ಆ್ಯಪ್ನಗರ

ಬೆಳೆ ವಿಮೆ: ಕಂಪನಿಗಳಿಗೆ ಭರ್ಜರಿ ಲಾಭ

ಸರಕಾರದ ಮಹತ್ವಾಕಾಂಕ್ಷೆಯ ಬೆಳೆ ವಿಮೆ ಯೋಜನೆಗಳಿಂದ ವಿಮೆ ಕಂಪನಿಗಳಿಗೆ ಮಾತ್ರ ಕಳೆದ ವರ್ಷ ಶೇ.85ರಷ್ಟು ಭರ್ಜರಿ ಲಾಭವಾಗಿದೆ!

Vijaya Karnataka Web 20 Jul 2018, 5:30 am
ಹೊಸದಿಲ್ಲಿ: ಸರಕಾರದ ಮಹತ್ವಾಕಾಂಕ್ಷೆಯ ಬೆಳೆ ವಿಮೆ ಯೋಜನೆಗಳಿಂದ ವಿಮೆ ಕಂಪನಿಗಳಿಗೆ ಮಾತ್ರ ಕಳೆದ ವರ್ಷ ಶೇ.85ರಷ್ಟು ಭರ್ಜರಿ ಲಾಭವಾಗಿದೆ!
Vijaya Karnataka Web Crop Insure


ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಿಂದ 17 ವಿಮೆ ಕಂಪನಿಗಳು 15,029 ಕೋಟಿ ರೂ. ಬಂಪರ್‌ ಲಾಭ ಗಳಿಸಿವೆ. ಅಂದರೆ ಇವುಗಳು ಸಂಗ್ರಹಿಸಿರುವ 17,796 ಕೋಟಿ ರೂ. ಪ್ರೀಮಿಯಂನಲ್ಲಿ ಕೇವಲ 2,767 ಕೋಟಿ ರೂ.ಗಳನ್ನು ವಿಮೆ ಪರಿಹಾರ ನೀಡಿವೆ.

ಭಾರತದಲ್ಲಿ 2017-18ರ ಜುಲೈ-ಅಕ್ಟೋಬರ್‌ ಅವಧಿಯಲ್ಲಿ ಮುಂಗಾರು ಬೆಳೆಗಳ ಕಾಲವಾಗಿದ್ದು, ರೈತರಿಗೆ ಅನುಕೂಲವಾಗಲೆಂದು ಸರಕಾರ ಬೆಳೆ ವಿಮೆ ಯೋಜನೆಯನ್ನು ಜಾರಿಗೊಳಿಸಿದೆ.

ಖಾಸಗಿ ವಲಯದ 12 ಹಾಗೂ ಸಾರ್ವಜನಿಕ ವಲಯದ 5 ಸೇರಿ ಒಟ್ಟು 17 ವಿಮೆ ಕಂಪನಿಗಳು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಲ್ಲಿ (ಪಿಎಂಎಫ್‌ಬಿವೈ) 15,029 ಕೋಟಿ ರೂ. ಲಾಭ ಗಳಿಸಿವೆ.

ಸುಮಾರು 3.3 ಕೋಟಿ ರೈತರು ಪಿಎಂಎಫ್‌ಬಿವೈ ಅಡಿಯಲ್ಲಿ 3.3 ಕೋಟಿ ಹೆಕ್ಟೇರ್‌ ಪ್ರದೇಶಕ್ಕೆ 2017-18ರಲ್ಲಿ ಬೆಳೆ ವಿಮೆ ಮಾಡಿಸಿದ್ದರು. ಒಟ್ಟು 5,052 ಕೋಟಿ ರೂ. ಕ್ಲೇಮ್‌ ಆಗಿದ್ದರೂ, ಕೇವಲ 2,767 ಕೋಟಿ ರೂ. ಪರಿಹಾರ ವಿತರಣೆಯಾಗಿದೆ.

ಈ ಯೋಜನೆಯಡಿಯಲ್ಲಿ ರೈತರು ಖಾರಿಫ್‌ ಬೆಳೆ ವಿಮೆಗೆ ಸಂಬಂಧಿಸಿ, ಒಟ್ಟು ಪ್ರೀಮಿಯಂನ ಕೇವಲ ಶೇ.2ರಷ್ಟು ಪಾವತಿಸುತ್ತಾರೆ. ತೋಟಗಾರಿಕೆ ಬೆಳೆಗೆ ಶೇ.5ರಷ್ಟು ಪ್ರೀಮಿಯಂ ಕಟ್ಟುತ್ತಾರೆ. ಉಳಿದ ಮೊತ್ತವನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಮಾನವಾಗಿ ಹಂಚಿಕೊಂಡು ಭರಿಸುತ್ತವೆ. ಅಂದರೆ ತೆರಿಗೆದಾರರ ಹಣ ಇದಕ್ಕೆ ಬಳಕೆಯಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ