ಆ್ಯಪ್ನಗರ

ಇನ್ಫಿ ಸಿಇಒ ವಾರ್ಷಿಕ ವೇತನ 46 ಕೋಟಿ ರೂ. ಗೆ ಏರಿಕೆ

ಇನ್ಫೋಸಿಸ್‌ ಸಿಇಒ ಸಲೀಲ್‌ ಪಾರೇಖ್‌ ಅವರ ವಾರ್ಷಿಕ ವೇತನ ಶೇ.27 ಏರಿಕೆಯಾಗಿದೆ. 2019-20ನೇ ಸಾಲಿನಲ್ಲಿ60 ಲಕ್ಷ ಡಾಲರ್ ಇದೆ. ಕಳೆದ ವರ್ಷ 40.8 ಲಕ್ಷ ಡಾಲರ್‌ ಇತ್ತು.

Vijaya Karnataka Web 1 Jun 2020, 12:14 pm
ಬೆಂಗಳೂರು: ಇನ್ಫೋಸಿಸ್‌ ಸಿಇಒ ಸಲೀಲ್‌ ಪಾರೇಖ್‌ ಅವರ ವಾರ್ಷಿಕ ವೇತನ (ಬೋನಸ್‌, ಇನ್ಸೆಂಟೀವ್‌, ಷೇರುಗಳೂ ಇತ್ಯಾದಿ) ಶೇ.27 ಏರಿಕೆಯಾಗಿದೆ. 2019-20ನೇ ಸಾಲಿನಲ್ಲಿ60 ಲಕ್ಷ ಡಾಲರ್ ‌(ಸುಮಾರು 46 ಕೋಟಿ ರೂಪಾಯಿ) ಇದೆ. ಕಳೆದ ವರ್ಷ 40.8 ಲಕ್ಷ ಡಾಲರ್‌ ಇತ್ತು.
Vijaya Karnataka Web infosys ceo salil parekh
ಇನ್ಫೋಸಿಸ್‌ ಸಿಇಒ ಸಲೀಲ್‌ ಪಾರೇಖ್‌


ಯುಎಸ್‌ ಸೆಕ್ಯೂರಿಟೀಸ್‌ ಅಂಡ್‌ ಎಕ್ಸ್‌ ಚೇಂಜ್‌ ಕಮಿಷನ್‌ಗೆ (ಎಸ್‌ಇಸಿ) ಇನ್ಫೋಸಿಸ್‌ ನೀಡಿರುವ ಮಾಹಿತಿಯಲ್ಲಿಈ ಅಂಶ ಸ್ಪಷ್ಟವಾಗಿದೆ. ಇನ್ಫಿ ಅಧ್ಯಕ್ಷ ನಂದನ್‌ ನಿಲೇಕಣಿ ಅವರು ತಮ್ಮ ಸೇವೆಗೆ ಯಾವುದೇ ಸಂಭಾವನೆ ಬೇಡ ಎಂದಿದ್ದು, ಅವರದು ಶೂನ್ಯ ವೇತನವಾಗಿದೆ. ಕಂಪನಿಯ ಸಿಒಒ ಯು.ಪಿ ಪ್ರವೀಣ್‌ ರಾವ್‌ ಅವರ ವೇತನವೂ ಶೇ.29 ಏರಿಕೆಯಾಗಿದ್ದು 22 ಲಕ್ಷ ಡಾಲರ್‌ ಮುಟ್ಟಿದೆ. ಇಬ್ಬರು ಅಧ್ಯಕ್ಷರಾದ ರವಿ ಕುಮಾರ್‌ ಮತ್ತು ಮೊಹಿತ್‌ ಜೋಶಿ ವೇತನವು ಕ್ರಮವಾಗಿ 25 ಮತ್ತು 24.6% ಏರಿಕೆಯಾಗಿದೆ.

''ಕೊರೊನಾ ಬಿಕ್ಕಟ್ಟಿನಿಂದಾಗಿ ಕೆಲವು ಗ್ರಾಹಕರು ಚೌಕಾಸಿಗೆ ಇಳಿದಿದ್ದಾರೆ. ರಿಯಾಯಿತಿ ಕೇಳುತ್ತಿರುವುದರಿಂದ ಈ ವರ್ಷ ಲಾಭದ ಪ್ರಮಾಣದಲ್ಲಿ ಸ್ವಲ್ಪ ಕಡಿಮೆಯಾಗಬಹುದು. ಕೊರೊನಾದಿಂದ ಇನ್ಫೋಸಿಸ್‌ ಆದಾಯಕ್ಕೂ ಹೊಡೆತ ಬೀಳಲಿದೆ,'' ಎಂದು ಕಂಪನಿ ಹೇಳಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ