ಆ್ಯಪ್ನಗರ

ಲಾಭದತ್ತ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು: ಸಿಹಿ ಸುದ್ದಿ ಕೊಟ್ರು ಸೀತಾರಾಮನ್

ದೇಶದ ಆರ್ಥಿಕತೆ ಕುಸಿಯುತ್ತಿದೆ ಎಂಬ ಆತಂಕದ ಕಾರ್ಮೋಡದ ತುದಿಯಲ್ಲಿ ಬೆಳ್ಳಿ ರೇಖೆ ಮೂಡಿದೆ. ಸಾರ್ವಜನಿಕ ವಲಯದ ಬ್ಯಾಂಕ್ ಗಳ ಲಾಭಾಂಶದ ಪ್ರಮಾಣದಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಜೊತೆಯಲ್ಲೇ ವಸೂಲಾಗದ ಸಾಲದ ಪ್ರಮಾಣವೂ ಕಡಿಮೆಯಾಗುತ್ತಾ ಬರುತ್ತಿದೆ.

TIMESOFINDIA.COM 30 Aug 2019, 6:39 pm
ಹೊಸದಿಲ್ಲಿ: ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಬ್ಯಾಂಕ್ ಗಳ ಲಾಭಾಂಶ ಪ್ರಮಾಣ ಏರಿಕೆ ಕಂಡಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ನಿರ್ಮಲಾ, ಸಾರ್ವಜನಿಕ ವಲಯದ ಬ್ಯಾಂಕ್ ಗಳ ವಸೂಲಾಗದ ಸಾಲದ ಪ್ರಮಾಣ 7.9 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.
Vijaya Karnataka Web nirmala seetharaman


ಕಳೆದ ವರ್ಷ ಡಿಸೆಂಬರ್ 2018ರ ವೇಳೆಗೆ ದೇಶಾದ್ಯಂತ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ವಸೂಲಾಗದ ಸಾಲದ ಪ್ರಮಾಣ 8.65 ಲಕ್ಷ ಕೋಟಿ ರೂ. ಇತ್ತು. ಈ ಹೊರೆ ಇದೀಗ ಒಂದಿಷ್ಟು ತಗ್ಗಿದೆ. 2019 ಮಾರ್ಚ್ ಅಂತ್ಯದ ವೇಳೆಗೆ ವಸೂಲಾಗದ ಸಾಲದ ಪ್ರಮಾಣ 7.9 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ.

ಭಾಗಶಃ ಸಾಲ ಖಾತರಿ ಯೋಜನೆ ಅನುಷ್ಠಾನಕ್ಕೆ ಬಂದಿರುವುದರಿಂದ ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಗೃಹ ಸಾಲ ಸಂಸ್ಥೆಗಳಲ್ಲಿ ಹಣಕಾಸಿನ ಹರಿವು ಏರಿಕೆ ಕಂಡಿದೆ. ಯೋಜನೆಯಡಿ ಈಗಾಗಲೇ 3,300 ಕೋಟಿ ರೂ. ಸಹಾಯಧನ ನೀಡಲಾಗಿದೆ. ಇನ್ನೂ 30,000 ಕೋಟಿ ರೂ. ಹಣ ಶೀಘ್ರದಲ್ಲೇ ಯೋಜನೆಗೆ ಸಿಗಲಿದೆ ಎಂದು ನಿರ್ಮಲಾ ಸೀತಾರಾಮನ್ ವಿವರಿಸಿದ್ರು.

ಮತ್ತೆ ಬ್ಯಾಂಕ್‌ಗಳ ವಿಲೀನ, ಪಿಎನ್‌ಬಿ, ಓರಿಯಂಟಲ್‌, ಯುನೈಟೆಡ್‌ ಬ್ಯಾಂಕ್‌ ವಿಲೀನ: ನಿರ್ಮಲಾ ಸೀತಾರಾಮನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ