ಆ್ಯಪ್ನಗರ

ಆರ್ಟ್ಸ್, ಡಿಜೈನ್‌ ಸ್ಕಿಲ್ಸ್‌ ಪದವೀಧರರಿಗೂ ಇನ್ಫಿ ಮಣೆ

ಸಾಫ್ಟ್‌ವೇರ್‌ ಎಕ್ಸ್‌ಪೋರ್ಟ್‌ ದೈತ್ಯ ಇನ್ಫೋಸಿಸ್‌, ಇದೀಗ ಕಲೆ(ಲಿಬರಲ್‌ ಆರ್ಟ್ಸ್), ಡಿಜೈನ್‌ ಸ್ಕಿಲ್ಸ್‌ ಹಿನ್ನೆಲೆಯ ವಿದ್ಯಾರ್ಥಿಗಳು ಮತ್ತು ...

THE ECONOMIC TIMES 19 Dec 2018, 5:00 am
ಸಾಫ್ಟ್‌ವೇರ್‌ ಎಕ್ಸ್‌ಪೋರ್ಟ್‌ ದೈತ್ಯ ಇನ್ಫೋಸಿಸ್‌, ಇದೀಗ ಕಲೆ(ಲಿಬರಲ್‌ ಆರ್ಟ್ಸ್), ಡಿಜೈನ್‌ ಸ್ಕಿಲ್ಸ್‌ ಹಿನ್ನೆಲೆಯ ವಿದ್ಯಾರ್ಥಿಗಳು ಮತ್ತು ಎಂಜಿಯರಿಂಗ್‌ಯೇತರ ಪದವೀಧರರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಹೊಸ ಡಿಜಿಟಲ್‌ ಅಪ್ಲಿಕೇಷನ್ಸ್‌ ಅಭಿವೃದ್ಧಿಯಲ್ಲಿ ಎಂಜಿನಿಯರಿಂಗ್‌ಯೇತರ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಿದೆ.
Vijaya Karnataka Web Infosys


ಕಲಾ ವಿಭಾಗದಲ್ಲಿ ಓದಿದವರಿಗೆ ಹೆಚ್ಚಿನ ಸೃಜನಶೀಲ ಆಲೋಚನೆಗಳಿರುತ್ತವೆ. ಗ್ರಾಹಕರ ಸಮಸ್ಯೆಗಳಿಗೆ ಭಿನ್ನ ಪರಿಹಾರ ಕಂಡುಕೊಳ್ಳಲು ಇವರಿಂದ ಸಾಧ್ಯ ಎಂದು ಕಂಪನಿ ಭಾವಿಸಿದೆ. ತಂತ್ರಜ್ಞಾನ ಸೇವೆಗಳನ್ನು ನೀಡುತ್ತಾ ಬಂದಿರುವ ಇನ್ಫೋಸಿಸ್‌, ನೂತನ ಡಿಜಿಟಲ್‌ ಅಪ್ಲಿಕೇಷನ್ಸ್‌ ಸೇವೆಗೆ ಒತ್ತು ನೀಡಿದೆ.

ಇನ್ಫೋಸಿಸ್‌ನಂಥ ಬೃಹತ್‌ ಕಂಪನಿಗಳು ಸಾಂಪ್ರದಾಯಿಕ ಸೇವೆಗಳ ಬದಲಿಗೆ ಡಿಜಿಟಲ್‌ ಗುತ್ತಿಗೆಗಳನ್ನು ಪಡೆಯುವತ್ತ ಆದ್ಯತೆ ನೀಡಿವೆ. ಈ ಹೊಸ ವ್ಯವಹಾರಗಳಲ್ಲಿ ಕ್ಲೈಂಟ್‌ಗಳ ಬ್ಯುಸಿನೆಸ್‌ ಸಮಸ್ಯೆಗಳನ್ನು ನಿವಾರಿಸಲು ಹೆಚ್ಚಿನ ಕೌಶಲ ಅಗತ್ಯವಿದೆ. ಇಂಥದ್ದನ್ನು ನಿಭಾಯಿಸಲು ವಿಜ್ಞಾನ-ತಂತ್ರಜ್ಞಾನ ಆಧರಿತ ಉದ್ಯೋಗಿಗಳಿಗಿಂತಲೂ ಆರ್ಟ್ಸ್ ಹಿನ್ನೆಲೆಯ ಉದ್ಯೋಗಿಗಳೇ ಉತ್ತಮ ಎಂದು ಕಂಪನಿಗಳು ಭಾವಿಸಿವೆ.

ಕಂಪ್ಯೂಟರ್‌ ಕೋಡ್‌ಗಳನ್ನು ಬರೆಯಲು ಮತ್ತು ಗ್ರಾಹಕರ ಇನ್‌ಫ್ರಾಸ್ಟ್ರಕ್ಚರ್‌ಗಳನ್ನು ನಿರ್ವಹಣೆ ಮಾಡಲು ಸಾವಿರಾರು ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲು ಐಟಿ ಕಂಪನಿಗಳು ಪ್ರತಿ ವರ್ಷ ಮುಂದಾಗುತ್ತವೆ. ಆದರೆ, ತನ್ನ ನೇಮಕಾತಿ ಯೋಜನೆಗಳನ್ನು ಇನ್ಫೋಸಿಸ್‌ ಬದಲಿಸಿದೆ. ಡಿಜಿಟಲ್‌ನತ್ತ ತನ್ನ ಆದ್ಯತೆಯನ್ನು ಬದಲಿಸಿದೆ. ಡಿಜೈನ್‌ ಮತ್ತು ಡೇಟಾ ಅನಾಲಿಟಿಕ್ಸ್‌ ವಲಯಕ್ಕೆ ಪೂರಕವಾದ ವೃತ್ತಿಪರರ ಆಯ್ಕೆಗೆ ಮುಂದಾಗಿದೆ. ಈ ಕೌಶಲಗಳುಳ್ಳ ಉದ್ಯೋಗಿಗಳ ಅನ್ವೇಷಣೆಯನ್ನು ಕಂಪನಿ ಈಗಾಗಲೇ ಆರಂಭಿಸಿದೆ.

ಕಳೆದ ವರ್ಷ 7,000 ಕ್ಕೂ ಅಧಿಕ ಮಂದಿಯನ್ನು ಇನ್ಫೋಸಿಸ್‌ ನೇಮಕ ಮಾಡಿತ್ತು. ಇದರಲ್ಲಿ ಶೇ.20-30ರಷ್ಟು ಉದ್ಯೋಗಿಗಳು ಲಿಬರಲ್‌ ಆರ್ಟ್ಸ್ ಮತ್ತು ಎಂಜಿನಿಯರಿಂಗ್‌ಯೇತರ ಹಿನ್ನೆಲೆಯನ್ನು ಉಳ್ಳವರಾಗಿದ್ದಾರೆ. ಭಾರತದಲ್ಲೂ ಇಂಥದ್ದೇ ಪ್ರಯೋಗಕ್ಕೆ ಇನ್ಫೋಸಿಸ್‌ ಮುಂದಾಗಿದೆ.

ಟೆಕ್‌ ಹೊರತಾಗಿ ಲಿಬರಲ್‌ ಆರ್ಟ್ಸ್, ಡಿಜೈನ್‌ನಲ್ಲಿ ಕೌಶಲ ಉಳ್ಳವರನ್ನು ಇನ್ಫೋಸಿಸ್‌ ನೇಮಕ ಮಾಡಿಕೊಳ್ಳಲಿದೆ ಎಂದು ಕಂಪನಿಯ ಗ್ಲೋಬಲ್‌ ಸವೀರ್‍ಸಸ್‌ನ ಡೇಟಾ ಮತ್ತು ಅನಾಲಿಟಿಕ್ಸ್‌ ವಿಭಾಗದ ಮುಖ್ಯಸ್ಥ ಸತೀಶ್‌ ಎಚ್‌.ಸಿ. ಹೇಳಿದ್ದಾರೆ.

ಇನ್ಫೋಸಿಸ್‌ನ ಡಿಜಿಟಲ್‌ ಟೆಕ್ನಾಲಜಿ ವಲಯದ ಆದಾಯ ಶೇ.31ರಷ್ಟಿದೆ. ಸಾಂಪ್ರದಾಯಿಕ ಸೇವೆಗಿಂತಲೂ ಡಿಜಿಟಲ್‌ನತ್ತ ಇನ್ಫೋಸಿಸ್‌ ಚಿತ್ತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ