ಆ್ಯಪ್ನಗರ

ನಿಶ್ಚಿತ ಠೇವಣಿಯಿಂದ 5 ಲಕ್ಷ ರೂ. ಬಡ್ಡಿ ಗಳಿಸುವವರ ಮೇಲೆ ಐ-ಟಿ ನಿಗಾ

ಆದಾಯ ತೆರಿಗೆ ಇಲಾಖೆಯು ನಿಶ್ಚಿತ ಠೇವಣಿಗಳಿಂದ 5 ಲಕ್ಷ ರೂಗೂ ಹೆಚ್ಚು ಆದಾಯ ಗಳಿಸುವವರ ಆದಾಯದ ಮೇಲೆ ನಿಗಾ ವಹಿಸಲು ನಿರ್ಧರಿಸಿದೆ.

TNN 29 Aug 2017, 8:51 am

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆಯು ನಿಶ್ಚಿತ ಠೇವಣಿಗಳಿಂದ 5 ಲಕ್ಷ ರೂ.ಗೂ ಹೆಚ್ಚು ಆದಾಯ ಗಳಿಸುವವರ ಆದಾಯದ ಮೇಲೆ ನಿಗಾ ವಹಿಸಲು ನಿರ್ಧರಿಸಿದೆ. ಇಂಥ ಆದಾಯಕ್ಕೆ ಸಂಬಂಧಿಸಿ ತೆರಿಗೆ ಪಾವತಿಯಾಗದೆ ಇರುವ ಸಾಧ್ಯತೆಯೂ ಇರಬಹುದು ಎಂಬ ಲೆಕ್ಕಾಚಾರದಲ್ಲಿ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

ಎಫ್‌ಡಿ ಮೂಲಕ ಉನ್ನತ ಮಟ್ಟದ ಆದಾಯ ಪಡೆಯುವವರು ಅದನ್ನು ಆದಾಯ ತೆರಿಗೆ ರಿಟನ್ಸ್‌ನಲ್ಲಿ, ತೆರಿಗೆಗೆ ಅರ್ಹ ಆದಾಯವೆಂದು ತೋರಿಸದೆ ಇರಲೂಬಹುದು ಎಂದು ಐ-ಟಿ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ನೆಲೆಯನ್ನು ವಿಸ್ತರಿಸುವ ಸರಕಾರದ ಕ್ರಮಗಳಲ್ಲಿ ಇದೂ ಒಂದಾಗಿದೆ. ಅನೇಕ ಮಂದಿ ವೃತ್ತಿಪರರು ತಮ್ಮ ಶುಲ್ಕಗಳನ್ನು ನಗದು ರೂಪದಲ್ಲಿ ಸ್ವೀಕರಿಸುತ್ತಾರೆ. ಹಾಗೂ ಐಷಾರಾಮಿ ಜೀವನ ನಡೆಸುತ್ತಿದ್ದರೂ, ತಮ್ಮ ನಿಖರ ಆದಾಯವನ್ನು ಐಟಿಆರ್‌ನಲ್ಲಿ ಬಹಿರಂಗಪಡಿಸುವುದಿಲ್ಲ . ಈ ಹಿನ್ನೆಲೆಯಲ್ಲಿ ನಿಗಾ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಯು ಎಫ್‌ಡಿಗಳ ಮೇಲಿನ ಟಿಡಿಎಸ್‌ (ಮೂಲದಲ್ಲಿಯೇ ತೆರಿಗೆ ಕಡಿತ) ಬಗ್ಗೆ ಬ್ಯಾಂಕ್‌ಗಳಿಂದಲೂ ಮಾಹಿತಿ ಪಡೆಯುತ್ತಿದೆ. ಇಂಥ ಸಂದರ್ಭಗಳಲ್ಲಿ ಅನೇಕ ಮಂದಿ ಶೇ.30ರ ತೆರಿಗೆ ಶ್ರೇಣಿಗೆ ಬರುತ್ತಿದ್ದರೂ ಶೇ.10ರ ತೆರಿಗೆ ಪಾವತಿಸಿರುವುದೂ ಇದೆ ಎನ್ನುತ್ತಾರೆ ಅಧಿಕಾರಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ