ಆ್ಯಪ್ನಗರ

ದಿವಾಳಿ ಮತ್ತು ದಿವಾಳಿತನ ನೀತಿ (2ನೇ ತಿದ್ದುಪಡಿ) ಮಸೂದೆಗೆ ರಾಜ್ಯಸಭೆ ಅಂಗೀಕಾರ!

ದಿವಾಳಿ ಮತ್ತು ದಿವಾಳಿತನ ನೀತಿ (ಎರಡನೇ ತಿದ್ದುಪಡಿ) ಮಸೂದೆಗೆ ರಾಜ್ಯಸಭೆ ಶನಿವಾರ ಅಂಗೀಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಕರೊನಾ ವೈರಸ್​ ದಿವಾಳಿ ಘೋಷಣೆ ಪ್ರಕ್ರಿಯೆಯನ್ನು ಮಾರ್ಚ್​ 25ರಿಂದ ಪೂರ್ವಾನ್ವಯವಾಗುವಂತೆ ಕನಿಷ್ಠ ಆರು ತಿಂಗಳ ಮಟ್ಟಿಗೆ ಕೈಗೊಳ್ಳುವುದು ಸಾಧ್ಯವಿಲ್ಲ.

Vijaya Karnataka Web 19 Sep 2020, 4:30 pm
ನವದೆಹಲಿ: ದಿವಾಳಿ ಮತ್ತು ದಿವಾಳಿತನ ನೀತಿ (ಎರಡನೇ ತಿದ್ದುಪಡಿ) ಮಸೂದೆಗೆ ರಾಜ್ಯಸಭೆ ಶನಿವಾರ ಅಂಗೀಕಾರ ನೀಡಿದೆ. ಈ ತಿದ್ದುಪಡಿ ಅಂಗೀಕಾರದ ಹಿನ್ನೆಲೆಯಲ್ಲಿ, ಕರೊನಾ ವೈರಸ್ ದಿವಾಳಿ ಘೋಷಣೆ ಪ್ರಕ್ರಿಯೆಯನ್ನು ಮಾರ್ಚ್ 25ರಿಂದ ಪೂರ್ವಾನ್ವಯವಾಗುವಂತೆ ಕನಿಷ್ಠ ಆರು ತಿಂಗಳ ಮಟ್ಟಿಗೆ ಕೈಗೊಳ್ಳುವುದು ಸಾಧ್ಯವಿಲ್ಲ. ಈ ಅವಧಿಯನ್ನು ಕೇಂದ್ರ ಸರಕಾರ ಒಂದು ವರ್ಷದವರೆಗೂ ಮುಂದೂಡುವ ಸಾಧ್ಯತೆ ಇದೆ.
Vijaya Karnataka Web Nirmala Sitharaman


ಈ ಮಸೂದೆ ತಿದ್ದುಪಡಿ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಉತ್ತಮ ಕಾಳಜಿಯಲ್ಲಿ ಇರಿಸುವುದು, ದಿವಾಳಿಯಾಗದಂತೆ ಇರಿಸುವುದು ಐಬಿಸಿಯ ಉದ್ದೇಶ. ಮಾರ್ಚ್ 25ರಿಂದ ದೇಶಾದ್ಯಂತ ಲಾಕ್ಡೌನ್ ಘೋಷಣೆಯಾದ ಕಾರಣ ಅಂದಿನಿಂದ ಸಾಲ ಮರುಪಾವತಿ ಮಾಡಿಲ್ಲದ ಕಂಪನಿಗಳ ವಿರುದ್ಧ ಅಂದಿನಿಂದ ಅನ್ವಯವಾಗುವಂತೆ ಕನಿಷ್ಠ ಆರು ತಿಂಗಳ ಮಟ್ಟಿಗೆ ದಿವಾಳಿ ಕ್ರಮ ತೆಗೆದುಕೊಳ್ಳದಿರುವುದಕ್ಕೆ ಈ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿದರು.

ಈ ಮಸೂದೆಯು ಜೂನ್ ತಿಂಗಳಲ್ಲಿ ಮಾಡಿದ್ದ ಸುಗ್ರೀವಾಜ್ಞೆಯ ಜಾಗವನ್ನು ತುಂಬಲಿದೆ. ವ್ಯಾಪಾರೋದ್ಯಮಗಳಿಗೆ ಇದರಿಂದ ಅನುಕೂಲವಾಗಲಿದೆ ಎಂದು ಸರ್ಕಾರ ಹೇಳಿದೆ.

ಅನಿಲ್‌ ಅಂಬಾನಿ ದಿವಾಳಿ ಪ್ರಕರಣ: ವಿಚಾರಣೆಗೆ ಅನುಮತಿಸಿದ ರಾಷ್ಟ್ರೀಯ ನ್ಯಾಯಮಂಡಳಿ!

ದಿವಾಳಿ ಮತ್ತು ದಿವಾಳಿತನ ಸಂಹಿತೆ, 2016 ಕ್ಕೆ ಪ್ರಮುಖ ತಿದ್ದುಪಡಿ ತರುವ ಉದ್ದೇಶದಿಂದ 2019 ರ ದಿವಾಳಿ ಮತ್ತು ದಿವಾಳಿತನ ಸಂಹಿತೆ (ಎರಡನೇ ತಿದ್ದುಪಡಿ) ಮಸೂದೆ ಕೇಂದ್ರ ಸಂಪುಟ 2019ರ ಡಿಸೆಂಬರ್‌ಲ್ಲೇ ಅನುಮೋದನೆ ನೀಡಿತ್ತು.

ಇದು ದಿವಾಳಿ ಪರಿಹಾರ ಪ್ರಕ್ರಿಯೆಯಲ್ಲಿ ಎದುರಾಗುವ ಕೆಲವು ತೊಂದರೆಗಳನ್ನು ಕೈಬಿಡುವ ಗುರಿಯನ್ನು ಹೊಂದಿವೆ ಮತ್ತು ಸುಲಲಿತ ವ್ಯವಹಾರವನ್ನು ಇನ್ನಷ್ಟು ಸುಲಭಗೊಳಿಸಲು ಇದು ನೆರವಾಗಲಿದೆ.

ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್‌ ಸಿಲಿಂಡರ್‌ ಪಡೆಯಲು ಸೆ.30 ಕೊನೇ ದಿನ: ಅರ್ಜಿ ಸಲ್ಲಿಕೆ ಹೇಗೆ?

ಮಸೂದೆಯ ವಿವರ
ತಿದ್ದುಪಡಿ ಮಸೂದೆಯು ದಿವಾಳಿಮತ್ತು ದಿವಾಳಿತನ ಸಂಹಿತೆ, 2016 (ಕೋಡ್) ನಲ್ಲಿನ 5 (12), 5 (15), 7, 11, 14, 16 (1), 21 (2), 23 (1), 29 ಎ, 227, 239, 240 ವಿಭಾಗಗಳನ್ನು ತಿದ್ದುಪಡಿ ಮಾಡುತ್ತದೆ ಮತ್ತು ಹೊಸ ವಿಭಾಗ 32 ಎ ಅನ್ನು ಸೇರಿಸುತ್ತದೆ.

ಪರಿಣಾಮ
  • 1. ಸಂಹಿತೆಯಲ್ಲಿನ ತಿದ್ದುಪಡಿಗಳು ಅಡಚಣೆಗಳನ್ನು ತೆಗೆದುಹಾಕಿ, ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆ (ಸಿ ಐ ಆರ್ ಪಿ) ಯನ್ನು ಸುಗಮಗೊಳಿಸಿ ಮತ್ತು ಕೊನೆಯ ಹಂತದ ನಿಧಿಯನ್ನು ರಕ್ಷಿಸಿ ಆರ್ಥಿಕವಾಗಿ ತೊಂದರೆಗೀಡಾದ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುತ್ತದೆ.
  • 2. ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯ (ಸಿ ಐ ಆರ್ ಪಿ) ಕ್ಷುಲ್ಲಕ ಪ್ರಚೋದನೆಯನ್ನು ತಡೆಗಟ್ಟುವ ಸಲುವಾಗಿ ಅಧಿಕೃತ ಪ್ರತಿನಿಧಿಯಿಂದ ಪ್ರತಿನಿಧಿಸಲ್ಪಟ್ಟ ಹಣಕಾಸು ಸಾಲಗಾರರಿಗಾಗಿ ಹೆಚ್ಚುವರಿ ಮಿತಿಗಳನ್ನು ಪರಿಚಯಿಸಲಾಗಿದೆ.
  • 3. ಕಾರ್ಪೊರೇಟ್ ಸಾಲಗಾರನ ವ್ಯವಹಾರದ ಅಸ್ತಿತ್ವವೇ ಕಳೆದುಹೋಗಿಲ್ಲ ಎಂದು ಖಚಿತಪಡಿಸಿಕೊಳ್ಳುವುದು, ಪರವಾನಗಿ, ಅನುಮತಿ, ರಿಯಾಯಿತಿಗಳು, ಕ್ಲಿಯರೆನ್ಸ್ ಇತ್ಯಾದಿಗಳನ್ನು ಮುಕ್ತಾಯಗೊಳಿಸಲಾಗುವುದಿಲ್ಲ ಅಥವಾ ಸ್ಥಗಿತಗೊಳಿಸಲಾಗುವುದಿಲ್ಲ ಅಥವಾ ನಿಷೇಧದ ಅವಧಿಯಲ್ಲಿ ನವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸುವುದು.
  • 4. ಹಿಂದಿನ ಆಡಳಿತ/ ಪ್ರವರ್ತಕರು ಮಾಡಿದ ಅಪರಾಧಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿಂದ ಯಶಸ್ವಿ ರೆಸಲ್ಯೂಶನ್ ಅರ್ಜಿದಾರರ ಪರವಾಗಿ ರಿಂಗ್-ಫೆನ್ಸಿಂಗ್ ಕಾರ್ಪೊರೇಟ್ ಸಾಲಗಾರನನ್ನು ಐಬಿಸಿ ಅಡಿಯಲ್ಲಿ ಪರಿಹರಿಸುವುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ