ಆ್ಯಪ್ನಗರ

ಇರಾನ್‌ ತೈಲ ಆಮದು ಬಗ್ಗೆ ಮುಂದುವರಿದ ಮಾತುಕತೆ

ರಷ್ಯಾದ ಜತೆ ಎಸ್‌-400 ಕ್ಷಿಪಣಿಗಳ ಡೀಲ್‌ ಹಾಗೂ ಇರಾನ್‌ ತೈಲ ಆಮದಿಗ ಅಗತ್ಯತೆ ಬಗ್ಗೆ ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ. ಹಲವು ಹಂತಗಳಲ್ಲಿ ಅಮೆರಿಕಕ್ಕೆ ಭಾರತದ ನಿಲುವುಗಳನ್ನು ಸ್ಪಷ್ಟಪಡಿಸಲಾಗಿದೆ.

Vijaya Karnataka 20 Oct 2018, 8:53 am
ಹೊಸದಿಲ್ಲಿ: ಇರಾನ್‌ನಿಂದ ಕಚ್ಚಾ ತೆಲವನ್ನು ಆಮದು ಮಾಡುವುದಕ್ಕೆ ಸಂಬಂದಿಸಿ ಅಮೆರಿಕದ ಜತೆಗೆ ಭಾರತ ಮಾತುಕತೆ ಮುಂದುವರಿಸಿದೆ.
Vijaya Karnataka Web trump modi


ರಷ್ಯಾದ ಜತೆ ಎಸ್‌-400 ಕ್ಷಿಪಣಿಗಳ ಡೀಲ್‌ ಹಾಗೂ ಇರಾನ್‌ ತೈಲ ಆಮದಿಗ ಅಗತ್ಯತೆ ಬಗ್ಗೆ ಅಮೆರಿಕಕ್ಕೆ ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ತಿಳಿಸಿದ್ದಾರೆ.

ಹಲವು ಹಂತಗಳಲ್ಲಿ ಅಮೆರಿಕಕ್ಕೆ ಭಾರತದ ನಿಲುವುಗಳನ್ನು ಸ್ಪಷ್ಟಪಡಿಸಲಾಗಿದೆ. ಇದರಿಂದ ಭಾರತದ ಪರಿಸ್ಥಿತಿ, ನಿರೀಕ್ಷೆಗಳ ಬಗ್ಗೆ ಅಮೆರಿಕಕ್ಕೆ ಚೆನ್ನಾಗಿ ಅರ್ಥವಾಗಲಿದೆ ಎಂದು ಅವರು ಹೇಳಿದರು. ಅಮೆರಿಕ ನವೆಂಬರ್‌ 4ರಿಂದ ಇರಾನ್‌ ವಿರುದ್ಧ ಕಠಿಣ ಆರ್ಥಿಕ ನಿರ್ಬಂಧಗಳನ್ನು ಜಾರಿಗೆ ತರಲು ಉದ್ದೇಶಿಸಿದೆ. ಹಾಗೂ ಎಲ್ಲ ರಾಷ್ಟ್ರಗಳೂ ಇರಾನ್‌ ತೈಲ ಖರೀದಿಸುವುದನ್ನು ಬಿಟ್ಟುಬಿಡಬೇಕು ಎಂದು ಬಯಸಿದೆ. ಆದರೆ ಇರಾನ್‌ ತೈಲ ಭಾರತದ ಆರ್ಥಿಕ ಪ್ರಗತಿಗೆ ಅವಶ್ಯಕವಾಗಿದ್ದು, ತಪ್ಪಿದರೆ ಸಮಸ್ಯೆಯಾಗಲಿದೆ. ನೇರವಾಗಿ ಜನಸಾಮಾನ್ಯರಿಗೆ ಇದು ಹೊರೆಯಾಗಲಿದೆ ಎಂದು ಭಾರತ ಅಮೆರಿಕಕ್ಕೆ ತಿಳಿಸಿದೆ.

ಪೆಟ್ರೋಲ್‌ ದರ ಅಲ್ಪ ಇಳಿಕೆ:

ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ 13 ದಿನಗಳ ನಂತರ ಇಳಿಕೆಯಾಗಿದೆ. ದಸರಾ ಸಂಭ್ರಮದಲ್ಲಿರುವ ಜನತೆಗೆ ಇದು ನಿರಾಳವಾಗುವ ಸುದ್ದಿ.

ಪೆಟ್ರೋಲ್‌ನಲ್ಲಿ 21 ಪೈಸೆ, ಡೀಸೆಲ್‌ 11 ಪೈಸೆ ಇಳಿದಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 83.03 ರೂ. ಹಾಗೂ ಡೀಸೆಲ್‌ ದರ 75.87 ರೂ.ಗೆ ತಗ್ಗಿದೆ. ಹೊಸದಿಲ್ಲಿಯಲ್ಲಿ ಪೆಟ್ರೋಲ್‌ಗೆ 82.38 ರೂ. ಹಾಗೂ ಡೀಸೆಲ್‌ಗೆ 75.48 ರೂ.ಗೆ ಇಳಿಸಿದೆ. ಚೀನಾದ ಷೇರು ಮಾರುಕಟ್ಟೆಯ ಕುಸಿತ ಜಾಗತಿಕ ಮಟ್ಟದ ಕಚ್ಚಾ ತೈಲದ ದರಗಳ ಮೇಲೂ ಪ್ರಭಾವ ಬೀರಿದ್ದು, ಇಳಿಕೆಗೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ