ಆ್ಯಪ್ನಗರ

ಪ್ರೀಮಿಯಂ ಮದ್ಯದ ಮೇಲಿನ ಅಬಕಾರಿ ಸುಂಕ ಇಳಿಸುವಂತೆ ಸ್ಪಿರಿಟ್ಸ್‌ ವೈನ್ಸ್‌ ಅಸೋಸಿಯೇಷನ್‌ ಆಗ್ರಹ

ಪ್ರೀಮಿಯಂ ಮದ್ಯ ಉತ್ಪನ್ನಗಳ ಮೇಲೆ ವಿಧಿಸಲಾಗಿರುವ ಹೆಚ್ಚುವರಿ ಅಬಕಾರಿ ಸುಂಕವನ್ನು ರದ್ದುಗೊಳಿಸಬೇಕು ಎಂದು ಇಂಟರ್‌ ನ್ಯಾಷನಲ್‌ ಸ್ಪಿರಿಟ್ಸ್‌ ವೈನ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

Vijaya Karnataka Web 25 Jun 2022, 9:23 am
ಬೆಂಗಳೂರು: ಪ್ರೀಮಿಯಂ ಮದ್ಯ ಉತ್ಪನ್ನಗಳ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ರದ್ದುಗೊಳಿಸಬೇಕೆಂದು ಇಂಟರ್‌ ನ್ಯಾಷನಲ್‌ ಸ್ಪಿರಿಟ್ಸ್‌ ವೈನ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಐಎಸ್‌ಡಬ್ಲ್ಯುಎಐ) ರಾಜ್ಯ ಸರಕಾರವನ್ನು ಒತ್ತಾಯಿದೆ.
Vijaya Karnataka Web liquor


ಪ್ರೀಮಿಯಂ ಆಲ್ಕೋಬೆವ್‌ ಉದ್ಯಮದ ಉನ್ನತ ಸಂಸ್ಥೆಯಾಗಿರುವ ಐಎಸ್‌ಡಬ್ಲೂಎಐ, ದುಬಾರಿ ಅಬಕಾರಿ ಸುಂಕ ವಿಧಿಸುವುದರಿಂದ ಪ್ರೀಮಿಯಂ ದರ್ಜೆಯ ಉತ್ಪನ್ನಗಳ ಮಾರಾಟಕ್ಕೆ ಹಿನ್ನಡೆ ಉಂಟಾಗಿ ಸರಕಾರದ ಆದಾಯ ಕುಂಠಿತಗೊಳ್ಳಲಿದೆ ಎಂದು ಹೇಳಿದೆ.

ಐಎಸ್‌ಡಬ್ಲೂಎಐ ಸಿಇಒ ನೀತಾ ಕಪೂರ್‌, "ಕರ್ನಾಟಕ ಪ್ರೀಮಿಯಂ ದರ್ಜೆಯ ಮದ್ಯದ ಮೇಲೆ ಅತ್ಯಧಿಕ ತೆರಿಗೆ ವಿಧಿಸುತ್ತಿರುವುದರಿಂದ ರಾಜ್ಯದಲ್ಲಿ ಕಳೆದ 4-5 ವರ್ಷಗಳಿಂದ ಪ್ರೀಮಿಯಂ ದರ್ಜೆಯ ಮದ್ಯದ ಉತ್ಪನ್ನಗಳ ಸೇವನೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬರುತ್ತಿದೆ. ಅಬಕಾರಿ ಇಲಾಖೆ ಅಧಿಕಾರಿಗಳೊಂದಿಗೆ ಪ್ರೀಮಿಯಂ ದರ್ಜೆಯ ಮದ್ಯ ಮಾರಾಟಕ್ಕೆ ಅನುಕೂಲಕರವಾದ ಕ್ರಮಗಳ ಆಯ್ಕೆಗಳ ಬಗ್ಗೆ ಚರ್ಚಿಸುತ್ತಿದ್ದೇವೆ," ಎಂದು ತಿಳಿಸಿದ್ದಾರೆ.

ಭಾರೀ ಮದ್ಯ ಮಾರಾಟವಾಗುತ್ತಿದ್ದರೂ ಕರ್ನಾಟಕದಲ್ಲಿ ತೆರಿಗೆ ಸಂಗ್ರಹ ಮಾತ್ರ ಅತ್ಯಲ್ಪ! ಯಾಕೆ ಹೀಗೆ?
ಉತ್ತರ ಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಹೊಸದಿಲ್ಲಿ, ಪಶ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳು ಪ್ರೀಮಿಯಂ ಉತ್ಪನ್ನಗಳನ್ನು ಪ್ರೋತ್ಸಾಹಿಸಿ ಮತ್ತು ಉತ್ತೇಜಿಸಿದ ಪರಿಣಾಮ ಆದಾಯದ ಬೆಳವಣಿಗೆಯಲ್ಲಿ ಹೆಚ್ಚಳ ಕಂಡಿವೆ ಎಂಬ ಅಂಶವನ್ನು ಐಎಸ್‌ಡಬ್ಲ್ಯೂಎಐ ಒತ್ತಿ ಹೇಳಿದೆ. ಕರ್ನಾಟಕದ ಮದ್ಯ ಮಾರಾಟದಲ್ಲಿ ಪ್ರೀಮಿಯಂ ದರ್ಜೆಯ ಮದ್ಯ ಮಾರಾಟದ ಭಾಗವು ಒಟ್ಟು ಉದ್ಯಮದ ಸುಮಾರು ಶೇ.6.5ರಷ್ಟಿದ್ದು, ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ