ಆ್ಯಪ್ನಗರ

ಐಟಿ, ಬಿಪಿಒದಲ್ಲಿ ಉದ್ಯೋಗ ಅವಕಾಶಗಳು ಇಳಿಕೆ

ಮಾಹಿತಿ ತಂತ್ರಜ್ಞಾನ, ಬಿಪಿಒ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಇಳಿಕೆಯಾಗುತ್ತಿವೆ ಎಂದು ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜ್ಯುಕೇಶನ್‌ (ಎಐಸಿಟಿಇ) ಅಧ್ಯಕ್ಷ ಅನಿಲ್‌ ಸಹಸ್ರಾರಬುಧೆ ಹೇಳಿದ್ದಾರೆ.

Vijaya Karnataka 22 Jun 2018, 10:35 am
ಹೊಸದಿಲ್ಲಿ: ಮಾಹಿತಿ ತಂತ್ರಜ್ಞಾನ, ಬಿಪಿಒ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಇಳಿಕೆಯಾಗುತ್ತಿವೆ ಎಂದು ಆಲ್‌ ಇಂಡಿಯಾ ಕೌನ್ಸಿಲ್‌ ಫಾರ್‌ ಟೆಕ್ನಿಕಲ್‌ ಎಜ್ಯುಕೇಶನ್‌ (ಎಐಸಿಟಿಇ) ಅಧ್ಯಕ್ಷ ಅನಿಲ್‌ ಸಹಸ್ರಾರಬುಧೆ ಹೇಳಿದ್ದಾರೆ.
Vijaya Karnataka Web Job


ಮಾಹಿತಿ ತಂತ್ರಜ್ಞಾನ ಹಾಗೂ ಬಿಪಿಒ ವಲಯದಲ್ಲಿ ಹಿಂದಿನಂತೆ ವ್ಯಾಪಕ ಪ್ರಮಾಣದಲ್ಲಿ ಸಾಮೂಹಿಕ ನೇಮಕಾತಿಗಳು ನಡೆಯುತ್ತಿಲ್ಲ. ಭಾರಿ ಕೈಗಾರಿಕೆಗಳಲ್ಲಿ ಕೂಡ ಉದ್ಯೋಗ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಆದರೆ ಸಣ್ಣ ಮತ್ತು ಮಧ್ಯಮ ವಲಯದ ಉದ್ದಿಮೆಗಳಲ್ಲಿ ಆಶಾದಾಯಕ ಪರಿಸ್ಥಿತಿ ಇದೆ ಎಂದು ಅವರು ತಿಳಿಸಿದ್ದಾರೆ. ಐಟಿ ವಲಯದಲ್ಲಿ ಶೇ.30 ಹಾಗೂ ಬಿಪಿಒ ವಲಯದಲ್ಲಿ ಶೇ.30ರಷ್ಟು ಉದ್ಯೋಗಾವಕಾಶಗಳಿ ಇಳಿಕೆಯಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಈಗ ಸ್ಟಾರ್ಟಪ್‌ ಹಾಗೂ ಸಣ್ಣ, ಮಧ್ಯಮ ವಲಯಗಳಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ