ಆ್ಯಪ್ನಗರ

ರಷ್ಯಾ - ಉಕ್ರೇನ್‌ ಸಂಘರ್ಷದಿಂದ ಭಾರತದ ಗೋಧಿಗೆ ಹೆಚ್ಚಿದ ಬೇಡಿಕೆ, ರಫ್ತು ಏರಿಕೆ ಸಾಧ್ಯತೆ

ಸತತ 5 ವರ್ಷಗಳಿಂದ ದೇಶದಲ್ಲಿ ಬಂಪರ್‌ ಗೋಧಿ ಉತ್ಪಾದನೆಯಾಗುತ್ತಿದ್ದು, ರಫ್ತು ಅವಕಾಶಕ್ಕಾಗಿ ಸರಕಾರ ಮತ್ತು ಖಾಸಗಿ ವಲಯ ನಿರೀಕ್ಷೆಯಿಂದ ಕಾಯುತ್ತಿತ್ತು. ಇದೀಗ ಯುದ್ಧದ ಸ್ವರೂಪದಲ್ಲಿ ಅವಕಾಶದ ಬಾಗಿಲು ತೆರೆಯುತ್ತಿದೆ.

Vijaya Karnataka Web 2 Mar 2022, 10:05 am
ಹೊಸದಿಲ್ಲಿ: ರಷ್ಯಾ - ಉಕ್ರೇನ್‌ ವಲಯದಲ್ಲಿ ಸಂಘರ್ಷದ ಪರಿಣಾಮ ಅಲ್ಲಿನ ಗೋಧಿ ರಫ್ತು ಕುಸಿಯುವ ಹಾಗೂ ಭಾರತದ ಗೋಧಿ ರಫ್ತು ಹೆಚ್ಚಳವಾಗುವ ಸಾಧ್ಯತೆ ಉಂಟಾಗಿದೆ.
Vijaya Karnataka Web wheat


ಸತತ ಐದು ವರ್ಷಗಳಿಂದ ಬಂಪರ್‌ ಗೋಧಿ ಉತ್ಪಾದನೆಯ ಬಳಿಕ ರಫ್ತು ಅವಕಾಶಕ್ಕಾಗಿ ಸರಕಾರ ಮತ್ತು ಖಾಸಗಿ ವಲಯ ಕಾಯುತ್ತಿತ್ತು. ಇದೀಗ ಅವಕಾಶದ ಬಾಗಿಲು ತೆರೆಯುತ್ತಿದೆ. ಭಾರತ ಕಳೆದ ವರ್ಷ 2 ಕೋಟಿ ಟನ್‌ ಅಕ್ಕಿ ರಫ್ತು ಮಾಡಿತ್ತು. ಜಾಗತಿಕ ಮಟ್ಟದಲ್ಲಿ ದರ ಕುಸಿತದ ಪರಿಣಾಮ ಗೋಧಿ ರಫ್ತು ನಿರೀಕ್ಷಿತ ಮಟ್ಟದಲ್ಲಿ ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಗೋಧಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುವ ಸಾಧ್ಯತೆ ಇದೆ ಎಂದು ಒಲಾಮ್‌ ಆಗ್ರೊ ಇಂಡಿಯಾದ ಉಪಾಧ್ಯಕ್ಷ ನಿತಿನ್‌ ಗುಪ್ತಾ ತಿಳಿಸಿದ್ದಾರೆ.

ವಿಶ್ವ ಮಾರುಕಟ್ಟೆಯಲ್ಲಿ ಗೋಧಿಯ ಲಭ್ಯತೆ ಏಪ್ರಿಲ್‌ - ಮೇ ತನಕ ಸೀಮಿತವಾಗಿದೆ. ಹೀಗಾಗಿ ಈ ಅವಕಾಶವನ್ನು ಭಾರತ ಸುಲಭವಾಗಿ ಬಳಸಿಕೊಳ್ಳಬಹುದು. ದೇಶ 2021ರಲ್ಲಿ 61 ಲಕ್ಷ ಟನ್‌ ಗೋಧಿ ರಫ್ತು ಮಾಡಿತ್ತು. 2020ರಲ್ಲಿ 11 ಲಕ್ಷ ಟನ್‌ ರಫ್ತು ಮಾಡಿತ್ತು. ಈ ವರ್ಷ ರಷ್ಯಾ - ಉಕ್ರೇನ್‌ ಸಂಘರ್ಷದಿಂದ ಗೋಧಿಯ ರಫ್ತು ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.

ಕಾಫಿ, ಗೋಧಿ, ಜವಳಿ ರಫ್ತು ಭಾರಿ ಹೆಚ್ಚಳ; ಕಾಫಿ ಬೆಳೆಗಾರರಿಗೆ ಸಂತಸದ ಸುದ್ದಿ
ಹಲವು ವರ್ಷಗಳ ನಂತರ ಮೊದಲ ಬಾರಿಗೆ ಭಾರತದ ಗೋಧಿಗೆ ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಬಾಂಗ್ಲಾದೇಶ, ಫಿಲಿಪ್ಪೀನ್ಸ್‌, ದಕ್ಷಿಣ ಕೊರಿಯಾ, ಶ್ರೀಲಂಕಾ, ಯುಎಇ, ಲೆಬನಾನ್‌ ಭಾರತೀಯ ಗೋಧಿಯನ್ನು ಖರೀದಿಸುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ