ಆ್ಯಪ್ನಗರ

ಕೊರೊನಾ ನಡುವೆಯೂ ರೈಲ್ವೆ ಸರಕು ಸಾಗಣೆ ಶೇ.10 ಹೆಚ್ಚಳ!

ರೈಲ್ವೆ ಸರಕು ಸಾಗಣೆಯಲ್ಲಿಇತ್ತೀಚೆಗೆ ಗಣನೀಯ ಏರಿಕೆ ದಾಖಲಾಗಿದೆ. ರೈಲ್ವೆಯು ಕಳೆದ ಸೆಪ್ಟೆಂಬರ್‌ 6ರ ತನಕ 19.19 ದಶಲಕ್ಷ ಟನ್‌ (1.91 ಕೋಟಿ ಟನ್‌) ಸರಕು ಸಾಗಣೆ ಮಾಡಿದ್ದು, ಶೇ.10.41 ಏರಿಕೆ ದಾಖಲಾಗಿದೆ.

Vijaya Karnataka Web 7 Sep 2020, 9:27 pm
ಹೊಸದಿಲ್ಲಿ: ರೈಲ್ವೆ ಸರಕು ಸಾಗಣೆಯಲ್ಲಿಇತ್ತೀಚೆಗೆ ಗಣನೀಯ ಏರಿಕೆ ದಾಖಲಾಗಿದೆ. ರೈಲ್ವೆಯು ಕಳೆದ ಸೆಪ್ಟೆಂಬರ್‌ 6ರ ತನಕ 19.19 ದಶಲಕ್ಷ ಟನ್‌ (1.91 ಕೋಟಿ ಟನ್‌) ಸರಕು ಸಾಗಣೆ ಮಾಡಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 17.38 ದಶಲಕ್ಷ ಟನ್‌ (1.73 ಕೋಟಿ ಟನ್‌) ಗಳಾಗಿತ್ತು.
Vijaya Karnataka Web goods train


ಅಂದರೆ ಶೇ.10.41 ಏರಿಕೆ ದಾಖಲಾಗಿದೆ. ರೈಲ್ವೆ ಇಲಾಖೆಯು ಸರಕು ಸಾಗಣೆಯಿಂದ 1836.15 ಕೋಟಿ ರೂ. ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ1706.47 ಕೋಟಿ ರೂ. ಗಳಿಸಿತ್ತು. 129 ಕೋಟಿ ರೂ. ಹೆಚ್ಚಳ ಆದಾಯ ಪಡೆದಿದೆ. ಸರಕು ಸಾಗಣೆಯನ್ನು ಆಕರ್ಷಿಸಲು ಹಲವಾರು ರಿಯಾಯಿತಿಗಳನ್ನು ಇಲಾಖೆ ಘೋಷಿಸಿದೆ.

ಕೊರೊನಾ ಕಂಟಕದ ನಡುವೆ ಸಂಚಾರ ನಿಲ್ಲಿಸಿ ಒತ್ತಡಕ್ಕೆ ಸಿಲುಕಿದ್ದ ರೈಲ್ವೆ ರಾಷ್ಟ್ರೀಯ ಸಾರಿಗೆ ಕಳೆದ ಮೇನಲ್ಲಿ ಮರು ಆರಂಭಗೊಂಡಿದೆ. ಇದುವರೆಗೆ 80,000ಕ್ಕೂ ಹೆಚ್ಚಿನ ಪ್ರಯಾಣಿಕರು ಇ-ಟಿಕೆಟ್‌ ಕಾಯ್ದಿರಿಸಿದ್ದು, ಇದರಿಂದ 16 ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ಆದಾಯ ಸಂಗ್ರಹವಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿತ್ತು. ಆದರೆ, ಮತ್ತೆ ಪ್ರಯಾಣಿಕ ರೈಲುಗಳನ್ನು ನಿಲ್ಲಿಸಿತ್ತು. ಸರಕು ಸಾಗಣೆಯ ಪ್ರಮಾಣವೂ ಕುಸಿದಿತ್ತು.

ಸೆ.10ಕ್ಕೆ ₹10ಸಾವಿರ ಕೋಟಿ ಮೌಲ್ಯದ ಸರಕಾರಿ ಬಾಂಡುಗಳ ಖರೀದಿಸಲಿದೆ ಆರ್‌ಬಿಐ!

ಇದೀಗ ಸೆಪ್ಟೆಂಬರ್‌ 12 ರಿಂದ 40 ಜೋಡಿ ಅಂದರೆ 80 ಹೊಸ ವಿಶೇಷ ಪ್ರಯಾಣಿಕ ರೈಲುಗಳ ಸೇವೆಯನ್ನು ಆರಂಭಿಸುವುದಾಗಿ ಭಾರತೀಯ ರೈಲ್ವೆ ಶನಿವಾರ ತಿಳಿಸಿದೆ, ಈ ರೈಲುಗಳ ಟಿಕೆಟ್‌ ಬುಕ್ಕಿಂಗ್‌ ಸೆಪ್ಟೆಂಬರ್‌ 10 ರಿಂದ ಆರಂಭವಾಗಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿನೋದ್‌ ಕುಮಾರ್‌ ಯಾದವ್‌ ಹೇಳಿದ್ದಾರೆ.

ನೀರವ್‌ ಮೋದಿ ಹಸ್ತಾಂತರ ಪ್ರಕರಣ: ಲಂಡನ್‌ ಕೋರ್ಟ್‌ನಲ್ಲಿ ವಿಚಾರಣೆ ಶುರು!

ಈಗಾಗಲೇ 230 ರೈಲುಗಳು ಕಾರ್ಯಾಚರಿಸುತ್ತಿದ್ದು, ಇದರ ಜೊತೆಗೆ ಹೆಚ್ಚುವರಿಯಾಗಿ ಮತ್ತೆ 80 ರೈಲುಗಳ ಕಾರ್ಯಾಚರಣೆ ಆರಂಭವಾಗಲಿದೆ. ಈ ಬೆನ್ನಲ್ಲೇ ಸರಕು ಸಾಗಣೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ