ಆ್ಯಪ್ನಗರ

ಹೆಚ್ಚು ಹಣ ಮುದ್ರಿಸಿ ಬಡತನ ನೀಗಿಸಲು ಸಾಧ್ಯವೇ?

ಕೆಲವರಿಗೆ ಈ ಪ್ರಶ್ನೆ ನಿಜಕ್ಕೂ ಕಾಡುತ್ತಿರಬಹುದು . ಇಲ್ಲಿದೆ ಅದಕ್ಕುತ್ತರ...

Vijaya Karnataka 25 Sep 2019, 9:15 am
ರಂಗಸ್ವಾಮಿ ಮೂಕನಹಳ್ಳಿ, ಆರ್ಥಿಕ ಸಲಹೆಗಾರರು
Vijaya Karnataka Web Money 4

ಸೆಂಟ್ರಲ್‌ ಬ್ಯಾಂಕ್‌ ಏಕೇ ಹೆಚ್ಚು ಹಣ ಮುದ್ರಿಸಬಾರದು? ದೇಶದಲ್ಲಿನ ಬಡತನ ಒಂದೇ ಕ್ಷಣದಲ್ಲಿಹೋಗಲಾಡಿಸಬಹುದು, ಅಲ್ಲದೇ ವಿದೇಶಿ ಸಾಲವನ್ನು ಕೂಡ ತೀರಿಸಿ ಬಿಡಬಹುದು. ಜಗತ್ತಿನ ಯಾವುದೇ ದೇಶದ ಮೇಲೆ ಇಷ್ಟೇ ಹಣ ಮುದ್ರಿಸಬೇಕು ಎನ್ನುವ ಯಾವುದೇ ನಿಯಮವಿಲ್ಲ. ಹೀಗಿದ್ದೂ ಬಹುಪಾಲು ಸರಕಾರಗಳು ಮಿತಿಯಲ್ಲೇ ನೋಟುಗಳ ಮುದ್ರಣ ಏಕೆ ಮಾಡುತ್ತವೆ? ಇಂತಹ ಪ್ರಶ್ನೆಗಳು ಬಹಳ ಸಲ ಕಾಡಿರುತ್ತದೆ. ಇದಕ್ಕೆ ಉತ್ತರ ಬಹಳ ಸರಳ. ಸರಕಾರ ಅಥವಾ ಸೆಂಟ್ರಲ್‌ ಬ್ಯಾಂಕ್‌ ಹಾಗೆ ಇಚ್ಛೆ ಬಂದಂತೆ ಹಣ ಮುದ್ರಿಸಿದರೆ ಸಮಾಜದಲ್ಲಿ ಹಣದುಬ್ಬರ ಹೆಚ್ಚಾಗುತ್ತದೆ. ಅಂದರೆ ಒಂದು ವಸ್ತುವಿಗೆ ನೀವು ಕೊಡುತ್ತಿದ್ದ ಬೆಲೆ ಹೆಚ್ಚಾಗುತ್ತದೆ. ಅಂದರೆ ನಿಮ್ಮ ಬಳಿ ಹೆಚ್ಚಿನ ಹಣವೇನೋ ಬಂದಿತು, ಆದರೆ ಅದರಿಂದ ಪ್ರಯೋಜನವೇನೂ ಆಗಲಿಲ್ಲ. ಒಂದು ಕೈಲಿ ಪಡೆದು ಇನ್ನೊಂದು ಕೈಯಲ್ಲಿಕೊಟ್ಟಿರಿ ಅಷ್ಟೇ. ಇದು ವಿಪರೀತವಾದರೆ ಒಂದು ಕಾಫಿ ಪಡೆಯಲು ಒಂದು ಚೀಲದ ತುಂಬಾ ಹಣ ತುಂಬಿಕೊಂಡು ಹೋಗಬೇಕಾದೀತು. ಉದಾಹರಣೆಯ ಮೂಲಕ ತಿಳಿದುಕೊಳ್ಳೋಣ ಬನ್ನಿ .

ಎಸ್‌ಬಿಐ ಬ್ಯಾಂಕ್‌ ಸಾಲದ ಮೇಲಿನ ಬಡ್ಡಿ ದರ ಕಡಿತ: ಅ.1ರಿಂದ ಜಾರಿಗೆ

ನಮ್ಮ ದೇಶದಲ್ಲಿನೂರು ಜನರಿದ್ದಾರೆ ಎಂದುಕೊಳ್ಳಿ. ಅವರಲ್ಲಿಪ್ರತಿಯೊಬ್ಬರ ಹತ್ತಿರ ಹತ್ತು ರೂಪಾಯಿ ಇದೆ ಎಂದುಕೊಳ್ಳಿ. ಅಂದರೆ ನಮ್ಮ ದೇಶದಲ್ಲಿಇರುವ ಒಟ್ಟು ಹಣದ ಮೊತ್ತ ಸಾವಿರ. ಸೆಂಟ್ರಲ್‌ ಬ್ಯಾಂಕ್‌ ಮತ್ತೊಂದು ಸಾವಿರ ಮುದ್ರಿಸಿ ಪ್ರತಿಯೊಬ್ಬರಿಗೂ ತಲಾ ಹತ್ತು ರೂಪಾಯಿ ವಿತರಿಸಿತು ಎಂದುಕೊಳ್ಳಿ. ಮೌಲ್ಯ ವಿರುವುದು ಸರಕುಗಳಿಗೆ ಅದನ್ನು ಕೊಳ್ಳುವ ನೋಟಿಗಲ್ಲ! ನೀವೇನೋ ದಿನ ಒಪ್ಪೊತ್ತಿನಲ್ಲಿ ಹಣವನ್ನು ಮುದ್ರಿಸಿಬಿಡಬಹುದು. ಆದರೆ ಜಗತ್ತಿನಲ್ಲಿಲಭ್ಯವಿರುವ ಸರಕುಗಳನ್ನು ಹೇಗೆ ಹೆಚ್ಚಿಸುವಿರಿ? ಹೀಗಾಗಿ ನಿನ್ನೆ ಒಂದು ರೂಪಾಯಿಗೆ ಸಿಗುತ್ತಿದ್ದ ಕಾಫಿ ಇಂದು ಎರಡು, ನಾಳೆ ಮೂರು ರೂಪಾಯಿ ಆಗಬಹುದು. ಹೀಗೆ ಹೆಚ್ಚುವ ಬೆಲೆಯನ್ನು ಇನ್ಫ್ಲೇಶನ್‌ ಅಥವಾ ಹಣದುಬ್ಬರ ಎನ್ನುತ್ತಾರೆ. ಈ ಕಾರಣದಿಂದ ಬ್ಯಾಂಕ್‌ಗಳು ಮಿತಿ ಇಲ್ಲದೆ ಹಣವನ್ನು ಮುದ್ರಿಸುವುದಿಲ್ಲ.

ಆರ್ಥಿಕ ಪ್ರಗತಿಗೆ ಸುಧಾರಣಾ ಕ್ರಮಗಳು ಜಾರಿಗೆ ತರಲು ಸಿದ್ಧತೆ

ಮತ್ತೊಂದು ಕಾರಣ ಯಾವುದೇ ವಸ್ತು ಹೇರಳವಾಗಿ ಸಿಕ್ಕರೆ ಅದರ ಮೌಲ್ಯ ಕುಸಿಯುತ್ತದೆ. ವಿರಳವಾದಷ್ಟು ಮೌಲ್ಯ ಹೆಚ್ಚುತ್ತದೆ. ಹೇರಳವಾಗಿ ಸಿಗುವ ಟೊಮೆಟೊ ಬೆಲೆ ಕಡಿಮೆ. ವಿರಳವಾಗಿರುವ ವಜ್ರ, ಚಿನ್ನದ ಬೆಲೆ ಹೆಚ್ಚು. ಇದೆ ನಿಯಮ ಇಲ್ಲೂಅನ್ವಯವಾಗುತ್ತದೆ. ಹಣದ ಚಲಾವಣೆ ಹೆಚ್ಚಿದಷ್ಟೂ ಮೌಲ್ಯ ಕುಸಿಯುತ್ತದೆ. ಹೀಗಾಗಿ ಹೆಚ್ಚು ಹಣ ಮುದ್ರಿಸಿ ಹಂಚಲು ಸಾಧ್ಯವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ