ಹೊಸದಿಲ್ಲಿ: ಭಾರತ ಕಳೆದ 2020-21ರ ಏಪ್ರಿಲ್ - ಜನವರಿ ಅವಧಿಯಲ್ಲಿ 72 ಶತಕೋಟಿ ಡಾಲರ್ (ಅಂದಾಜು 5.25 ಲಕ್ಷ ಕೋಟಿ ರೂಪಾಯಿ) ವಿದೇಶಿ ನೇರ ಬಂಡವಾಳ ಹೂಡಿಕೆ ಗಳಿಸಿದೆ ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ. 2019-20ರ ಇದೇ ಅವಧಿಗೆ ಹೋಲಿಸಿದರೆ ಹೂಡಿಕೆ ಶೇಕಡಾ 15ರಷ್ಟು ಏರಿಕೆಯಾಗಿದೆ. ಜತೆಗೆ ಇದು ಈವರೆಗೆ ಯಾವುದೇ ವರ್ಷದಲ್ಲಿ ಆರ್ಥಿಕ ವರ್ಷದ ಮೊದಲ 10 ತಿಂಗಳಲ್ಲಿ ಹೂಡಿಕೆಯಾದ ಗರಿಷ್ಠ ಮೊತ್ತವಾಗಿದೆ. ಕಳೆದ 2020-21ರ ಮೊದಲ 10 ತಿಂಗಳುಗಳಲ್ಲಿ ಸಿಂಗಾಪುರದಿಂದ ಅತಿ ಹೆಚ್ಚು ಈಕ್ವಿಟಿ ಹೂಡಿಕೆ (ಶೇ. 30.28) ಹರಿದು ಬಂದಿದೆ. ಅಮೆರಿಕದಿಂದ ಶೇ. 24.28, ಯುಎಇಯಿಂದ ಶೇ. 7.31 ಈಕ್ವಿಟಿ ಹೂಡಿಕೆ ಲಭಿಸಿದೆ.
ಕಂಪ್ಯೂಟರ್ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ವಲಯಕ್ಕೆ 2020-21ರ ಮೊದಲ 10 ತಿಂಗಳುಗಳಲ್ಲಿ ಅತಿ ಹೆಚ್ಚು ಹೂಡಿಕೆ ಹರಿದು ಬಂದಿದ್ದರೆ ( ಶೇ. 45), ನಿರ್ಮಾಣ ವಲಯದಲ್ಲಿ (ಶೇ. 13) ಮತ್ತು ಸೇವಾ ವಲಯದಲ್ಲಿ(ಶೇ. 8) ಹೂಡಿಕೆಯಾಗಿದೆ.
ಕಂಪ್ಯೂಟರ್ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ ವಲಯಕ್ಕೆ 2020-21ರ ಮೊದಲ 10 ತಿಂಗಳುಗಳಲ್ಲಿ ಅತಿ ಹೆಚ್ಚು ಹೂಡಿಕೆ ಹರಿದು ಬಂದಿದ್ದರೆ ( ಶೇ. 45), ನಿರ್ಮಾಣ ವಲಯದಲ್ಲಿ (ಶೇ. 13) ಮತ್ತು ಸೇವಾ ವಲಯದಲ್ಲಿ(ಶೇ. 8) ಹೂಡಿಕೆಯಾಗಿದೆ.