ಆ್ಯಪ್ನಗರ

ನವೆಂಬರ್‌, ಡಿಸೆಂಬರ್‌ನಲ್ಲಿ 80,000 ಜನರನ್ನು ನೇಮಿಸಿಕೊಂಡ ಐಟಿ ಕಂಪನಿಗಳು

ಐಟಿ ವಲಯದಲ್ಲಿ ಮುಖ್ಯವಾಗಿ ಕಸ್ಟಮ್‌ ಅಪ್ಲಿಕೇಶನ್‌ ಡೆವಲಪ್‌ಮೆಂಟ್‌, ಡಿಜಿಟಲ್‌ ಎಂಜಿನಿಯರಿಂಗ್‌, ಪ್ರಾಡಕ್ಟ್ ಎಂಜಿನಿಯರಿಂಗ್‌, ಇನ್‌ಫ್ರಾಸ್ಟ್ರಕ್ಚರ್‌ ಸಪೋರ್ಟ್‌, ಬಿಪಿಎಂ ವಿಭಾಗದಲ್ಲಿ ಹೆಚ್ಚಿನ ಉದ್ಯೋಗ ನೇಮಕಾತಿಗಳು ನಡೆದಿವೆ.

THE ECONOMIC TIMES 8 Jan 2021, 9:20 pm
ಹೊಸದಿಲ್ಲಿ: ಐಟಿ ಕಂಪನಿಗಳು 2020ರ ಕೊನೆಯ ಎರಡು ತಿಂಗಳಿನಲ್ಲಿ 80,000 ಮಂದಿಗೆ ಹೊಸದಾಗಿ ಉದ್ಯೋಗಾವಕಾಶ ನೀಡಿವೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.
Vijaya Karnataka Web hire


ಕಸ್ಟಮ್‌ ಅಪ್ಲಿಕೇಶನ್‌ ಡೆವಲಪ್‌ಮೆಂಟ್‌, ಡಿಜಿಟಲ್‌ ಎಂಜಿನಿಯರಿಂಗ್‌, ಪ್ರಾಡಕ್ಟ್ ಎಂಜಿನಿಯರಿಂಗ್‌, ಇನ್‌ಫ್ರಾಸ್ಟ್ರಕ್ಚರ್‌ ಸಪೋರ್ಟ್‌, ಬಿಪಿಎಂ ವಿಭಾಗದಲ್ಲಿ ಹೆಚ್ಚಿನ ನೇಮಕಾತಿಗಳು ನಡೆದಿವೆ.

ಯುರೋಪ್‌ನಲ್ಲಿ ಭಾರತದ ಐಟಿಗೆ ಬೇಡಿಕೆ

ಭಾರತೀಯ ಐಟಿ ಕಂಪನಿಗಳಿಗೆ ಯುರೋಪಿನಲ್ಲಿ ಬೇಡಿಕೆ ಹೆಚ್ಚುತ್ತಿದೆ. ಟಿಸಿಎಸ್‌ (ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌), ಇನ್ಫೋಸಿಸ್‌ ಮತ್ತಿತರ ಐಟಿ ಕಂಪನಿಗಳು ಕಳೆದ ಕೆಲ ತಿಂಗಳುಗಳಿಂದ ಯುರೋಪಿನಲ್ಲಿ ಕೆಲ ದೊಡ್ಡ ದೊಡ್ಡ ಡೀಲ್‌ಗಳನ್ನು ಗೆದ್ದುಕೊಂಡಿವೆ.

ಕೊರೊನಾ ಬಿಕ್ಕಟ್ಟಿನ ನಡುವೆಯೂ ಟಿಸಿಎಸ್‌ಗೆ 8,701 ಕೋಟಿ ರೂ. ಲಾಭ
ಟಿಸಿಎಸ್‌ ಮತ್ತು ವಿಪ್ರೋ ಈಗಾಗಲೇ ಹಲವಾರು ಕಂಪನಿಗಳನ್ನು ಯುರೋಪಿನಲ್ಲಿ ಸ್ವಾಧೀನಪಡಿಸಿಕೊಂಡಿವೆ. ಜರ್ಮನಿಯಲ್ಲಿ ಟಿಸಿಎಸ್‌ ವಹಿವಾಟು 20 ಪರ್ಸೆಂಟ್‌ ವೃದ್ಧಿಸಿದೆ. ಮೂರನೇ ತ್ರೈಮಾಸಿಕ ವರದಿಯಲ್ಲಿಯೂ ಟಿಸಿಎಸ್‌ ಲಾಭ ನಿರೀಕ್ಷೆ ಮೀರಿ ಹೆಚ್ಚಾಗಿದೆ.

ಈ ಎಲ್ಲಾ ಬೆಳವಣಿಗೆಗಳಿಂದ ಐಟಿ ವಲಯ ಕೊರೊನಾ ಬಿಕ್ಕಟ್ಟನ್ನು ಎದುರಿಸಿ ನಿಂತಿರುವುದು ಸ್ಪಷ್ಟವಾಗಿದೆ. ಇದೀಗ ವಹಿವಾಟೂ ವೃದ್ಧಿಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ