ ಸಂಗ್ರಹಿಸಿದ್ದ. ಆದರೆ ಕೆಲ ತಿಂಗಳಿನಿಂದ ಸರಿಯಾಗಿ ಬಡ್ಡಿ ಪಾವತಿಸುತ್ತಿರಲಿಲ್ಲ.‌ ಹಣ ಹಿಂದೆ ಕೇಳಿದ ಠೇವಣಿದಾರರಿಗೆ ಹಣ ಹಿಂದಿರುಗಿಸದೆ ವಂಚಿಸಿ ತಲೆಮರೆಸಿಕೊಂಡಿದ್ದ.

ಉಡುಪಿಯ ಕಮಲಾಕ್ಷಿ ಸೊಸೈಟಿ ಬ್ಯಾಂಕ್ ನಲ್ಲಿ ಕೋಟ್ಯಾಂತರ ರೂ. ವಂಚನೆ: ಆರೋಪ
ಈ ಬಗ್ಗೆ ಹತ್ತಾರು ಮಂದಿ ಠೇವಣಿದಾರರು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಲ್ಲದೇ ಸೊಸೈಟಿಗೆ ಮುತ್ತಿಗೆ ಕೂಡ ಹಾಕಿದ್ದರು. ಈ ವೇಳೆ ಮಹಿಳಾ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ ನಡೆಸಿದ್ದರು.

ದೂರಿನ ಹಿನ್ನೆಲೆಯಲ್ಲಿ ಸೆನ್ ಅಪರಾಧ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ ಅವರ ನೇತೃತ್ವದಲ್ಲಿ ತನಿಖೆ ಕೈಗೆತ್ತಿಕೊಂಡ ಪೊಲೀಸರಿಗೆ ಬ್ರಹ್ಮಾವರದ ಮಟಪಾಡಿಯಲ್ಲಿ ಆರೋಪಿ ಇರುವ ಖಚಿತ ಸುಳಿವು ಸಿಕ್ಕಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಮಟಪಾಡಿಯಲ್ಲಿ ಆರೋಪಿ ಲಕ್ಷ್ಮೀನಾರಾಯಣನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಠೇವಣಿದಾರರು ಲಕ್ಷ್ಮೀನಾರಾಯಣ ವಿರುದ್ಧ ದೂರು‌ ನೀಡಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಸರ್ಜ್ ವಾರೆಂಟ್ ಪಡೆದ ಪೊಲೀಸರು ವಾರದ ಹಿಂದಷ್ಟೇ ಸೊಸೈಟಿ ಬಾಗಿಲು ತೆರೆದು ತಪಾಸಣೆ ನಡೆಸಿದ್ದರು. ಕೀ ಮೇಕರ್ ಅವರನ್ನು ಕರೆಸಿ ಸೊಸೈಟಿ ಲಾಕರ್ ಬಾಗಿಲು ತೆರೆದು ಬೇಕಾದ ಅಗತ್ಯ ಮಾಹಿತಿ ಸಂಗ್ರಹಿಸಲಾಗಿತ್ತು. ಕಂಪ್ಯೂಟರ್‌ ಜಾಲಾಡಿದ ಪೊಲೀಸರು ಅಲ್ಲಿಂದ ಕೆಲ ಮಾಹಿತಿ, ದಾಖಲೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆದುಕೊಂಡಿದ್ದರು. ಸೊಸೈಟಿಗೆ ಬೀಗ ಜಡಿದು ಸೀಲ್ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ