ಆ್ಯಪ್ನಗರ

ಜಿಯೋದಲ್ಲಿ ಇಂಟೆಲ್‌ ಭಾರೀ ಹೂಡಿಕೆ ಬೆನ್ನಲ್ಲೇ 'ರಿಲಯನ್ಸ್‌' ಷೇರು ಮೌಲ್ಯ ಹೆಚ್ಚಳ!

ಇಂಟೆಲ್‌ ಕಾರ್ಪೊರೇಷನ್‌ ಕಂಪನಿಯ ಭಾಗವಾಗಿರುವ ಇಂಟೆಲ್‌ ಕ್ಯಾಪಿಟಲ್‌ 1,894 ಕೋಟಿ ರೂ.ಗಳನ್ನು ರಿಲಯನ್ಸ್‌ ಜಿಯೊದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ. ಜಿಯೋದ ಶೇ.0.39 ಷೇರುಗಳನ್ನು ಇಂಟೆಲ್‌ ಕ್ಯಾಪಿಟಲ್‌ ಖರೀದಿಸಲಿದೆ.

Vijaya Karnataka Web 4 Jul 2020, 5:53 pm
ಹೊಸದಿಲ್ಲಿ: ಇಂಟೆಲ್‌ ಕಾರ್ಪೊರೇಷನ್‌ ಕಂಪನಿಯ ಭಾಗವಾಗಿರುವ ಇಂಟೆಲ್‌ ಕ್ಯಾಪಿಟಲ್‌ 1,894 ಕೋಟಿ ರೂ.ಗಳನ್ನು ರಿಲಯನ್ಸ್‌ ಜಿಯೊದಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದೆ. ಜಿಯೋದ ಶೇ.0.39 ಷೇರುಗಳನ್ನು ಇಂಟೆಲ್‌ ಕ್ಯಾಪಿಟಲ್‌ ಖರೀದಿಸಲಿದೆ.
Vijaya Karnataka Web Mukesh Ambani


ಇದರೊಂದಿಗೆ ಜಿಯೊದಲ್ಲಿ11ನೇ ಹೂಡಿಕೆದಾರನಾಗಿ ಇಂಟೆಲ್‌ ಕ್ಯಾಪಿಟಲ್‌ ಪ್ರವೇಶಿಸಿದೆ. ಒಟ್ಟಾರೆಯಾಗಿ ಇಂಟೆಲ್‌ ಜಿಯೊದಲ್ಲಿ117,588 ಕೋಟಿ ರೂ.ಗಳನ್ನು ಹೂಡಿದೆ. ಜಿಯೊ 40 ಕೋಟಿ ಚಂದಾದಾರರನ್ನು ಒಳಗೊಂಡಿದೆ.

ಇಂಟೆಲ್ನ ಈ ಹೂಡಿಕೆ ಸೇರಿದರೆ ಜಿಯೋ ಈವರೆಗೆ 1,17,588.45 ಕೋಟಿ ರೂಪಾಯಿ ಕಲೆ ಹಾಕಿದಂತಾಗಿದೆ. ಮೊಟ್ಟ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದ ದಿಗ್ಗಜ ಫೇಸ್ಬುಕ್, ಜಿಯೋದ ಶೇ. 9.9 ಷೇರನ್ನು ಖರೀದಿ ಮಾಡಿತ್ತು. ಇದಾದ ನಂತರ ಸಿಲ್ವರ ಲೇಕ್ ಎರಡು ಬಾರಿ, ವಿಸ್ತಾ ಇಕ್ವಿಟಿ ಪಾರ್ಟನರ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬದಲ, ಎಡಿಐಎ, ಟಿಪಿಜಿ, ಎಲ್ ಕ್ಯಾಟರ್ಟನ್, ಪಿಐಎಫ್ ಮತ್ತು ಇಂಟೆಲ್ ಹೂಡಿಕೆ ಮಾಡಿದೆ.

ಆದಾಯ ತೆರಿಗೆದಾರರಿಗೆ ಗುಡ್‌ ನ್ಯೂಸ್‌: ಐಟಿ ರಿಟರ್ನ್ಸ್‌ಗೆ ನ,30ರವರೆಗೆ ಗಡುವು ವಿಸ್ತರಣೆ!

ಬಿಎಸ್ಇಯಲ್ಲಿ ರಿಲಾಯನ್ಸ್ ಷೇರಿನ ದರ ಶೇ. 0.88 ಏರಿಕೆ ಆಗಿದೆ. ಈ ಮೂಲಕ ಷೇರಿನ ಮೌಲ್ಯದಲ್ಲಿ ಭಾರೀ ಏರಿಕೆ ಕಂಡಂತಾಗಿದೆ. ಸಂಸ್ಥೆಯೊಂದು ನಿರಂತರವಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಪಡೆದಿದ್ದು ಇದೇ ಮೊದಲು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ