ಆ್ಯಪ್ನಗರ

ಎಸ್‌ಬಿಐ ಬಿಗಿ ಕ್ರಮ: ಜೆಟ್‌ ಏರ್‌ವೇಸ್‌ಗೆ ಇನ್ನಷ್ಟು ಸಂಕಷ್ಟ

ಸಾಲದ ಹೊರೆಯಿಂದ ತತ್ತರಿಸಿರುವ ಜೆಟ್‌ ಏರ್‌ವೇಸ್‌ಗೆ ಸಂಬಂಧಿಸಿದಂತೆ ಕಳೆದ 4 ವರ್ಷಗಳ ಫೋರೆನ್ಸಿಕ್‌ ಲೆಕ್ಕಪರಿಶೋಧನೆಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಆದೇಶಿಸಿದೆ.

Vijaya Karnataka Web 16 Dec 2018, 5:00 am
ಹೊಸದಿಲ್ಲಿ : ಸಾಲದ ಹೊರೆಯಿಂದ ತತ್ತರಿಸಿರುವ ಜೆಟ್‌ ಏರ್‌ವೇಸ್‌ಗೆ ಸಂಬಂಧಿಸಿದಂತೆ ಕಳೆದ 4 ವರ್ಷಗಳ ಫೋರೆನ್ಸಿಕ್‌ ಲೆಕ್ಕಪರಿಶೋಧನೆಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಆದೇಶಿಸಿದೆ. ಮಲ್ಯ ಒಡೆತನದ ಕಿಂಗ್‌ಫಿಶರ್‌ ಏರ್‌ಲೈನ್ಸ್‌ನ ಸಾಲದ ಬಿಕ್ಕಟ್ಟಿನಲ್ಲಿ ಎಡವಿದಂತೆಯೇ, ಜೆಟ್‌ ಏರ್‌ವೇಸ್‌ ವಿಚಾರದಲ್ಲೂ ಆಗದಂತೆ ಮುಂಜಾಗರೂಕತಾ ಕ್ರಮವನ್ನು ಎಸ್‌ಬಿಐ ತೆಗೆದುಕೊಂಡಿದೆ.
Vijaya Karnataka Web jet airways largest lender sbi orders forensic audit from fy15
ಎಸ್‌ಬಿಐ ಬಿಗಿ ಕ್ರಮ: ಜೆಟ್‌ ಏರ್‌ವೇಸ್‌ಗೆ ಇನ್ನಷ್ಟು ಸಂಕಷ್ಟ


ಜೆಟ್‌ ಏರ್‌ವೇಸ್‌ಗೆ 8,000 ಕೋಟಿ ರೂ.ಗೂ ಅಧಿಕ ಹಣವನ್ನು ದೇಶದ ಬೃಹತ್‌ ಬ್ಯಾಂಕ್‌ ಆದ ಎಸ್‌ಬಿಐ ವಿತರಿಸಿದೆ. ಜೆಟ್‌ ಏರ್‌ವೇಸ್‌ನ ಲೆಕ್ಕಪತ್ರಗಳ ಪರಿಶೋಧನೆಗೆ ಇವೈ ಕಂಪನಿಯನ್ನು ಎಸ್‌ಬಿಐ ನಿಯೋಜಿಸಿದೆ. 2014ರ ಏ.1ರಿಂದ 2018ರ ಮಾ.31ರ ವರೆಗಿನ ಲೆಕ್ಕಪತ್ರಗಳನ್ನು ಫೋರೆನ್ಸಿಕ್‌ ಆಡಿಟ್‌ಗೆ ಒಳಪಡಿಸಲಾಗುತ್ತದೆ. ಈಗಾಗಲೇ ಈ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಮೂಲಗಳು ಹೇಳಿವೆ.

ಕಳೆದ ಮೂರು ತ್ರೈಮಾಸಿಕಗಳಿಂದಲೂ ತಲಾ 1,000 ಕೋಟಿ ರೂ.ಗಳ ನಿವ್ವಳ ನಷ್ಟವನ್ನು ಜೆಟ್‌ ಏರ್‌ವೇಸ್‌ ಎದುರಿಸುತ್ತಿದೆ. ಇದರ ಮಾರಾಟದ ಪ್ರಯತ್ನಗಳೂ ನಡೆಯುತ್ತಿವೆ. ನಿರ್ವಹಣೆ ಬಂಡವಾಳದ ಕೊರತೆಯಿಂದಾಗಿ ಜೆಟ್‌ಏರ್‌ವೇಸ್‌ನ ಸಿಬ್ಬಂದಿಗೆ ವೇತನ ವಿತರಣೆಯಲ್ಲಿ ತೊಡಕಾಗುತ್ತಿದೆ.

ಏನಿದು ಫೋರೆನ್ಸಿಕ್‌ ಆಡಿಟ್‌?

ಫೋರೆನ್ಸಿಕ್‌ ಆಡಿಟ್‌ ಎಂದಾಕ್ಷಣ ಫೋರೆನ್ಸಿಕ್‌ ಸೈನ್ಸ್‌(ವಿಧಿ ವಿಜ್ಞಾನ) ಅಥವಾ ಕ್ರಿಮಿನಾಲಜಿ ಇಲ್ಲಿದೆ ಎಂದು ಭಾವಿಸಬಾರದು. ಫೋರೆನ್ಸಿಕ್‌ ಆಡಿಟ್‌ ಅಥವಾ ಫೋರೆನ್ಸಿಕ್‌ ಅಕೌಂಟಿಂಗ್‌ನಲ್ಲಿ ವಂಚನೆ ಅಥವಾ ಯಾವುದೇ ರೀತಿಯ ವೈಟ್‌-ಕಾಲರ್‌ ಕ್ರೈಮ್‌ ನಡೆದಿದ್ದರೆ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತದೆ. ಅಕೌಂಟಿಂಗ್‌ ಕೌಶಲದಿಂದ ಕಾನೂನಾತ್ಮಕ ಪ್ರಶ್ನೆಗಳ ಮೂಲಕ ಇದನ್ನು ನಿಭಾಯಿಸಲಾಗುತ್ತದೆ. ಇಲ್ಲಿ ಫೋರೆನ್ಸಿಕ್‌ ಆಡಿಟರ್‌ ಇಡೀ ಕಂಪನಿಯ ವ್ಯವಸ್ಥೆ, ನಿರ್ವಹಣೆಯಲ್ಲಿನ ದೋಷ, ವೈಯಕ್ತಿಕ ಲಾಭಕ್ಕೆ ಆಗಿರಬಹುದಾದ ಆಸ್ತಿಯ ದುರ್ಬಳಕೆ ಮತ್ತಿತರ ಅಂಶಗಳನ್ನು ವಿಶ್ಲೇಷಿಸುತ್ತಾರೆ. ಫೈನಾನ್ಸಿಯಲ್‌ ಆಡಿಟ್‌ ಮುಗಿದಾಗ, ಏನಾದರೂ ವಂಚನೆಯ ಸಂದೇಹ ಮೂಡಿದರೆ ಅದರ ಪತ್ತೆಗಾಗಿ ಫೋರೆನ್ಸಿಕ್‌ ಆಡಿಟ್‌ ಮಾಡಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ