ಆ್ಯಪ್ನಗರ

ಪಂಚರಾಜ್ಯ ಚುನಾವಣೆಯಿಂದಾಗಿ ತೈಲ ಕಂಪನಿಗಳಿಗೆ ಬರೋಬ್ಬರಿ 19,000 ಕೋಟಿ ರೂ. ನಷ್ಟ!

​​ಕೇಂದ್ರ ಸರ್ಕಾರದ ಈ ನಡೆಯಿಂದಾಗಿ ದೇಶದ ಪ್ರಮುಖ ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (Indian Oil Corporation- IOC), ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (Bharat Petroleum Corporation Limited - BPCL) ಹಾಗೂ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (Hindustan Petroleum Corporation Limited - HPCL) ಈ ಮೂರು ಸಂಸ್ಥೆಗಳಿಗೆ ಸುಮಾರು 2.25 ಬಿಲಿಯನ್‌ ಡಾಲರ್ ಅಂದರೆ 19,000 ಕೋಟಿ ರೂ. ನಷ್ಟು ನಷ್ಟವಾಗಿದೆ ಎಂದು ಮೂಡೀಸ್‌ ಹೇಳಿದೆ.

Authored byಸಿನಾನ್\u200c ಇಂದಬೆಟ್ಟು | THE ECONOMIC TIMES 25 Mar 2022, 5:52 pm
ಹೊಸದಿಲ್ಲಿ: ಪಂಚ ರಾಜ್ಯಗಳ ಚುನಾವಣೆಯಿಂದಾಗಿ 2021ರ ನವೆಂಬರ್‌ನಿಂದ 2022 ಮಾರ್ಚ್ ವರೆಗೆ ಪೆಟ್ರೋಲ್‌-ಡೀಸೆಲ್‌ ದರಗಳ ದೈನಂದಿನ ಪರಿಷ್ಕರಣೆಯನ್ನು ತಡೆ ಹಿಡಿದಿದ್ದರಿಂದ ಸಾರ್ವಜನಿಕ ತೈಲ ಕಂಪನಿಗಳಿಗೆ ಸುಮಾರು 19,000 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ರೇಟಿಂಗ್‌ ಏಜೆನ್ಸಿ ಮೂಡೀಸ್‌ ವರದಿಯಲ್ಲಿ ಹೇಳಲಾಗಿದೆ.
Vijaya Karnataka Web A logo of Indian Oil is picture outside a fuel station in New Delhi


ಉಕ್ರೇನ್‌ -ರಷ್ಯಾ ನಡುವಣ ಯುದ್ಧ ಹಾಗೂ ಜಾಗತಿಕ ಹಣದುಬ್ಬರಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ದರ ತೀವ್ರವಾಗಿ ಹೆಚ್ಚಳವಾಗಿತ್ತು. ಆದರೆ ಉತ್ತರ ಪ್ರದೇಶ, ಪಂಜಾಬ್‌, ಉತ್ತರಾಖಂಡ್‌, ಗೋವಾ ಹಾಗೂ ಮಣಿಪುರ ರಾಜ್ಯಗಳ ಚುನಾವಣೆ ಇದ್ದಿದ್ದರಿಂದ ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಹಾಗೂ ಅನಿಲದ ರಿಟೇಲ್‌ ದರಗಳನ್ನು 2021ರ ನವೆಂಬರ್‌ 4ರಿಂದ 2022ರ ಮಾರ್ಚ್ 21ರ ತನಕ ಯಥಾಸ್ಥಿತಿಯಲ್ಲಿ ಇರಿಸಿತ್ತು.

ಅಮೆರಿಕದ ಒತ್ತಡಕ್ಕೆ ಡೋಂಟ್‌ ಕೇರ್‌, ರಷ್ಯಾದಿಂದ 30 ಲಕ್ಷ ಬ್ಯಾರಲ್‌ ತೈಲ ಖರೀದಿಸಲಿದೆ ಇಂಡಿಯನ್‌ ಆಯಿಲ್‌
ಕೇಂದ್ರ ಸರ್ಕಾರದ ಈ ನಡೆಯಿಂದಾಗಿ ದೇಶದ ಪ್ರಮುಖ ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (Indian Oil Corporation- IOC), ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (Bharat Petroleum Corporation Limited - BPCL) ಹಾಗೂ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (Hindustan Petroleum Corporation Limited - HPCL) ಈ ಮೂರು ಸಂಸ್ಥೆಗಳಿಗೆ ಸುಮಾರು 2.25 ಬಿಲಿಯನ್‌ ಡಾಲರ್ ಅಂದರೆ 19,000 ಕೋಟಿ ರೂ. ನಷ್ಟು ನಷ್ಟವಾಗಿದೆ ಎಂದು ಮೂಡೀಸ್‌ ಹೇಳಿದೆ.

ಚುನಾವಣೆ ಮುಗಿದ ಬಳಿಕ ತೈಲ ಬೆಲೆಗಳ ದೈನಂದಿನ ಪರಿಷ್ಕರಣೆ ಆರಂಭವಾಗಿದ್ದು, ಸದ್ಯ ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ದರ 11 ಡಾಲರ್‌ ಇರುವುದರಿಂದ ತೈಲ ಕಂಪನಿಗಳಿಗೆ ಒಟ್ಟಾಗಿ 525 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಮೂಡೀಸ್‌ ತಿಳಿಸಿದೆ.

ಭಾರತದ ಮೇಲೆ ಒತ್ತಡ, ರಷ್ಯಾ ಜತೆ ವ್ಯವಹಾರ: ಯುರೋಪಿಯನ್ ದೇಶಗಳ ಇಬ್ಬಂದಿತನ
ನವೆಂಬರ್‌ನಲ್ಲಿಪ್ರತಿ ಬ್ಯಾರೆಲ್‌ಗೆ 82 ಡಾಲರ್‌ ದರ ಇದ್ದರೆ, ಮಾರ್ಚ್ ಮೊದಲ ಮೂರು ವಾರದಲ್ಲಿ 111 ಡಾಲರ್‌ ಆಸುಪಾಸಿಗೆ ಜಿಗಿದಿತ್ತು. ತೈಲ ಕಂಪನಿಗಳು ಮಾರ್ಚ್ 22 ಮತ್ತು 23ರಂದು ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿಲೀಟರ್‌ಗೆ ತಲಾ 80 ಪೈಸೆ ಏರಿಕೆ ಮಾಡಿದ್ದವು. ಆದರೆ ಗುರುವಾರ ಮತ್ತು ಯಥಾಸ್ಥಿತಿಯಲ್ಲಿತ್ತು.

ಸದ್ಯದ ಮಾರುಕಟ್ಟೆ ದರದ ಅನ್ವಯ, ತೈಲ ಕಂಪನಿಗಳಿಗೆ ಕಚ್ಚಾ ತೈಲ ಖರೀದಿಯಲ್ಲಿ ಪ್ರತೀ ಬ್ಯಾರೆಲ್‌ಗೆ 25 ಡಾಲರ್‌ ಹಾಗೂ ಪೆಟ್ರೋಲ್‌ ಹಾಗೂ ಡೀಸೆಲ್‌ ಮಾರಾಟದಲ್ಲಿ ಪ್ರತೀ ಬ್ಯಾರೆಲ್‌ಗೆ 24 ಡಾಲರ್‌ ನಷ್ಟ ಉಂಟಾಗುತ್ತಿದೆ ಎಂದು ಮೂಡೀಸ್‌ ತನ್ನ ವರದಿಯಲ್ಲಿ ಉಲ್ಲೇಖ ಮಾಡಿದೆ.

ರಷ್ಯಾದಿಂದ ತೈಲ ಖರೀದಿ; ಅಮೆರಿಕದ ಟೀಕೆಗೆ ಭಾರತ ತಿರುಗೇಟು
ಪ್ರತೀ ಬ್ಯಾರೆಲ್‌ ಕಚ್ಚಾ ತೈಲ ಬೆಲೆ ಸರಾಸರಿ 111 ಡಾಲರ್‌ ಇದ್ದು, ಇದರಿಂದಾಗಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌, ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ ಈ ಮೂರು ಕಂಪನಿಗಳು ದೈನಂದಿನವಾಗಿ 65-70 ಮಿಲಿಯನ್‌ ಡಾಲರ್‌ಗಳಷ್ಟು ನಷ್ಟ ಅನುಭವಿಸುತ್ತಿದೆ. ದರ ಪರಿಷ್ಕರಿಸಿದ ಹೊರೆತು ಈ ನಷ್ಟ ತುಂಬಲು ಸಾಧ್ಯವಿಲ್ಲ ಎನ್ನುವುದು ಮೂಡೀಸ್‌ ಅಂಬೋಣ.

ತೀಕ್ಷ್ಣ ಒಳನೋಟ ಹಾಗೂ 20ಕ್ಕೂ ಹೆಚ್ಚು ವಲಯಗಳ ವಿಸ್ತೃತ ಮಾಹಿತಿ ಒಳಗೊಂಡ 'ಎಕನಾಮಿಕ್ ಟೈಮ್ಸ್' ವಿಶೇಷ ಲೇಖನಗಳಿಗಾಗಿ ಈಗಲೇ ಸಬ್‌ಸ್ಕ್ರೈಬ್ ಆಗಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ