ಆ್ಯಪ್ನಗರ

ಕರಾವಳಿ-ಬೆಂಗಳೂರು ವಿಮಾನ ಪ್ರಯಾಣಿಕರನ್ನು ಸುಲಿಗೆ ಮಾಡದಂತೆ ಸೂಚನೆ

ಪ್ರವಾಹಪೀಡಿತ ಕೇರಳ ಹಾಗೂ ಮಂಗಳೂರು ಮತ್ತು ಸಮೀಪದ ವಿಮಾನ ನಿಲ್ದಾಣಗಳ ಮಾರ್ಗದಲ್ಲಿ ಹಾರಾಟ ಮಾಡುವ ವಿಮಾನಗಳ ಏರ್‌ ಟಿಕೆಟ್‌ ದರಕ್ಕೆ ಗರಿಷ್ಠ ದರ 10,000 ರೂ.ಗಳ ಮಿತಿ ಇರಬೇಕು

Vijaya Karnataka 19 Aug 2018, 10:59 am
ಹೊಸದಿಲ್ಲಿ: ಪ್ರವಾಹಪೀಡಿತ ಕೇರಳ ಹಾಗೂ ಮಂಗಳೂರು ಮತ್ತು ಸಮೀಪದ ವಿಮಾನ ನಿಲ್ದಾಣಗಳ ಮಾರ್ಗದಲ್ಲಿ ಹಾರಾಟ ಮಾಡುವ ವಿಮಾನಗಳ ಏರ್‌ ಟಿಕೆಟ್‌ ದರಕ್ಕೆ ಗರಿಷ್ಠ ದರ 10,000 ರೂ.ಗಳ ಮಿತಿ ಇರಬೇಕು ಎಂದು ಕೇಂದ್ರ ಸಚಿವ ಸುರೇಶ್‌ ಪ್ರಭು ಅವರು ಏರ್‌ಲೈನ್ಸ್‌ಗಳಿಗೆ ಸೂಚಿಸಿದ್ದಾರೆ. ಸಮೀಪದ ಮಾರ್ಗಗಳಿಗೆ 8,000 ರೂ.ಗಳ ಮಿತಿ ಇರಬೇಕು ಎಂದೂ ತಿಳಿಸಿದ್ದಾರೆ.
Vijaya Karnataka Web air


ತಿರುವನಂತಪುರಂ, ಕ್ಯಾಲಿಕಟ್‌, ಕೊಯಮತ್ತೂರು ಮತ್ತು ಮಂಗಳೂರಿನಿಂದ ಹೋಗುವ ಮತ್ತು ಬರುವ ವಿಮಾನಗಳ 32 ನೇರ ಮಾರ್ಗಗಳ ವಿಮಾನ ಹಾರಾಟದ ಏರ್‌ ಟಿಕೆಟ್‌ ದರಗಳನ್ನು ಡಿಜಿಸಿಎ ನಿರಂತರವಾಗಿ ಪರಿಶೀಲಿಸುತ್ತಿದೆ ಎಂದು ಸುರೇಶ್‌ ಪ್ರಭು ಟ್ವಿಟರ್‌ ಮೂಲಕ ತಿಳಿಸಿದ್ದಾರೆ.

ಕೇರಳ ಹಾಗೂ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ ನೆರೆ ಸಂತ್ರಸ್ತರ ಪರಿಹಾರ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಸರಕಾರ ಈ ಕ್ರಮ ತೆಗೆದುಕೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ