ಆ್ಯಪ್ನಗರ

ಭಾರತ-ಬಾಂಗ್ಲ ನಡುವೆ ಸರಕು ಸಾಗಾಟ ರೈಲ್ವೇ ಸೇವೆ?

ಶೀಘ್ರದಲ್ಲೇ ಕಾಠ್ಮಂಡುಗೆ ದೆಹಲಿ ಮತ್ತು ಕೊಲ್ಕೊತ್ತಾದಿಂದ ರೈಲು ಸಂಪರ್ಕ ಕಲ್ಪಿಸುವ ಕುರಿತು ಚಿಂತನೆ ನಡೆಸಿದೆ.

ಎಕನಾಮಿಕ್ ಟೈಮ್ಸ್ 24 Feb 2017, 11:06 pm
ಹೊಸದಿಲ್ಲಿ: ನೆರೆಯ ರಾಜ್ಯ ನೇಪಾಳ ಹಾಗೂ ಬಾಂಗ್ಲದೇಶದ ನಡುವೆ ರೈಲು ಸಂಪರ್ಕ ಕಲ್ಪಿಸಲು ಭಾರತ ಸಿದ್ಧವಾಗಿದ್ದು, ಶೀಘ್ರದಲ್ಲೇ ಕಾಠ್ಮಂಡುಗೆ ದೆಹಲಿ ಮತ್ತು ಕೊಲ್ಕೊತ್ತಾದಿಂದ ರೈಲು ಸಂಪರ್ಕ ಕಲ್ಪಿಸುವ ಕುರಿತು ಚಿಂತನೆ ನಡೆಸಿದೆ.
Vijaya Karnataka Web india proposes direct rail link to kathmandu from delhi kolkata mulls cargo train to bangladesh
ಭಾರತ-ಬಾಂಗ್ಲ ನಡುವೆ ಸರಕು ಸಾಗಾಟ ರೈಲ್ವೇ ಸೇವೆ?


ಸಮ್ಮೆಳನವೊಂದರ ಪ್ರಯುಕ್ತ ಕಳೆದ ವಾರದಲ್ಲಿ ಕಾಠ್ಮಂಡುಗೆ ಭೇಟಿ ನೀಡಿದ್ದ ಕೇಂದ್ರ ರೈಲ್ವೇ ಸಚಿವ ಸುರೇಶ್‌ ಪ್ರಭು ಈ ಯೋಜನೆ ಕುರಿತು ಘೋಷಿಸಿದ್ದಾರೆ. "ಭಾರತದ ನಡುವಿನ ವ್ಯಾವಹಾರಿಕ ಸಂಪರ್ಕ ವೃಧ್ದಿಸಲು ನೇಪಾಳಕ್ಕೆ ಶೀಘ್ರದಲ್ಲೇ ಎರಡು ರೈಲುಗಳ ಸಂಪರ್ಕ ಕಾರ್ಯ ಪ್ರಾರಂಭವಾಗಬೇಕು. ಇದು ಎರಡೂ ದೇಶಗಳ ನಡುವೆ ಆರ್ಥಿಕ ಹಾಗೂ ಸಂಬಂಧ ಗಟ್ಟಿಯಾಗಲು ಸಹಕಾರಿಯಾಗುತ್ತದೆ" ಎಂದು ಹೇಳಿದ್ದಾರೆ.

ಇದಕ್ಕೆ ಧ್ವನಿಗೂಡಿಸಿರುವ ನೇಪಾಳ ಪ್ರಧಾನಿ ಪ್ರಚಂಡ, ನಮ್ಮ ಮೊದಲು ಆದ್ಯತೆ ಮೂಲ ಸೌಕರ್ಯದ ಅಭಿವೃದ್ಧಿ ಹಾಗೂ ಸಮರ್ಪಕ ಸಾರಿಗೆ ಸಂಪರ್ಕ ಅಭಿವೃದ್ದಿಗೊಳಿಸುವುದಾಗಿದೆ ಎಂದು ಹೇಳಿದ್ದಾರೆ.

ಇನ್ನು ಭಾರತ-ಬಾಂಗ್ಲಾ ನಡುವೆ ಈಗಾಗಲೇ ರೈಲು ಸೌಲಭ್ಯವಿದ್ದರೂ, ಇದು ಕೇವಲ ಜನಸಾರಿಗೆಯಾಗಿದೆ. ಹೀಗಾಗಿ ಸರಕು ಸಾಗಾಟಕ್ಕೆ ಹೆಚ್ಚಿನ ಒತ್ತು ನೀಡುವ ಹಿನ್ನಲೆಯಲ್ಲಿ ಬಾಂಗ್ಲಾಗೂ ಕಾರ್ಗೋ ರೈಲು ಸಂಪರ್ಕ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ