ಆ್ಯಪ್ನಗರ

ಇರಾನ್‌ ತೈಲ ಖರೀದಿ ಮುಂದುವರಿಸಲು ನಿರ್ಧಾರ: ಅಮೆರಿಕದ ನಿರ್ಬಂಧಕ್ಕೆ ಸೊಪ್ಪು ಹಾಕದ ಭಾರತ

ನವೆಂಬರ್‌ 4ರಿಂದ ಇರಾನ್‌ ವಿರುದ್ಧ ಅಮೆರಿಕದ ನಿರ್ಬಂಧ ಜಾರಿಯಾಗಲಿದ್ದು, ಭಾರತವು ಇರಾನ್‌ನಿಂದ ನವೆಂಬರ್‌ನಲ್ಲಿ ಕಚ್ಚಾ ತೈಲವನ್ನು ಖರೀದಿಸಲು ನಿರ್ಧರಿಸಿದೆ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.

PTI 9 Oct 2018, 7:50 am
ಹೊಸದಿಲ್ಲಿ: ಭಾರತವು ಅಮೆರಿಕದ ನಿರ್ಬಂಧದ ಹೊರತಾಗಿಯೂ, ಇರಾನ್‌ನಿಂದ ನವೆಂಬರ್‌ನಲ್ಲಿ ಕಚ್ಚಾ ತೈಲವನ್ನು ಖರೀದಿಸಲು ನಿರ್ಧರಿಸಿದೆ ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್‌ ಸೋಮವಾರ ತಿಳಿಸಿದ್ದಾರೆ. ಈ ನಡುವೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಪ್ರತಿ ಬ್ಯಾರೆಲ್‌ಗೆ 86ರಿಂದ 83 ಡಾಲರ್‌ಗೆ ಇಳಿಕೆಯಾಗಿದೆ.
Vijaya Karnataka Web Dharmendra Pradhan


''ಸಾರ್ವಜನಿಕ ವಲಯದ ಎರಡು ತೈಲ ಸಂಸ್ಕರಣೆ ಕಂಪನಿಗಳು ನವೆಂಬರ್‌ನಲ್ಲಿ ಇರಾನ್‌ ತೈಲ ಕೊಳ್ಳಲು ಒಪ್ಪಂದ ಮಾಡಿಕೊಂಡಿವೆ. ಅಮೆರಿಕದ ನಿರ್ಬಂಧದಿಂದ ನಮಗೆ ವಿನಾಯಿತಿ ಇದೆಯೋ, ಇಲ್ಲವೊ ಎಂಬುದು ಗೊತ್ತಿಲ್ಲ'' ಎಂದು ಪ್ರಧಾನ್‌ ಹೇಳಿದರು.

ನವೆಂಬರ್‌ 4ರಿಂದ ಇರಾನ್‌ ವಿರುದ್ಧ ಅಮೆರಿಕದ ನಿರ್ಬಂಧ ಜಾರಿಯಾಗಲಿದ್ದು, ಇದೇ ಮೊದಲ ಬಾರಿಗೆ ಸಚಿವ ಧರ್ಮೇಂದರ ಪ್ರಧಾನ್‌, ಭಾರತದ ನಿಲುವನ್ನು ದೃಢಪಡಿಸಿದ್ದಾರೆ. ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಹಾಗೂ ಮಂಗಳೂರು ರಿಫೈನರಿ ಆ್ಯಂಡ್‌ ಪೆಟ್ರೊಕೆಮಿಕಲ್ಸ್‌ (ಎಂಆರ್‌ಪಿಎಲ್‌) ಒಟ್ಟಿಗೆ 12.5 ಲಕ್ಷ ಟನ್‌ ಕಚ್ಚಾ ತೈಲವನ್ನು ಇರಾನ್‌ನಿಂದ ಆಮದು ಮಾಡಿಕೊಳ್ಳಲಿವೆ.

ರೂಪಾಯಿಯಲ್ಲಿ ಹಣ ಪಾವತಿ


ಅಮೆರಿಕದ ನಿರ್ಬಂದದಿಂದ ಇರಾನ್‌ಗೆ ಡಾಲರ್‌ಗಳ ರೂಪದಲ್ಲಿ ಹಣ ಪಾವತಿಗೆ ಬ್ಯಾಂಕಿಂಗ್‌ ಮಾರ್ಗ ರದ್ದಾಗಲಿದೆ. ಆದರೆ ರುಪಾಯಿ ಮೂಲಕ ಹಣ ಪಾವತಿಯ ಆಯ್ಕೆ ಇದೆ. ಯುಕೊ ಬ್ಯಾಂಕ್‌ ಹಾಗೂ ಐಡಿಬಿಐ ಬ್ಯಾಂಕ್‌ ಮೂಲಕ ಇರಾನ್‌ಗೆ ಭಾರತವು ಹಣ ಪಾವತಿಸಲಿದೆ.

ಕಳೆದ ವಾರ ಪ್ರತಿ ಬ್ಯಾರೆಲ್‌ ಕಚ್ಚಾ ತೈಲಕ್ಕೆ 86.74 ಡಾಲರ್‌ ಇದ್ದ ದರ ಸೋಮವಾರ 83ಕ್ಕೆ ಇಳಿಕೆಯಾಗಿದ್ದು, ನವೆಂಬರ್‌ನಿಂದ ಕೆಲ ದೇಶಗಳಿಗೆ ಇರಾನ್‌ ತೈಲ ಪೂರೈಕೆ ಮುಂದುವರಿಯಲಿರುವುದು ಮಾರುಕಟ್ಟೆ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ