ಆ್ಯಪ್ನಗರ

ಹೆಚ್ಚಿನ ಎಟಿಎಂ ಕೇಂದ್ರಗಳಿಗೆ ಬೀಗ

ದೇಶದಲ್ಲಿ ಎಟಿಎಂಗಳ ಬಳಕೆಯನ್ನು ಜನರು ಹೆಚ್ಚಿಸಿದ್ದಾರೆ...

TNN 16 May 2019, 5:00 am
ಹೊಸದಿಲ್ಲಿ: ದೇಶದಲ್ಲಿ ಎಟಿಎಂಗಳ ಬಳಕೆಯನ್ನು ಜನರು ಹೆಚ್ಚಿಸಿದ್ದಾರೆ. ಆದಾಗ್ಯೂ, ಮುಂದಿನ ದಿನಗಳಲ್ಲಿ ಬಹುತೇಕ ಎಟಿಎಂ ಕೇಂದ್ರಗಳು ಕಣ್ಮರೆಯಾಗಲಿವೆ!
Vijaya Karnataka Web ATM


ಎಟಿಎಂ ಕೇಂದ್ರಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸರಕಾರ ಜಾರಿಗೊಳಿಸಿದ ಕಠಿಣ ನಿಯಮಗಳು ಬ್ಯಾಂಕ್‌ಗಳಿಗೆ ಹೊರೆಯಾಗಿ ಪರಿಣಮಿಸಿವೆ. ಎಟಿಎಂ ಕೇಂದ್ರಗಳ ನಿರ್ವಹಣೆಗೆ ಹೆಚ್ಚಿನ ವೆಚ್ಚವನ್ನು ಈಗ ಭರಿಸಬೇಕಾಗಿದೆ. ಕಳೆದ ಎರಡು ವರ್ಷಗಳಲ್ಲಿ ಎಟಿಎಂ ಕೇಂದ್ರಗಳ ಬಳಕೆ ಗಣನೀಯವಾಗಿ ಹೆಚ್ಚಿರುವುದನ್ನು ರಿಸರ್ವ್‌ ಬ್ಯಾಂಕ್‌ ಶನಿವಾರ ಬಿಡುಗಡೆ ಮಾಡಿರುವ ಅಂಕಿಅಂಶಗಳು ಸ್ಪಷ್ಟಪಡಿಸಿವೆ.

ಬ್ರಿಕ್ಸ್‌ ದೇಶಗಳ ಪೈಕಿ ಹೆಚ್ಚು ಗ್ರಾಹಕರಿಗೆ ಕಡಿಮೆ ಎಟಿಎಂಗಳನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. 1 ಲಕ್ಷ ಜನರಿಗೆ ಎರಡಂಕಿಯ ಎಟಿಎಂ ಹೊಂದಿರುವ ದೇಶಗಳು ಬ್ರಿಕ್ಸ್‌ನಲ್ಲಿವೆ ಎನ್ನುವ ಅಂಶ ಐಎಂಎಫ್‌ ವರದಿಯಲ್ಲಿದೆ. ಭಾರತದಲ್ಲಿ 1 ಲಕ್ಷ ಜನರಿಗೆ 22 ಎಟಿಎಂಗಳಿವೆ. ಇಷ್ಟೇ ಜನಸಂಖ್ಯೆಗೆ ರಷ್ಯಾದಲ್ಲಿ 164, ಬ್ರೆಜಿಲ್‌ನಲ್ಲಿ 107, ಚೀನಾದಲ್ಲಿ 81, ದಕ್ಷಿಣ ಆಫ್ರಿಕಾದಲ್ಲಿ 68 ಎಟಿಎಂಗಳಿವೆ.

ಕೇಂದ್ರ ಸರಕಾರವು ನಗದುರಹಿತ ವ್ಯವಸ್ಥೆ ಉತ್ತೇಜಿಸಲು ನಾನಾ ಕ್ರಮ ಕೈಗೊಳ್ಳುತ್ತಿದ್ದರೂ, ದೇಶದಲ್ಲಿ ಈಗಲೂ 'ನಗದೇ ರಾಜ'. ನೋಟು ಅಮಾನ್ಯತೆ ಸಂದರ್ಭದಲ್ಲಿ ನಗದು ವಹಿವಾಟು ಇಳಿಕೆಯಾಗಿದ್ದು, ಬಿಟ್ಟರೇ ಈಗ ಹೆಚ್ಚಿನ ನಗದು ಜನರ ಕೈಯಲ್ಲಿ ಚಲಾವಣೆಯಾಗುತ್ತಿದೆ. ನಿರ್ವಹಣೆ ವೆಚ್ಚ ಭರಿಸಲಾಗದೇ, ಈಗಾಗಲೇ ಅನೇಕ ಎಟಿಎಂಗಳನ್ನು ಮುಚ್ಚಲಾಗಿದೆ.

ಸಮಸ್ಯೆ ಏನು?
ರಿಸರ್ವ್‌ ಬ್ಯಾಂಕ್‌ನ ಸೂಚನೆ ಮೇರೆಗೆ ಎಟಿಎಂಗಳಲ್ಲಿನ ಹಳೆಯ ಸಾಫ್ಟ್‌ವೇರ್‌ಗಳನ್ನು ಬದಲಿಸಲಾಗಿದೆ. ಸಾಫ್ಟ್‌ವೇರ್‌ನ ವೆಚ್ಚ, ಸಾಧನವನ್ನು ಅಪ್‌ಗ್ರೇಡ್‌ ಮಾಡುವ ವೆಚ್ಚವು ದುಬಾರಿಯಾಗಿದೆ. ಇದರ ಜೊತೆಗೆ ಎಟಿಎಂಗೆ ಹೆಚ್ಚಿನ ಭದ್ರತಾ ವ್ಯವಸ್ಥೆಯನ್ನು ನೀಡಬೇಕಾಗಿದೆ. ಇದರಿಂದ ಬ್ಯಾಂಕ್‌ಗಳು ಮತ್ತು ಎಟಿಎಂ ನಿರ್ವಹಣೆ ಸಂಸ್ಥೆಗಳಿಗೆ ಹೆಚ್ಚಿನ ಹೊರೆ ಬೀಳುತ್ತಿದೆ. ಅನೇಕ ಬ್ಯಾಂಕ್‌ಗಳು ಎಟಿಎಂ ನಿರ್ವಹಣೆಯನ್ನು ಥರ್ಟ್‌ ಪಾರ್ಟಿಗೆ ಒಪ್ಪಿಸಿವೆ. ಅದರ ವೆಚ್ಚ ಏರಿಕೆಯಾಗುತ್ತಿದೆ.

ಗ್ರಾಮೀಣ ಜನರಿಗೆ ಕಷ್ಟ
''ಎಟಿಎಂಗಳನ್ನು ಮುಚ್ಚುವುದರಿಂದ ಆರ್ಥಿಕವಾಗಿ ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಹೆಚ್ಚಿನ ಜನರಿಗೆ ತೊಂದರೆಯಾಗಲಿದೆ,'' ಎನ್ನುವುದು ಹಿಟಾಚಿ ಪೇಮೆಂಟ್‌ ಸವೀರ್‍ಸಸ್‌ ಸಂಸ್ಥೆಯ ಎಂಡಿ ರುಸ್ತಮ್‌ ಇರಾನಿ ಅಭಿಪ್ರಾಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ