ಆ್ಯಪ್ನಗರ

ಟಿಸಿಎಸ್‌ಗೆ 8,126 ಕೋಟಿ ರೂ. ಲಾಭ

ಟಿಸಿಎಸ್‌ ಲಾಭ ಶೇ.17.70ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 6,904 ಕೋಟಿ ರೂ. ಲಾಭವಾಗಿತ್ತು. ಕಂಪನಿಯ ನಿವ್ವಳ ಬಿಸಿನೆಸ್‌ 38,010 ಕೋಟಿ ರೂ.ಗೆ ವೃದ್ಧಿಸಿದ್ದು, ಶೇ.18.5 ಏರಿಕೆಯಾಗಿದೆ.

Vijaya Karnataka Web 13 Apr 2019, 6:07 pm
ಹೊಸದಿಲ್ಲಿ: ಭಾರತದ ಅತಿ ದೊಡ್ಡ ಐಟಿ ಕಂಪನಿ ಟಿಸಿಎಸ್‌ ಶುಕ್ರವಾರ ಜನವರಿ-ಮಾರ್ಚ್‌ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, 8,126 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ.
Vijaya Karnataka Web TCS


ಟಿಸಿಎಸ್‌ ಲಾಭ ಶೇ.17.70ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 6,904 ಕೋಟಿ ರೂ. ಲಾಭವಾಗಿತ್ತು. ಕಂಪನಿಯ ನಿವ್ವಳ ಬಿಸಿನೆಸ್‌ 38,010 ಕೋಟಿ ರೂ.ಗೆ ವೃದ್ಧಿಸಿದ್ದು, ಶೇ.18.5 ಏರಿಕೆಯಾಗಿದೆ.

''ಆದಾಯದ ದೃಷ್ಟಿಯಿಂದ ಕಳೆದ 15 ತ್ರೈಮಾಸಿಕಗಳಲ್ಲಿಯೇ ಕಂಪನಿಯ ಪ್ರಬಲ ಬೆಳವಣಿಗೆ ಇದಾಗಿದೆ. ಕಂಪನಿಯ ಆರ್ಡರ್‌ ಬುಕ್‌ ಕಳೆದ ಮೂರು ತ್ರೈಮಾಸಿಕಗಳಲ್ಲಿಯೇ ದೊಡ್ಡದಾಗಿದೆ. ಜಾಗತಿಕ ಅನಿಶ್ಚಿತತೆಯ ಹೊರತಾಗಿಯೂ ಕಂಪನಿ ಹೊಸ ಆರ್ಥಿಕ ವರ್ಷದಲ್ಲಿ ಉತ್ತಮ ಸ್ಥಿತಿಯಲ್ಲಿದೆ '' ಎಂದು ಟಿಸಿಎಸ್‌ ಸಿಇಒ ರಾಜೇಶ್‌ ಗೋಪಿನಾಥನ್‌ ತಿಳಿಸಿದ್ದಾರೆ.

2018-19ರ ಸಾಲಿಗೆ 18 ರೂ.ಗಳ ಅಂತಿಮ ಡಿವಿಡೆಂಡ್‌ ಘೋಷಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ