ಆ್ಯಪ್ನಗರ

ಅನಿಲ್‌ ಜೈಲು ಪಾಲಾಗುವುದನ್ನು ತಪ್ಪಿಸಿದ್ದು ತಾಯಿ ಕೋಕಿಲಾಬೆನ್‌

ಮಾಧ್ಯಮ ವರದಿಗಳ ಪ್ರಕಾರ, ತಾಯಿ ಕೋಕಿಲಾಬೆನ್‌ ಅಂಬಾನಿ ಕಿವಿ ಮಾತಿನ ಅನ್ವಯ ಮುಕೇಶ್‌ ಅವರು ಅನಿಲ್‌ಗೆ ನೆರವು ನೀಡಲು ಮುಂದಾದರು.

Vijaya Karnataka 24 Mar 2019, 11:54 am
ಹೊಸದಿಲ್ಲಿ: ರಿಲಯನ್ಸ್‌ ಕಮ್ಯುನಿಕೇಷನ್ಸ್‌(ಆರ್‌ಕಾಮ್‌) ಮುಖ್ಯಸ್ಥ ಅನಿಲ್‌ ಅಂಬಾನಿ ಅವರು 459 ಕೋಟಿ ರೂ. ಸಾಲವನ್ನು ಎರಿಕ್ಸನ್‌ ಕಂಪನಿಗೆ ಸಕಾಲಕ್ಕೆ ತೀರಿಸಿ, 3 ತಿಂಗಳ ಜೈಲು ಶಿಕ್ಷೆಯಿಂದ ಪಾರಾಗಿದ್ದು ಹಳೆಯ ಸುದ್ದಿ. ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಅನಿಲ್‌ಗೆ ಆರ್ಥಿಕ ನೆರವನ್ನು ಹಿರಿಯ ಸಹೋದರ ಮುಕೇಶ್‌ ಅಂಬಾನಿ ನೀಡಿದ್ದಾರೆ. ಆದರೆ ಇದಕ್ಕೆ ಪ್ರೇರಣೆ ನೀಡಿದ್ದು ಯಾರು ಅನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
Vijaya Karnataka Web ambani


ಮಾಧ್ಯಮ ವರದಿಗಳ ಪ್ರಕಾರ, ತಾಯಿ ಕೋಕಿಲಾಬೆನ್‌ ಅಂಬಾನಿ ಕಿವಿ ಮಾತಿನ ಅನ್ವಯ ಮುಕೇಶ್‌ ಅವರು ಅನಿಲ್‌ಗೆ ನೆರವು ನೀಡಲು ಮುಂದಾದರು. ಸಕಾಲದಲ್ಲಿ ನೆರವು ನೀಡಿದ ಮುಕೇಶ್‌ ಮತ್ತು ಅವರ ಪತ್ನಿ ನಿತಾ ಅವರನ್ನು ಅನಿಲ್‌ ಸ್ಮರಿಸಿದ್ದು ಧನ್ಯವಾದವನ್ನೂ ಹೇಳಿದ್ದಾರೆ. ಕುಟುಂಬದ ಘನತೆಯನ್ನು ಉಳಿಸಿಕೊಳ್ಳಲು ಸಕಾಲಕ್ಕೆ ಸಿಕ್ಕಿದ ನೆರವಿಗೆ ಋಣಿ ಎಂದಿದ್ದಾರೆ.

ಎರಿಕ್ಸನ್‌ ಕಂಪನಿಗೆ ನೀಡಬೇಕಿದ್ದ ಸಾಲ ತೀರಿಸಲು ಅನಿಲ್‌ ಅಂಬಾನಿ ವಿಳಂಬ ಮಾಡುತ್ತಲೇ ಬಂದಿದ್ದರು. ನಾಲ್ಕು ವಾರಗಳ ಗಡುವಿನೊಳಗೆ ಸಾಲ ತೀರಿಸದೇ ಹೋದರೆ, 3 ತಿಂಗಳ ಜೈಲು ಶಿಕ್ಷೆ ಅನುಭವಿಸಲು ಸಜ್ಜಾಗಿ ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಫೆ.20ರಿಂದ ಅನಿಲ್‌ ಮತ್ತು ಮುಕೇಶ್‌ ಅಂಬಾನಿ ನಡುವೆ ಚರ್ಚೆಗಳು ನಡೆದಿದ್ದವು. ಪ್ರತ್ಯೇಕ ಉದ್ಯಮಗಳ ಮೂಲಕ ಬೇರೆಯಾಗಿದ್ದ ಅಂಬಾನಿ ಸಹೋದರರನ್ನು ತಾಯಿ ಕೋಕಿಲಾಬೆನ್‌ ಬೆಸೆದಿದ್ದರು. ಅವರ ಮಧ್ಯಸ್ಥಿಕೆಯಲ್ಲಿ ಸಾಲ ಪ್ರಕರಣ ಸುಸೂತ್ರವಾಗಿ ಬಗೆಹರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ