ಆ್ಯಪ್ನಗರ

ಟಿಕೆಟ್‌ರಹಿತ ಪ್ರಯಾಣಿಕಂದಲೇ 561 ಕೋಟಿ ರೂ. ದಂಡದ ಹಣ ಗಳಿಸಿದ ರೈಲ್ವೆ!

ರೈಲ್ವೆ ಇಲಾಖೆಯು 2019-20ರಲ್ಲಿ ಟಿಕೆಟ್‌ರಹಿತ ಪ್ರಯಾಣಿಕರಿಂದ 561 ಕೋಟಿ ರೂ. ದಂಡವನ್ನು ವಸೂಲಿ ಮಾಡಿದೆ. ಇದರ ಹಿಂದಿನ ವರ್ಷಕ್ಕೆ ಹೋಲಿಸಿದರೇ, ದಂಡ ವಸೂಲಿಯಲ್ಲಿ ಶೇ.6ರಷ್ಟು ಏರಿಕೆಯಾಗಿದೆ.

Vijaya Karnataka Web 24 Aug 2020, 10:54 am
ಹೊಸದಿಲ್ಲಿ: ರೈಲ್ವೆ ಇಲಾಖೆಯು 2019-20ರಲ್ಲಿ ಟಿಕೆಟ್‌ರಹಿತ ಪ್ರಯಾಣಿಕರಿಂದ 561 ಕೋಟಿ ರೂ. ದಂಡವನ್ನು ವಸೂಲಿ ಮಾಡಿದೆ. ಇದರ ಹಿಂದಿನ ವರ್ಷಕ್ಕೆ ಹೋಲಿಸಿದರೇ, ದಂಡ ವಸೂಲಿಯಲ್ಲಿ ಶೇ.6ರಷ್ಟು ಏರಿಕೆಯಾಗಿದೆ.
Vijaya Karnataka Web Railways


ದಂಡದ ರೂಪದಲ್ಲೇ ನೂರಾರು ಕೋಟಿ ರೂ. ರೈಲ್ವೆ ಇಲಾಖೆಗೆ ಹರಿದು ಬರುತ್ತಿದೆ. 2016-2020ರ ಅವಧಿಯಲ್ಲಿ ರೈಲ್ವೆ ಇಲಾಖೆಯು 1,938 ಕೋಟಿ ರೂ.ಗಳನ್ನು ಟಿಕೆಟ್‌ರಹಿತ ಪ್ರಯಾಣಿಕರಿಂದ ವಸೂಲಿ ಮಾಡಿದೆ.

ಮಧ್ಯಪ್ರದೇಶ ಮೂಲದ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್‌ ಗೌರ್‌ ಅವರಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಈ ವಿವರಗಳು ಸಿಕ್ಕಿವೆ.

ನಿತ್ಯಾನಂದನಿಂದ ಹೊಸ ಕರೆನ್ಸಿ 'ಕೈಲಾಸ್‌ ಡಾಲರ್‌' ಬಿಡುಗಡೆ!

ಟಿಕೆಟ್‌ ಇಲ್ಲದ ಪ್ರಯಾಣಿಕರು ಟಿಕೆಟ್‌ ವೆಚ್ಚದ ಜೊತೆಗೆ ಕನಿಷ್ಠ 250 ರೂ. ದಂಡ ಕಟ್ಟಬೇಕು. ದಂಡ ನಿರಾಕರಿಸಿದರೆ, ವ್ಯಕ್ತಿಯನ್ನು ರೈಲ್ವೆ ರಕ್ಷಣಾ ಪಡೆಗೆ(ಆರ್‌ಪಿಎಫ್‌) ಹಸ್ತಾಂತರಿಸಲಾಗುತ್ತದೆ. ದೂರು ದಾಖಲಾಗುತ್ತದೆ. ಇಂತಹ ಪ್ರಕರಣಗಳಲ್ಲಿ1 ಸಾವಿರ ರೂ. ವರೆಗೂ ಮ್ಯಾಜಿಸ್ಪ್ರೇಟ್‌ ದಂಡ ವಿಧಿಸುವ ಸಾಧ್ಯತೆ ಇದೆ.ಹೀಗಾಗಿ ಟಿಕೆಟ್‌ ಪಡೆದೇ ರೈಲಿನಲ್ಲಿ ಪ್ರಯಾಣಿಸುವುದು ಒಳಿತು.

ನಿತ್ಯಾನಂದನಿಂದ 'ರಿಸರ್ವ್‌ ಬ್ಯಾಂಕ್‌ ಆಫ್‌ ಕೈಲಾಸ'ಕ್ಕೆ ಅಧಿಕೃತ ಚಾಲನೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ