ಆ್ಯಪ್ನಗರ

ಷೇರು ಮಾರುಕಟ್ಟೆಗೆ ಲಗ್ಗೆ ಇಟ್ಟ ಐಆರ್‌ಸಿಟಿಸಿಗೆ ಭರ್ಜರಿ ಬೇಡಿಕೆ: ಐಪಿಒಗೆ ಶೇ. 100ಕ್ಕೂ ಅಧಿಕ ಬೆಲೆ

ಷೇರುಪೇಟೆಯಿಂದ ಬಂಡವಾಳ ಸಂಗ್ರಹಿಸಲು ಮುಂದಾಗಿದ್ದ ಐಆರ್‌ಸಿಟಿಸಿಗೆ ಮುಂಬೈ ಷೇರು ಮಾರುಕಟ್ಟೆಯಲ್ಲಿ ಭರ್ಜರಿ ಸ್ಪಂದನೆ ದೊರೆತಿದೆ. ಐಆರ್‌ಸಿಟಿಸಿ ಐಪಿಒಗೆ ಮೊದಲ ದಿನವೇ ಶೇ. 100ಕ್ಕೂ ಅಧಿಕ ಬೇಡಿಕೆ ದೊರೆತಿರುವುದು ಕುತೂಹಲ ಕೆರಳಿಸಿದೆ.

THE ECONOMIC TIMES 14 Oct 2019, 12:02 pm
ಹೊಸದಿಲ್ಲಿ: ಕೇಂದ್ರ ಸರಕಾರಿ ಒಡೆತನದ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಇಂದಿನಿಂದ ಷೇರು ಪೇಟೆಗೆ ಲಗ್ಗೆ ಇಟ್ಟಿದ್ದು, ಐಆರ್‌ಸಿಟಿಸಿಯ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗೆ ಭರ್ಜರಿ ಬೇಡಿಕೆ ಸಿಕ್ಕಿದೆ. ಮೊದಲ ಬಾರಿಗೆ ಷೇರು ಮಾರುಕಟ್ಟೆಗೆ ಪ್ರವೇಶಿಸಿದ್ದರೂ ಸಹ 320 ರೂ. ಮೌಲ್ಯದ ಐಆರ್‌ಸಿಟಿಸಿ ಷೇರುಗಳು 644 ರೂ. ಗೆ ಮಾರಾಟವಾಗುತ್ತಿದೆ. ಹೀಗಾಗಿ ಮೊದಲ ದಿನವೇ ಐಆರ್‌ಸಿಟಿಸಿ ಷೇರುಗಳ ಮೌಲ್ಯದಲ್ಲಿ ಶೇ. 101ಕ್ಕೂ ಹೆಚ್ಚು ಏರಿಕೆ ಕಂಡಿದೆ.
Vijaya Karnataka Web irctc et


320 ರೂ. ಮೌಲ್ಯದ ಷೇರುಗಳಿಗೆ 686.10 ರೂ. ನಷ್ಟು ಮೌಲ್ಯ ದೊರೆತಿದ್ದು, ಮೊದಲ ದಿನವೇ ಐಆರ್‌ಸಿಟಿಸಿ ಷೇರುಗಳಿಗೆ ಮುಂಬೈ ಷೇರು ಪೇಟೆಯಲ್ಲಿ ಭರ್ಜರಿ ಓಪನಿಂಗ್ ದೊರೆತಿದೆ. ಅರ್ಹ ಸಾಂಸ್ಥಿಕ ಖರೀದಿದಾರರಿಗೆ (ಕ್ಯೂಐಬಿ) 108.79 ಬಾರಿ, ಸಾಂಸ್ಥಿಕೇತರ ಹೂಡಿಕೆದಾರರ (ಎನ್‌ಐಐ) ಕೋಟಾ 354.52 ಬಾರಿ ಮತ್ತು ಚಿಲ್ಲರೆ ಹೂಡಿಕೆದಾರರಿಗೆ 14.65 ಬಾರಿ ಸಬ್‌ಸ್ಕ್ರೈಬ್‌ ಮಾಡಲಾಗಿದೆ.

IRCTC: ಆನ್‌ಲೈನ್‌ನಲ್ಲಿ ರೈಲ್ವೆ ಕೌಂಟರ್‌ ಟಿಕೆಟ್‌ ರದ್ದತಿ

ಭಾರತೀಯ ರೈಲ್ವೆಯ ರೈಲು ನಿಲ್ದಾಣಗಳಲ್ಲಿ ಹಾಗೂ ರೈಲುಗಳಲ್ಲಿ, ಆನ್‌ಲೈನ್ ರೈಲ್ವೆ ಟಿಕೆಟ್‌ಗಳು ಮತ್ತು ಕುಡಿಯುವ ನೀರಿನ ಬಾಟಲ್‌ ಸೇರಿ ಕ್ಯಾಟರಿಂಗ್ ಸೇವೆ ಒದಗಿಸಲು ಅಧಿಕಾರ ಹೊಂದಿರುವ ಏಕೈಕ ಘಟಕ ಐಆರ್‌ಸಿಟಿಸಿ.

ಐಆರ್‌ಸಿಟಿಸಿಯಿಂದ ಸೇವಾ ದರ ಹೇರಿಕೆ: ಸೆ.1ರಿಂದ ರೈಲ್ವೆ ಇ-ಟಿಕೆಟ್ ಬೆಲೆ ಏರಿಕೆ

ಐಆರ್‌ಸಿಟಿಸಿಯ ಷೇರುಗಳು 'ಬಿ' ಸಮೂಹದಲ್ಲಿ ವಹಿವಾಟು ನಡೆಸಲಿವೆ ಎಂದು ಮುಂಬೈ ಷೇರುಪೇಟೆ ಪ್ರಕಟಣೆಯಲ್ಲಿ ತಿಳಿಸಿತ್ತು. ಐಪಿಒ ಮೂಲಕ 645 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿತ್ತು. 2.02 ಕೋಟಿ ಷೇರುಗಳನ್ನು ಐಆರ್‌ಸಿಟಿಸಿ ಇತ್ತೀಚೆಗೆ ಬಿಡುಗಡೆ ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ