ಆ್ಯಪ್ನಗರ

ಭಾರತ ಸುಂಕ ಏರಿದರೆ ಅಮೆರಿಕಕ್ಕೆ 6000 ಕೋಟಿ ನಷ್ಟ!

ಭಾರತವು ಅಮೆರಿಕದ ಹಣ್ಣು ಹಾಗೂ ಕೃಷಿ ಉತ್ಪನ್ನಗಳ ಆಮದಿನ ಮೇಲೆ ಪ್ರತೀಕಾರದ ಸುಂಕಗಳನ್ನು ವಿಧಿಸಿದರೆ, ಅಮೆರಿಕಕ್ಕೆ 90 ಕೋಟಿ ಡಾಲರ್‌(6,120 ಕೋಟಿ ರೂ...

Vijaya Karnataka Web 3 Jan 2019, 5:00 am
ವಾಷಿಂಗ್ಟನ್‌: ಭಾರತವು ಅಮೆರಿಕದ ಹಣ್ಣು ಹಾಗೂ ಕೃಷಿ ಉತ್ಪನ್ನಗಳ ಆಮದಿನ ಮೇಲೆ ಪ್ರತೀಕಾರದ ಸುಂಕಗಳನ್ನು ವಿಧಿಸಿದರೆ, ಅಮೆರಿಕಕ್ಕೆ 90 ಕೋಟಿ ಡಾಲರ್‌(6,120 ಕೋಟಿ ರೂ.) Üಷ್ಟವಾಗಲಿದೆ ಎಂದು ಅಮೆರಿಕದ ಸಂಸದೀಯ ಸಮಿತಿ ವರದಿಯಲ್ಲಿ ಹೇಳಲಾಗಿದೆ.
Vijaya Karnataka Web indias retaliatory tariffs to hit us exports worth usd 900 mn
ಭಾರತ ಸುಂಕ ಏರಿದರೆ ಅಮೆರಿಕಕ್ಕೆ 6000 ಕೋಟಿ ನಷ್ಟ!


ಅಮೆರಿಕದ ಅಧ್ಯಕ್ಷ ಟ್ರಂಪ್‌ ಅವರು ಜಾಗತಿಕ ಮಟ್ಟದಲ್ಲಿ ವಾಣಿಜ್ಯ ಸಮರ ನಡೆಸಿದ್ದು, ಆಮದು ಸುಂಕಗಳನ್ನು ಏರಿಕೆ ಮಾಡುತ್ತಿದ್ದಾರೆ. ಭಾರತದ ಉಕ್ಕು, ಅಲ್ಯುಮಿನಿಯಂ ಮತ್ತಿತರ ಉತ್ಪನ್ನಗಳಿಗೆ ಅಮೆರಿಕ ಸುಂಕ ಏರಿಸಿದೆ. ಇದಕ್ಕೆ ಪ್ರತೀಕಾರವಾಗಿ ಅಮೆರಿಕದ ಸೇಬು, ಬಾದಾಮಿ, ವಾಲ್‌ನಟ್‌, ಖಾದ್ಯ ಪದಾರ್ಥಗಳೂ ಸೇರಿದಂತೆ ಅಮೆರಿಕದ ಕೃಷಿ ಉತ್ಪನ್ನಗಳ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸುವುದಾಗಿ ಭಾರತ ಕಳೆದ ವರ್ಷ ಎಚ್ಚರಿಸಿತ್ತು. ಪ್ರತೀಕಾರದ ಸುಂಕಗಳು ಜಾರಿಗೆ ಬಂದಿದ್ದರೆ ಮತ್ತೊಂದು ಸುತ್ತಿನ ಜಾಗತಿಕ ಸಮರ ಆರಂಭವಾಗುತ್ತಿತ್ತು. ಆದಾಗ್ಯೂ, ಭಾರತವು ತನ್ನ ನಿರ್ಧಾರವನ್ನು ನಿರಂತರವಾಗಿ ಮುಂದೂಡತ್ತಲೇ ಬಂದಿದೆ. ಸುಂಕ ಸ್ಪರ್ಧೆ ತಪ್ಪಿಸಲು ಮಾತುಕತೆಗಳು ನಡೆಯುತ್ತಿವೆ. ಕಳೆದ ಅಕ್ಟೋಬರ್‌ನಲ್ಲಿ ಭಾರತವನ್ನು 'ಸುಂಕಗಳ ದೊರೆ' ಎಂದು ಟ್ರಂಪ್‌ ದೂರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ