ಆ್ಯಪ್ನಗರ

ಜೆಟ್‌ ಏರ್‌ವೇಸ್‌ ಸಿಬ್ಬಂದಿಗೆ ಇತರ ಏರ್‌ಲೈನ್ಸ್‌ಗಳಲ್ಲಿ ಉದ್ಯೋಗ

ಜೆಟ್‌ ಏರ್‌ವೇಸ್‌ನಲ್ಲಿರುವ ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವ ಆತಂಕ ಪಡಬೇಕಿಲ್ಲ. ಇತರ ಏರ್‌ಲೈನ್ಸ್‌ಗಳಲ್ಲಿ ಅವರಿಗೆ ಕೆಲಸ ಸಿಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜಯಂತ್‌ ಸಿನ್ಹಾ ಭರವಸೆ ನೀಡಿದ್ದಾರೆ.

Vijaya Karnataka Web 21 Apr 2019, 5:00 am
ಹೊಸದಿಲ್ಲಿ : ಜೆಟ್‌ ಏರ್‌ವೇಸ್‌ನಲ್ಲಿರುವ ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವ ಆತಂಕ ಪಡಬೇಕಿಲ್ಲ. ಇತರ ಏರ್‌ಲೈನ್ಸ್‌ಗಳಲ್ಲಿ ಅವರಿಗೆ ಕೆಲಸ ಸಿಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜಯಂತ್‌ ಸಿನ್ಹಾ ಭರವಸೆ ನೀಡಿದ್ದಾರೆ.
Vijaya Karnataka Web jet airways employees will be absorbed by other airlines jayant sinha
ಜೆಟ್‌ ಏರ್‌ವೇಸ್‌ ಸಿಬ್ಬಂದಿಗೆ ಇತರ ಏರ್‌ಲೈನ್ಸ್‌ಗಳಲ್ಲಿ ಉದ್ಯೋಗ


ಜೆಟ್‌ ಏರ್‌ವೇಸ್‌ನಲ್ಲಿರುವ ಅರ್ಹ ಹಾಗೂ ಪ್ರತಿಭಾವಂತ ಉದ್ಯೋಗಿಗಳಿಗೆ ಇತರ ಏರ್‌ಲೈನ್ಸ್‌ಗಳಲ್ಲಿ ಕೆಲಸ ಸಿಗುವುದು ಮುಖ್ಯ. ಅಂಥ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿವೆ. ದೇಶದ ವೈಮಾನಿಕ ಮಾರುಕಟ್ಟೆ ಬೆಳೆಯುತ್ತಿದ್ದು, ಉದ್ಯೋಗಿಗಳು ಆತಂಕಪಡಬೇಕಾಗಿಲ್ಲ ಎಂದು ಜಯಂತ್‌ ಸಿನ್ಹಾ ಹೇಳಿದ್ದಾರೆ. ಮುಕ್ತ ಮಾರುಕಟ್ಟೆಯ ವ್ಯವಸ್ಥೆಯೇ ಹೀಗೆ. ಇಲ್ಲಿ ಉದ್ಯೋಗಿಗಳು ಕಡಿಮೆ ಸ್ಪರ್ಧಾತ್ಮಕತೆಯ ಕಂಪನಿಗಳಿಂದ ಹೆಚ್ಚಿನ ಸ್ಪರ್ಧಾತ್ಮಕತೆಯ ಕಂಪನಿಗಳಿಗೆ ವಲಸೆ ಹೋಗುತ್ತಾರೆ ಎಂದಿದ್ದಾರೆ.

ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಸ್ಥಗಿತವಾದಾಗಲೂ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಆದರೆ ನಂತರ ಬಹುತೇಕ ಎಲ್ಲರಿಗೂ ಇತರ ಏರ್‌ಲೈನ್ಸ್‌ಗಳಲ್ಲಿ ಕೆಲಸ ಸಿಕ್ಕಿತು. ಹಾಗೂ ಅವರ ಕರಿಯರ್‌ ಅತ್ಯುತ್ತಮ ಸ್ಥಿತಿಯಲ್ಲಿದೆ. ಇದೇ ರೀತಿ ಜೆಟ್‌ ಏರ್‌ವೇಸ್‌ ಬಿಕ್ಕಟ್ಟಿನಿಂದ ಉದ್ಯೋಗ ಕಳೆದುಕೊಂಡವರಿಗೂ ಬೇರೆ ಕಡೆ ಉದ್ಯೋಗ ಸಿಗಲಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ