ಆ್ಯಪ್ನಗರ

ಟಿಸಿಎಸ್‌ನಲ್ಲೀಗ 103 ಕೋಟ್ಯಧಿಪತಿಗಳು

ಐಟಿ ಉದ್ಯಮದ ಬೃಹತ್‌ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸವೀರ್‍ಸಸ್‌ನಲ್ಲಿನ(ಟಿಸಿಎಸ್‌) ಉದ್ಯೋಗಿಗಳ ಪೈಕಿ ಕೋಟ್ಯಧಿಪತಿಗಳ ಸಂಖ್ಯೆ 2019ರಲ್ಲಿ 103ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲ, ಈ ಕೋಟ್ಯಧಿಪತಿಗಳಲ್ಲಿ ಟಿಸಿಎಸ್‌ನಲ್ಲಿಯೇ ವೃತ್ತಿ ಆರಂಭಿಸಿದವರ ಸಂಖ್ಯೆಶೇ.25ರಷ್ಟಿದೆ.

Vijaya Karnataka Web 15 Jun 2019, 5:00 am
ಬೆಂಗಳೂರು: ಭಾರತೀಯ ಐಟಿ ಉದ್ಯಮದ ಬೃಹತ್‌ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸವೀರ್‍ಸಸ್‌ನಲ್ಲಿನ(ಟಿಸಿಎಸ್‌) ಉದ್ಯೋಗಿಗಳ ಪೈಕಿ ಕೋಟ್ಯಧಿಪತಿಗಳ ಸಂಖ್ಯೆ 2019ರಲ್ಲಿ 103ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲ, ಈ ಕೋಟ್ಯಧಿಪತಿಗಳಲ್ಲಿ ಟಿಸಿಎಸ್‌ನಲ್ಲಿಯೇ ವೃತ್ತಿ ಆರಂಭಿಸಿದವರ ಸಂಖ್ಯೆಶೇ.25ರಷ್ಟಿದೆ.
Vijaya Karnataka Web it major tcs has 100 employees who earn over rs 1 crore annually
ಟಿಸಿಎಸ್‌ನಲ್ಲೀಗ 103 ಕೋಟ್ಯಧಿಪತಿಗಳು


2018-19ನೇ ಸಾಲಿನಲ್ಲಿ ಟಿಸಿಎಸ್‌ ಸಿಇಒ ರಾಜೇಶ್‌ ಗೋಪಿನಾಥನ್‌ ಅವರು 16.2 ಕೋಟಿ ರೂ. ವಾರ್ಷಿಕ ವೇತನ ಪಡೆದಿದ್ದಾರೆ. ಕಂಪನಿಯ ಸಿಒಒ ಎನ್‌ಜಿ ಸುಬ್ರಮಣಿಯಮ್‌ 11.61 ಕೋಟಿ ರೂ., ಬ್ಯುಸಿನೆಸ್‌ ಆ್ಯಂಡ್‌ ಟೆಕ್ನಾಲಜಿ ಮುಖ್ಯಸ್ಥ ಕೃಷ್ಣನ್‌ ರಾಮಾನುಜಮ್‌ 4.1 ಕೋಟಿ ರೂ., ಮುಖ್ಯ ತಾಂತ್ರಿಕ ಅಧಿಕಾರಿ ಕೆ.ಅನಂತ್‌ ಕೃಷ್ಣನ್‌ 3.5 ಕೋಟಿ ರೂ., ಕಂಪನಿಯ ಬ್ಯಾಂಕಿಂಗ್‌, ಫೈನಾನ್ಸಿಯಲ್‌ ಸವೀರ್‍ಸಸ್‌ ಆ್ಯಂಡ್‌ ಇನ್ಷೂರೆನ್ಸ್‌ ಬ್ಯುಸಿನೆಸ್‌ನ ಮುಖ್ಯಸ್ಥ ಕೆ. ಕೃತಿವಾಸನ್‌ 4.3 ಕೋಟಿ ರೂ., ಟಿಸಿಎಸ್‌ ಲೈಫ್‌ ಸೈನ್ಸಸ್‌ ಮುಖ್ಯಸ್ಥ ದೇವಶಿಶ್‌ ಘೋಷ್‌ 4.7 ಕೋಟಿ ರೂ., ರೀಟೇಲ್‌ ಆ್ಯಂಡ್‌ ಕನ್ಷೂಮರ್‌ ಪ್ರಾಡಕ್ಟ್ಸ್ನ ಮಾಜಿ ಮುಖ್ಯಸ್ಥ ಪ್ರತೀಕ್‌ ಪಾಲ್‌ 4.3 ಕೋಟಿ ರೂ., ಟಿಸಿಎಸ್‌ನ ಫೈನಾನ್ಸ್‌ ವಿಭಾಗದ ಉಪಾಧ್ಯಕ್ಷ ಬರಿಂದ್ರ ಸನ್ಯಾಲ್‌ 1 ಕೋಟಿ ರೂ. ವೇತನ ಪಡೆದಿದ್ದು, ಕಂಪನಿಯ ಕೋಟ್ಯಧಿಪತಿಗಳಲ್ಲಿ ಅಗ್ರರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ